Jaganathadasara Tatva Suvali (ಜಗನ್ನಾಥದಾಸರ ತತ್ವ ಸುವ್ವಾಲಿ)

|| ಶ್ರೀ: ||
|| ಶ್ರೀಪತಿರ್ಮಾನದೋ ನ: ||
ಶ್ರೀ ಜಗನ್ನಾಥ ದಾಸಾರ್ಯ ವಿರಚಿತ

ತತ್ವ  ಸುವ್ವಾಲಿ

 || ಹರಿ: ಓಂ ||

ಗಣಪತಿ ಸ್ತೋತ್ರ

ರಾಗ – ಆನಂದ ಭೈರವಿ    ಏಕತಾಳ

ಅಂಬಿಕಾತನಯ ಭೂತಾಂಬರಾಧಿಪ ಸುರಕ- ದಂಬಸಂಪೂಜ್ಯ ನಿರವದ್ಯ |
ನಿರವದ್ಯ ನಿನ್ನ ಪಾ- ದಾಂಬುಜಗಳೆಮ್ಮ ಸಲಹಲಿ || 1 ||

ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಹಕ ಭುಜಗಕಟಿಸೂತ್ರ ಸುಚರಿತ್ರ |
ಸುಚರಿತ್ರ ತ್ವತ್ಪದಾಂಬುಜಗಳಿಗೆ ಎರಗಿ ಬನ್ನೈಪೆ || 2 ||

ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿಪತ್ತುಪಡಿಸುವ ಅಜ್ಞಾನ |
ಅಜ್ಞಾನ ಬಿಡಿಸಿ ಮಮ ಚಿತ್ತಮಂದಿರದಿ ನೆಲೆಗೊಳ್ಳೋ || 3 ||

ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿತ್ತಕೆ ತಂದು ಹರಿಯ ನೆನೆವಂತೆ |
ನೆನೆವಂತೆ ಕರುಣಿಸೋ ಅಕುಟಿಲಾತ್ಮಕನೆ ಅನುಗಾಲ || 4 ||

ಮಾತಂಗವರದ ಜಗನ್ನಾಥ ವಿಠ್ಠಲನ ಸಂಪ್ರೀತಿಂದ ಭಜಿಸಿ ಸಾರೂಪ್ಯ |
ಸಾರೂಪ್ಯವೈದಿ ವಿ- ಖ್ಯಾತಿಯುತನಾದೆ ಜಗದೊಳು || 5 ||

ಗ್ರಹಸ್ತೋತ್ರಗಳು

ಶ್ರೀ ಸೂರ್ಯದೇವರ ಸ್ತೋತ್ರ

ಆದಿತ್ಯ ತ್ವತ್ಪಾದಯುಗಳಕೆ ಅಭಿವಾದನವ ಮಾಳ್ಪೆ ಅನುದಿನ |
ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || 6 ||

ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸರ್ವಜ್ಞ ನೀನೆಂದು ಸರ್ವತ್ರ |
ಸರ್ವತ್ರ ಎನಗೆ ಬ್ರಹ್ಮಜ್ಞಾನ ಭಕುತಿ ಕರುಣಿಸೋ || 7 ||

ಸೂರಿಗಮ್ಯನೆ ವಾಕ್‍ಶರೀರಬುದ್ಧಿಜವಾದಪಾರದೋಷಗಳ ಎಣಿಸದೆ |
ಎಣಿಸದೆ ಭಗವಂತನಾರಾಧನೆಯನಿತ್ತು ಕರುಣಿಸೊ || 8 ||

ಶ್ರೀ ಚಂದ್ರದೇವರ ಸ್ತೋತ್ರ

ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹಪರಿಹರಿಸಿ ಮನದಲ್ಲಿ |
ಮನದಲ್ಲೆನಗೆ ಗರುಡವಾಹನನ ಸ್ಮರಣೆಯನು ಕರುಣಿಸೋ || 9 ||

ಕ್ಷೀರಾಬ್ಧಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ |
ಆವೇಶಪಾತ್ರ ಪರಿಹಾರ ಗೈಸೆನ್ನ ಭವತಾಪ || 10 ||

ದತ್ತದೂರ್ವಾಸಾನುಜಾತ್ರಿ ಸಂಭವನೆ ತ್ವದ್ಭೃತ್ಯನಾನಯ್ಯ ಎಂದೆಂದೂ |
ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದೆನ್ನ ಸಂತೈಸೋ || 11 ||

ಶ್ರೀ ಅಂಗಾರಕಸ್ತುತಿ

ಕೋಲಭೂನಂದನ ಪ್ರವಾಳಸಮವರ್ಣ ಕರವಾಳ ಸಮಖೇಟ ನಿಶ್ಶಂಕ |
ನಿಶ್ಶಂಕಪಾಣಿ ಗುರುಮೌಳಿ ನೀ ಎನ್ನ ಸಂತೈಸೊ || 12 ||

ಮಂಗಳಾಹ್ವಯನೆ ಸರ್ವೇಙ್ಗುತಜ್ಞನೆ ಅಂತರಂಗದಲಿ ಹರಿಯ ನೆನೆವಂತೆ |
ನೆನೆವಂತೆ ಕರುಣಿಸೊ ಅಂಗಾರವರ್ಣ ಅನುದಿನ || 13 ||

ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೇ ಎಂದೆಂದು |
ಎಂದೆಂದು ಸಜ್ಜನರ ಕಾಮಿತಾರ್ಥವನು ಕರುಣಿಸೊ || 14 ||

ಶ್ರೀ ಬುಧಸ್ತುತಿ

ಬುಧನೆ ನೀ ಸುಗುಣವಾರಿಧಿ ಎಂದು ಬಿನ್ನೈಪೆ ಕ್ಷುಧೆಯ ಪರಿಹರಿಸಿ ಸುಜ್ಞಾನ |
ಸುಜ್ಞಾನ ಸದ್ಭಕ್ತಿಸುಧೆಯ ಪಾನವನು ಕರುಣಿಸೊ || 15 ||

ಚಂದ್ರನಂದನ ಸತತ ವಂದಿಸುವೆ ಮನ್ಮನದ ಸಂದೇಹ ಬಿಡಿಸಯ್ಯ ಮಮದೈವ |
ಮಮದೈವ ಸರ್ವ ಗೋವಿಂದನಹುದೆಂದು ತಿಳಿಸಯ್ಯ || 16 ||

ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರೊ ಸಜ್ಜನರ ಸನ್ಮಾರ್ಗ |
ಸನ್ಮಾರ್ಗತೋರಿ ಉದ್ಧಾರಗೈಸೆನ್ನ ಭವದಿಂದ || 17 ||

ಶ್ರೀ ಗುರುಸ್ತುತಿ

ನುತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನ ದುರ್ಮತಿಯ ಪರಿಹರಿಸಿ ಸುಜ್ಞಾನ |
ಸುಜ್ಞಾನವಿತ್ತು ಶ್ರೀಪತಿಯ ತೋರೆನ್ನ ಮನದಲ್ಲಿ || 18 ||

ಸುರರಾಜಗುರುವೆ ತ್ವಚ್ಚರಣಾರವಿಂದಗಳಿಗೆರಗಿ ಬಿನ್ನೈಪೆ ಇಳಿಯೊಳು |
ಇಳೆಯೊಳುಳ್ಳಖಿಳ ಬ್ರಾಹ್ಮಣರ ಸಂತೈಸೋ ದಯದಿಂದ || 19 ||

ತಾರಾರಮಣನೆ ಮದ್ಭಾರ ನಿನ್ನದು ಮಹಾಕಾರುಣಿಕ ನೀನೆಂದು ಬಿನ್ನೈಪೆ |
ಬಿನ್ನೈಪೆ ದುರಿತವ ನಿವಾರಿಸಿ ತೋರೋ ತವ ರೂಪ || 20 ||

ಶ್ರೀ ಶುಕ್ರ ಸ್ತುತಿ

ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ- ಚಕ್ರಾಬ್ಜಪಾಣಿ ಗುಣರೂಪ |
ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೋ ಪ್ರತಿದಿನ || 21 ||

ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾಗವತ ಭಾರತವೆ ಮೊದಲಾದ |
ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣಿಸೋ || 22 ||

ನಿಗಮಾರ್ಥಕೋವಿದನೆ ಭೃಗುಕುಲೋತ್ತಂಸ ಕೈಮುಗಿದು ಬೇಡುವೆನೋ ದೈವಜ್ಞ |
ದೈವಜ್ಞ ಹರಿಯ ಓಲಗದಲ್ಲಿ ಬುದ್ಧಿ ಇರಲೆಂದೂ || 23 ||

ಶ್ರೀ ಶನಿಸ್ತುತಿ

ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜಕೆರಗಿ ಬಿನ್ನೈಪೆ ಬಹುಜನ್ಮ |
ಬಹುಜನ್ಮಕೃತಪಾಪಪರಿಹಾರಮಾಡಿ ಸುಖವೀಯೋ || 24 ||

ಛಾಯಾತನುಜ ಮನ:ಕಾಯಕ್ಲೇಶಗಳಿಂದ ಆಯಾಸ ಪಡುವಂಥ ಸಮಯದಿ |
ಸಮಯದಲಿ ಲಕ್ಷ್ಮಿನಾರಾಯಣನ ಸ್ಮರಣೆ ಕರುಣಿಸೋ || 25 ||

ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ ಹೃದಯ ವದನದಲಿ ಹರಿಮೂರ್ತಿ |
ಹರಿಮೂರ್ತಿ ಕೀರ್ತನೆಗಳೊದಗಲೆನಗೆಂದು ಬಿನ್ನೈಪೆ || 26 ||

ಅಹಿಕಪಾರತ್ರಿಕದಿ ನೃಹರಿದಾಸರ ನವಗ್ರಹದೇವತೆಗಳು ದಣಿಸೋರೇ |
ದಣಿಸೋರೆ ಇವರನ್ನ ಅಹಿತರೆಂದೆನುತ ಕೆಡಬೇಡಿ || 27 ||

ಜಗನ್ನಾಥ ವಿಠ್ಠಲನ ಬದಿಗರಿವರಹುದೆಂದು ಹಗಲಿರಳು ಬಿಡದೆ ನುತಿಸುವ |
ನುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು || 28 ||

ಶ್ರೀ ತುಲಸೀಸ್ತುತಿ

ಬೃಂದಾವನಿ ಜನನಿ ವಂದಿಸುವೆ ಸತತ ಜಲಂಧರನ ರಾಣಿ ಕಲ್ಯಾಣಿ |
ಕಲ್ಯಾಣಿ ತುಳಸಿನಿಜ ಮಂದಿರೆ ಎನಗೆ ದಯವಾಗೆ || 29 ||

ಜಲಜಾಕ್ಷನಮಲಕಜ್ಜಲಬಿಂದು ಪೀಯೂಷಕಲಶದಲಿ ಬೀಳೆ ಜನಿಸಿದಿ |
ಜನಿಸಿ ಹರಿಯಿಂದ ಶ್ರೀತುಲಸಿ ನೀನೆಂದು ಕರೆಸಿದಿ || 30 ||

ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ ನಾ ತುತಿಸಿ ಕೈಯ ಮುಗಿವೆನು |
ಮುಗಿವೆ ಎನ್ನಯ ಮಹಾಪಾತಕವ ಕಳೆದು ಪೆÇರೆಯಮ್ಮ || 31 ||

ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ಕಲುಷಕರ್ಮಗಳ ಎಣಿಸದೆ |
ಎಣಿಸದೆ ಸಂಸಾರ- ಜಲಧಿಯಿಂದೆಮ್ಮ ಕಡೆಹಾಯ್ಸು || 32 ||

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ- ಡಾಡಿದವ ನಿತ್ಯ ಹರಿಪಾದ |
ಹರಿಪಾದಕಮಲಗಳ ಕೂಡಿದವ ಸತ್ಯ ಎಂದೆಂದು || 33 ||

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿವಂದಿಸಿದ ಜನರು ಸುರರಿಂದ |
ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು || 34 ||

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳ ಪೂಜಿಪ |
ಪೂಜಿಪರಿಗೆ ಪರಮಮಂಗಲದ ಪದವಿತ್ತು ಸಲಹುವಿ || 35 ||

ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗನ್ನಾಥವಿಠ್ಠಲನ ಚರಣಾಬ್ಜ |
ಚರಣಾಬ್ಜ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ || 36 ||

ಶ್ರೀ ಮಹದೇವರ ಸ್ತುತಿ

ಚಂದ್ರಶೇಖರ ಸುಮನಸೇಂದ್ರಪೂಜಿತಚರಣಾಹೀಂದ್ರ ಪದಯೋಗ್ಯ ವೈರಾಗ್ಯ |
ವೈರಾಗ್ಯಪಾಲಿಸಮ- ರೇಂದ್ರ ನಿನ್ನಡಿಗೆ ಶರಣೆಂಬೆ || 37 ||

ನಂದಿವಾಹನ ವಿಮಲಮಂದಾಕಿನೀಧರನೆ ವೃಂದಾರಕೇಂದ್ರ ಗುಣಸಾಂದ್ರ |
ಗುಣಸಾಂದ್ರ ಎನ್ನ ಮನಮಂದಿರದಿ ನೆಲೆಸಿ ಸುಖವೀಯೋ || 38 ||

ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎನ್ನುತ್ತ ನೋಡಯ್ಯ ಶುಭಕಾಯ |
ಶುಭಕಾಯ ಭಕ್ತರಪ ಮೃತ್ಯು ಪರಿಹರಿಸಿ ಸಲಹಯ್ಯ || 39 ||

ನೀಲಕಂಧರ ರುಂಡಮಾಲಿ ಮೃಗವರಪಾಣಿ ಶೈಲಜಾರಮಣ ಶಿವರೂಪಿ |
ಶಿವರೂಪಿ ಎನ್ನವರ ಪಾಲಿಸೋ ನಿತ್ಯ ಪರಮಾಪ್ತ || 40 ||

ತ್ರಿಪುರಾರಿ ನಿತ್ಯ ಎನ್ನಪರಾಧಗಳ ನೋಡಿ ಕುಪಿತನಾಗದಲೆ ಸಲಹಯ್ಯ |
ಸಲಹಯ್ಯ ಬಿನ್ನೈಪೆ ಕೃಪಣವತ್ಸಲ ಕೃಪೆಯಿಂದ || 41 ||

ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ ಸಂಚಿತಾಗಾಮಿಪ್ರಾರಬ್ಧ |
ಪ್ರಾರಬ್ಧದಾಟಿಸು ವಿ- ರಿಂಚಿಸಂಭವನೆ ಕೃತಯೋಗ || 42 ||

ಮಾನುಷಾನ್ನವನುಂಡು ಜ್ಞಾನಶೂನ್ಯನು ಆದೆ ಏನುಗತಿ ಎನಗೆ ಅನುದಿನ |
ಅನುದಿನದಿ ನಾ ನಿನ್ನಧೀನದವನಯ್ಯ ಪ್ರಮಥೇಶ || 43 ||

ಅಷ್ಟಮೂರ್ತ್ಯಾತ್ಮಕನೆ ವೃಷ್ಣಿವರ್ಯನ ಹೃದಯಧಿಷ್ಠಾನದಲ್ಲಿ ಇರದೋರೋ |
ಇರದೋರು ನೀ ದಯಾ- ದೃಷ್ಟಿಯಲಿ ನೋಡೋ ಮಹದೇವ || 44 ||

ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು ಬಡವ ನಿನ್ನಡಿಗೆ ಬಿನ್ನೈಪೆ |
ಬಿನ್ನೈಪೆನೆನ್ನ ಮನ- ದೃಢವಾಗಿ ಇರಲಿ ಹರಿಯಲ್ಲಿ || 45 ||

ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪರಿಗ್ರಹಿಸಿ ಎನ್ನ ಸಂತೈಸು |
ಸಂತೈಸು ಇಂದ್ರಿಯವ ನಿಗ್ರಹಿಪಶಕ್ತಿ ಕರುಣಿಸೋ || 46 ||

ಭಾಗೀರಥೀಧರನೆ ಭಾಗವತಜನರ ಹೃದ್ರೋಗ ಪರಿಹರಿಸಿ ನಿನ್ನಲ್ಲಿ |
ನಿನ್ನಲ್ಲಿ ಭಕ್ತಿ ಚೆನ್ನಾಗಿ ಕೊಡು ಎನಗೆ ಮರೆಯದೆ || 47 ||

ವ್ಯೋಮಕೇಶನೆ ತ್ರಿಗುಣನಾಮ ದೇವೋತ್ತಮ ಉಮಾಮನೋಹರನೆ ವಿರುಪಾಕ್ಷ |
ವಿರುಪಾಕ್ಷ ಮಮ ಗುರು ಸ್ವಾಮಿ ನೀ ಎನಗೆ ದಯವಾಗೊ || 48 ||

ಲೋಚನತ್ರಯ ನಿನ್ನ ಯಾಚಿಸುವೆ ಸಂತತವು ಖೇಚರೇಶನ ವಹನ ಗುಣರೂಪ |
ಗುಣರೂಪ ಕ್ರಿಯೆಗಳಾಲೋಚನೆಯ ಕೊಟ್ಟು ಸಲಹಯ್ಯ || 49 ||

ಮಾತಂಗಷಣ್ಮುಖರ ತಾತ ಸಂತತ ಜಗನ್ನಾಥವಿಠ್ಠಲನ ಮಹಿಮೆಯ |
ಮಹಿಮೆಯನು ತಿಳಿಸು ಸಂಪ್ರೀತಿಂದಲೆಮಗೆ ಅಮರೇಶ || 50 ||

ಭೂತನಾಥನ ಗುಣ ಪ್ರಭಾತಕಾಲದಲೆದ್ದು ಪ್ರೀತಿಪೂರ್ವಕದಿ ಪಠಿಸುವ |
ಪಠಿಸುವರ ಶ್ರೀಜಗನ್ನಾಥವಿಠ್ಠಲನು ಸಲಹುವ || 51 ||

ಶ್ರೀ ಪ್ರಾಣದೇವರ ಸ್ತುತಿ

ಹನುಮಭೀಮಾನಂದಮುನಿರಾಯ ಎನ್ನ ದು- ರ್ಗುಣಗಳೆಣಿಸದಲೆ ಸಲಹೆಂದು | ಸಲಹೆಂದು ಬಿನ್ನೈಪೆ ವಿ- ಜ್ಞಾನರೂಪ ವಿಜತಾತ್ಮ || 52 ||

ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತ
ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ-
ತ್ರಾಣ ಪಂಚಾಸ್ಯ ಪರಮೇಷ್ಠಿ || 53 ||

ಚತುರವಿಂಶತಿ ತತ್ವಪತಿಗಳಾಳುವ ಶಕ್ತ
ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ
ಕೃತಕೃತ್ಯನೆನಿಸೋ ಕೃಪೆಯಿಂದ || 54 ||

ತ್ರಿದಶತ್ರಿಂಶತಿರೂಪ ಸುದತಿಯಿಂದೊಡಗೂಡಿ |
ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರ
ಬಡಿಗನಾಗಿದ್ದು ಸಲಹುವಿ || 55 ||

ಕೋಟಿತ್ರಯಸ್ವರೂಪ ದಾಟಿಸು ಭವಾಬ್ಧಿಯ ನಿಶಾಟಕುಲವೈರಿ ಭಯಹಾರಿ |
ಭಯಹಾರಿ ರಣದೊಳು ಕಿ- ರೀಟಿಯನು ಕಾಯ್ದಿ ಧ್ವಜನಾಗಿ || 56 ||

ಮೂರೇಳುಸಾವಿರದ ಆರ್ನೂರುಮಂತ್ರ ಈರೇಳು ಜಗದಿ ಜನರೊಳು |
ಮಾಡಿ ಉ- ದ್ಧಾರಗೈಸುವಿಯೋ ಸುಜನರ || 57 ||

ಪವಮಾನರಾಯ ನೀ ತ್ರಿವಿಧಜೀವರೊಳಿದ್ದು ವಿವಿಧವ್ಯಾಪಾರ ನೀ ಮಾಡಿ |
ನೀ ಮಾಡಿ ಮಾಡಿಸಿಅವರವರ ಗತಿಯ ಕೊಡುತಿಪ್ಪ || 58 ||

ಪವಮಾನಗುರುವೆ ನಿನ್ನವರ ಸೇವಕ ನಾನು ಶ್ರವಣಮನನಾದಿಭಕುತಿಯ |
ಭಕುತಿ ನಿನ್ನಲ್ಲಿ ಮಾ- ಧವನಲ್ಲಿ ಕೊಟ್ಟು ಸಲಹಯ್ಯ || 59 ||

ಮಿಶ್ರಜೀವರೊಳಗಿದ್ದು ಮಿಶ್ರಜ್ಞಾನವನಿತ್ತು ಮಿಶ್ರಸಾಧನವ ನೀ ಮಾಡಿ |
ನೀ ಮಾಡಿ ಮಾಡಿಸಿ ಮಿಶ್ರಗತಿಗಳನೇ ಕೊಡುತಿಪ್ಪಿ || 60 ||

ಅನಿಲದೇವನೆ ದೈತ್ಯದನುಜಗಣದೊಳಗಿದ್ದು ಅನುಚಿತಕರ್ಮಗಳ ನೀ ಮಾಡಿ |
ನೀ ಮಾಡಿ ಮಾಡಿಸಿ ದಣಿಸುವಿಯೊ ಅವರ ದಿವಿಜೇಶ || 61 ||

ಕಾಲನಿಯಾಮಕನೆ ಕಾಲತ್ರಯಂಗಳಲಿ ಕಾಲಗುಣಕರ್ಮ ಅನುಸಾರ |
ಅನುಸಾರವಿತ್ತು ಪರಿ-ಪಾಲಿಸುವಿ ಜಗವ ಪವಮಾನ || 62 ||

ಆಖಣಾಶ್ಮನೆ ನಿನ್ನ ಸೋಕಲರಿಯೆವು ದೋಷ ಶ್ರೀಕಂಠಮುಖ್ಯಸುರರಿಗೆ |
ಸುರರಿಗಿಲ್ಲವೊ ಭಾರ- ತೀಕಾಂತ ನಿನಗೆ ಬಹದೆಂತೋ || 63 ||

ಕಲ್ಯಾದಿದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ |z
ಭಯದೂರ ಭಕ್ತರನು ಎಲ್ಲಕಾಲದಲಿ ಸಲಹಯ್ಯ || 64 ||

ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ- ದ್ಧಾರ ಮಾಡದಿರೆ ಭಕತರ |
ಭಕತರನು ಕಾವರಿನ್ನಾರು ಲೋಕದಲಿ ಜಯವಂತ || 65 ||

ತ್ರಿಜದ್ಗುರುವರೇಣ್ಯ ಋಜುಗಣಾಧಿಪ ಪದಾಂಬುಜಯಗ್ಮಕೆರಗಿ ಬಿನ್ನೈಪೆ |
ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸು || 66 ||

ಅನಿಲದೇವನೆ ನಿನ್ನ ಜನುಮಜನುಮಗಳಲ್ಲಿ ಇನಿತು ಬೇಡುವೆನು ಎಂದೆಂದು |
ಎಂದೆಂದು ವಿಷಯ ಚಿಂ- ತನೆಯ ಕೊಡದೆನ್ನ ಸಲಹೆಂದು || 67 ||

ತಾರತಮ್ಯಜ್ಞಾನ ವೈರಾಗ್ಯಸದ್ಭಕ್ತಿ ದಾರಢ್ಯವಾಗಿ ಇರಲೆಂದು |
ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು || 68 ||

ಮರಣಜನನಗಳು ಬಂದರೆ ಬರಲಿ ಪ್ರದ್ವೇಷ ಗುರುಹಿರಿಯರಲ್ಲಿ ಹರಿಯಲ್ಲಿ |
ಹರಿಯಲ್ಲಿ ಕೊಡದೆ ಉ- ದ್ಧರಿಸಬೇಕೆನ್ನ ಪರಮಾಪ್ತ || 69 ||

ವಿಷಯದಾಶೆಯ ಬಿಡಿಸಿ ಅಸುನಾಥ ಎನ್ನ ಪಾಲಿಸಬೇಕು ಮನಸು ನಿನ್ನಲ್ಲಿ |
ನಿನ್ನಲ್ಲಿ ನಿಲಿಸಿ ಸಂ- ತಸದಿ ಕಾಯೆನ್ನ ಮರುದೀಶ || 70 ||

ಅಂಜಿದವರಿಗೆ ವಜ್ರಪಂಜರನು ನೀನೆ ಪ್ರಭಂಜನಪ್ರಭುವೆ ಪ್ರತಿದಿನ |
ಪ್ರತಿದಿನದಿ ನಮ್ಮ ಭಯ ಭಂಜಿಸಿ ಕಾಯೋ ಬಹುರೂಪ || 71 ||

ಕಲಿಮುಖ್ಯದೈತ್ಯರುಪಟಳವ ಪರಿಹರಿಸಿ ಮತ್ಕುಲಗುರುವೆ ಸಲಹೋ ಕಾರುಣ್ಯ |
ಕಾರುಣ್ಯಸಿಂಧು ನಿನ್ನೊಲುಮೆಯೊಂದಿರಲು ಹರಿ ಕಾಯ್ವ || 72 ||

ಭಾರತೀರಮಣ ಮದ್ಭಾರ ನಿನ್ನದು ಎನ್ನಪಾರದೋಷಗಳ ಎಣಿಸದೆ |
ಎಣಿಸದೆ ಸಂತೈಸೊ ಕಾರುಣ್ಯಸಿಂಧು ಎಂದೆಂದು || 73 ||

ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕವಿಂಶತಿಸಹಸ್ರದಾರ್ನೂರು |
ಆರ್ನೂರು ಹಗಲಿರಳು ಶ್ವಾಸಜಪಮಾಡಿ ಹರಿಗೀವಿ || 74 ||

ಭವಿಷ್ಯದ್ವಿಧಾತ ತವ ಚರಣಸೇವಿಪೆ ನಾ ಶ್ರವಣಮನನಾದಿ ಭಕುತಿಯ |
ಭಕುತಿ ನಿನ್ನಲ್ಲಿ ಮಾಧವನಲ್ಲಿ ಕೊಟ್ಟು ಸಲಹಯ್ಯ || 75 ||

ತಾಸಿಗೊಂಭೈನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ |
ಸಲಹುವಿ ಶ್ರೀಭಾರ- ತೀಶ ನಿನ್ನಡಿಗೆ ಶರಣೆಂಬೆ || 76 ||

ಬಲದೇವ ನೀನೆ ಬೆಂಬಲವಾಗಿ ಇರಲು ದುರ್ಬಲಕಾಲಕರ್ಮ ಕೆಡಿಸೋದೆ |
ಕೆಡಿಸೋದೆ ನಿನ್ನ ಹಂಬಲು ಉಳ್ಳ ಜನರ ಜಗದೊಳು || 77 ||

ಹಾಲಾಹಲವನುಂಡು ಪಾಲಿಸಿದೆ ಜಗವ ಕರುಣಾಳು ಪವಮಾನ ವಿಜ್ಞಾನ |
ವಿಜ್ಞಾನಭಕುತಿ ಶ್ರೀಲೋಲನಲಿ ಕೊಟ್ಟು ಸಲಹಯ್ಯ || 78 ||

ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖದ್ಯೋತನಂದನನ ಪೆÇರೆದಂತೆ |
ಪೆÇರೆದಂತೆ ಪೆÇರೆಯನ್ನ ನೀನಿಂತು ಕ್ಷಣದಿ ಕೃಪೆಯಿಂದ || 79 ||

ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಅಪವರ್ಗದಲ್ಲಿ ಸುಖವೀಯೋ |
ಸುಖವೀಯೋ ನೀ ಭಾವಿ ಲೋ- ಕಪಿತಮಹನೆ ದಯವಾಗೊ || 80 ||

ಬುದ್ಧಿಬಲಕೀರ್ತಿಪರಿಶುದ್ಧಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ |
ಆಯುಷ್ಯವಿತ್ತಭಿವೃದ್ಧಿಯೈದಿಸುವಿ ಪವಮಾನ || 81 ||

ದ್ರೌಪದೀರಮಣ ವಿಜ್ಞಾಪಿಸುವೆ ನಿನ್ನಡಿಗೆ ತಾಪತ್ರಯಗಳ ಭಯಶೋಕ |
ಭಯಶೋಕ ಪರಿಹರಿಸಿ ಶ್ರೀಪತಿಯ ಧ್ಯಾನಸುಖವೀಯೋ || 82 ||

ಪಾಲ್ಗಡಲಮಗಳಾಳ್ದ ನಾಳ್ಗಳೊಳಗಪ್ರತಿಮ ಓಲೈಪ ಜನರ ಸಲಹೆಂದು |
ಸಲಹೆಂದು ಬಿನ್ನೈಪೆ ಫಲ್ಗುಣಾಗ್ರಜನೆ ಪ್ರತಿದಿನ || 83 ||

ಅದ್ವೈತಮತವಿಪಿನಪ್ರಧ್ವಂಸಕಾನಲನೆ ಮಧ್ಯಗೇಹಾಖ್ಯದ್ವಿಜಪತ್ನಿ |
ದ್ವಿಜಪತ್ನಿಜಠರದೊಳು ಉದ್ಭವಿಸಿ ಮೆರೆದೆ ಜಗದೊಳು || 84 ||

ಮಧ್ವಾಖ್ಯವೆಂಬ ಪ್ರಸಿದ್ಧಶ್ರುತಿಪ್ರತಿಪಾದ್ಯ ಮಧ್ವಮುನಿರಾಯ ತವ ಕೀರ್ತಿ |
ತವ ಕೀರ್ತಿ ವಾಣಿ- ರುದ್ರಾದಿಗಳಿಗರಿದು ತುತಿಸಲ್ಕೆ || 85 ||

ಹುಣಿಸೆಬೀಜದಿ ಪಿತನ ಋಣವ ತಿದ್ದಿದ ಪೂರ್ಣ- ಗುಣವಂತ ಗುರುವೆ ದಯವಾಗೊ |
ದಯವಾಗೊ ನೀನೆನ್ನ ಋಣಮೂರರಿಂದ ಗೆಲಿಸಯ್ಯ || 86 ||

ಯತ್ಯಾಶ್ರಮವ ವಹಿಸಿ ಶ್ರುತ್ಯರ್ಥಗ್ರಂಥಮೂವತ್ತೇಳು ರಚಿಸಿ ದಯದಿಂದ |
ದಯದಿಂದ ನಿನ್ನವರಿ- ಗಿತ್ತು ಪಾಲಿಸಿದಿ ಕರುಣಾಳು || 87 ||

ನಾಮತ್ರಯಾಂಕಿತ ಸುಧೀಮಂತಕುಲಗುರುವೆ ಶ್ರೀಮದಾಚಾರ್ಯ ಗುರುವರ್ಯ |
ಗುರುವರ್ಯ ಧರ್ಮಾರ್ಥಕಾಮಮೋಕ್ಷದನೆ ದಯವಾಗೋ || 88 ||

ಮೂರೇಳುಕುಮತಘೋರಾರಣ್ಯಪಾವಕ ಸಮೀರಾವತಾರ ಗಂಭೀರ |
ಗಂಭೀರ ತ್ವತ್ಪದಾಂಭೋರುಹಧ್ಯಾನ ಕರುಣಿಸೋ || 89 ||

ಈ ಚರಾಚರದೊಳು ಅನಾಚಾರದಲಿ ನಡೆವ ನೀಚಮಾಯಿಗಳ ಗೆಲಿದಿರ್ಪ |
ಗೆಲಿದಿರ್ಪ ಶ್ರೀಮದಾಚಾರ್ಯರಡಿಗಳಿಗೆ ಶರಣೆಂಬೆ || 90 ||

ನಿನಗಿಂದಧಿಕರಾದ ಅನಿಮಿತ್ತಬಾಂಧವರು ಎನಗಿಲ್ಲ ಶ್ರೀಮಧ್ವಮುನಿರಾಯ |
ಮುನಿರಾಯನಿರಲು ಯೋಚನೆಯಾಕೆ ಜಗದಿ ನಮಗಿನ್ನು || 91 ||

ಶ್ರೀಮತ್ಸಮಸ್ತಗುಣಧಾಮ ವಿಷ್ಣೋರಂಘ್ರಿ- ತಾಮರಸಮಧುಪ ಭವತಾಪ |
ಭವತಾಪ ಗುರುಸಾರ್ವಭೌಮ ಪರಿಹರಿಸಿ ಸಲಹಯ್ಯ || 92 ||

ಉದ್ಧರಿಪುದೆಮ್ಮ ಹನುಮದ್ಭೀಮಸೇನಗುರುಮಧ್ವಮುನಿರಾಯ ಕವಿಗೇಯ |
ಕವಿಗೇಯ ಎನ್ನ ದುರ್ಬುದ್ಧಿಗಳ ಬಿಡಿಸೋ ದಯದಿಂದ || 93 ||

ನಮೋನಮೋ ಭಾರತೀರಮಣ ಹನುಮದ್ಭೀಮ- ಯತಿಕುಲೋತ್ತಂಸಗುರುಮಧ್ವ |
ಗುರುಮಧ್ವ ದುರ್ವಾದಿ- ತಿಮಿರಮಾರ್ತಾಂಡ ಸುರಶೌಂಡ || 94 ||

ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಜನ್ಮ- ಜನ್ಮಕೃತಪಾಪ ಪರಿಹಾರ |
ಪರಿಹಾರವಾಗಿ ಸ- ದ್ಬ್ರಹ್ಮಪದದಲ್ಲಿ ಸುಖಿಸೋರು || 95 ||

ವಾಯುಹನುಮದ್ಭೀಮರಾಯಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾಧಿ |
ಜನ್ಮಾಧಿರೋಗಭಯವೀಯನೆಂದೆಂದೂ ಭಗವಂತ || 96 ||

ಮಾತರಿಶ್ವನೆ ಎನ್ನ ಮಾತ ಲಾಲಿಸಿ ಜಗನ್ನಾಥವಿಠ್ಠಲನ ಮನದಲ್ಲಿ |
ಮನದಲ್ಲಿ ತೋರಿ ಭವಭೀತಿ ಬಿಡಿಸಯ್ಯ ಭವ್ಯಾತ್ಮ || 97 ||

ಶ್ರೀ ಬ್ರಹ್ಮದೇವರ ಸ್ತುತಿ

ಸತ್ಯಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮೀ | ಮಹಲಕ್ಷ್ಮಿಜನನಿ ಪುರು_
ಷೋತ್ತಮನೆ ಜನಕನೆನಿಸುವ || 98 ||

ಚತುರದಶಲೋಕಾಧಿಪತಿಯೆನಿಪ ನಿನಗೆ ಸರ-
ಸ್ವತಿಯು ನಿಜರಾಣಿ ವಿಹಗೇಂದ್ರ | ವಿಹಗೇಂದ್ರ ಶೇಷಪಾ-
ರ್ವತಿಪರಾತ್ಮಜರು ಎನಿಸೋರು || 99 ||

ದ್ವಿಶತಕಲ್ಪದಿ ತಪವೆಸಗಿ ಅಸುದೇವ ಪೆÇಂ-
ಬಸಿರಪದ ಪಡೆದೆ ಹರಿಯಿಂದ | ಹರಿಯಿಂದ ಮಿಕ್ಕ ಸುಮ-
ನಸರಿಗುಂಟೇ ಈ ಭಾಗ್ಯ || 100 ||

ಋಜುಗಣಾಧೀಶ್ವರನೆ ಅಜಪದವಿಗೋಸುಗದಿ
ಭಜಿಸಿದವನಲ್ಲ ಹರಿಪಾದ | ಹರಿಪಾದಸೇವೆಯು ಸ-
ಹಜವೆ ಸರಿ ನಿನಗೆ ಎಂದೆಂದು || 101 ||

ಚತುರಾಸ್ಯ ತತ್ವದೇವತೆಗಳಂತರ್ಯಾಮಿ
ನುತಿಸಿ ಬಿನ್ನೈಪೆ ಅನುಗಾಲ |  ಅನುಗಾಲ ಭಕ್ತಿ ಶಾ-
ಶ್ವತವಾಗಿ ಇರಲಿ ಹರಿಯಲ್ಲಿ || 102 ||

ಸತ್ಯಲೋಕೇಶನೆ ಬಳಿತ್ಥಾದಿಶ್ರುತಿವಿನುತ
ಮೃತ್ಯುಂಜಯಾದಿ ಸುರಪೂಜ್ಯ | ಸುರಪೂಜ್ಯ ಭಕ್ತರ ವಿ-
ಪತ್ತು ಪರಿಹರಿಸಿ ಸಲಹಯ್ಯ || 103 ||

ಇನಿತಿದ್ದ ನೀ ಸಲಹದಿಪ್ಪುದು ನಮ್ಮ
ಅನುಚಿತನುಚಿತವೋ ನೀ ಬಲ್ಲಿ | ನೀ ಬಲ್ಲಿ ಶಾರದಾ-
ವನಿತೆಯ ರಮಣ ದಯವಾಗೋ || 104 ||

ಸತ್ವಾತ್ಮಕಶರೀರ ಮಿಥ್ಯಾದಿಮತಗಳೊಳು
ಉತ್ಪತ್ತಿ ಸಂಪತ್ತು ಕೊಡದಿರು | ಕೊಡದಿರೆನಗೆಂದೂ ಸಂ-
ಪ್ರಾರ್ಥಿಸುವೆ ನಿನಗೆ ನಮೊ ಎಂದು || 105 ||

ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ-
ನ್ನಾಥವಿಠ್ಠಲನ ಕರುಣಕ್ಕೆ | ಕರುಣಕ್ಕೆ ಕಾರಣೆಮ-
ಯಾತನೆಯು ಬರಲು ನಾನಂಜೆ || 106 ||

ಶ್ರೀ ಶ್ರೀಭೂದರ್ಗಾ ಸ್ತುತಿ

ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ- ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-
ನಾಭನ್ನ ಜಾಯೆ ವರವೀಯೆ || 107 ||

ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳ
ಬಗೆಯದಲೆ ಕಾಯೆ ವರವೀಯೆ | ವರವೀಯೆ ನಿನ್ನ ಪದ- ಯುಗಳಕ್ಕೆ ನಮಿಪೆ ಜಗದಂಬೆ || 108 ||

ದರಹಸಿತವದನಸುಂದರಿ ಕಮಲಸದನೆ ನಿ-
ರ್ಜರಸಿದ್ಧಗೀತೇ ವಿಧಿಮಾತೇ | ವಿಧಿಮಾತೆ ಲೋಕಸುಂ-
ದರಿಯೆ ನೀ ನೋಡೇ ದಯಮಾಡೇ || 109 ||

ಪ್ರಳಯಕಾಲದಿ ಪತಿಯು ಮಲಗಬೇಕೆನುತ ವಟ- ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ- ಗಳದೇವಿ ನಮಗೆ ದಯವಾಗೆ || 110 ||

ತಂತುಪಟದಂತೆ ಜಗದಂತರ್ಬಹಿರದಲ್ಲಿ ಕಾಂತನೊಡಗೂಡಿ ನೆಲೆಸಿರ್ಪೆ | ನೆಲೆಸಿರ್ಪೆ ನೀನೆನ್ನ ಅಂತರಂಗದಲಿ ನೆಲೆಗೊಳ್ಳೆ || 111 ||

ಈಶಕೋಟಿಪ್ರವಿಷ್ಟೆ ಈಶಭಿನ್ನಳೆ ಸರ್ವ-
ದೋಷವರ್ಜಿತಳೆ ವರದೇಶೇ | ವರದೇಶೇ ಪತಿಯೊಡನೆ
ವಾಸವಾಗೆನ್ನ ಮನದಲ್ಲಿ || 112 ||

ಆನಂದಮಯಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ-
ಪಾಣಿ ನೀನೆಮಗೆ ದಯವಾಗೆ || 113 ||

ಮಹದಾದಿತತ್ವಗಳ ಧರಿಸಿ ನಿನ್ನುದರದೊಳು
ದೃಹಿಣಾಂಡಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ || 114 ||

ಆವ ಬ್ರಹ್ಮಭವಾದಿ ದೇವರೆಲ್ಲರು ತವ ಕೃ-
ಪಾವಲೋಕನದಿ ಕೃತಕೃತ್ಯ |  ಕೃತಕೃತ್ಯರಾಗಿಹರು
ದೇವಿ ನಾ ಬಯಸುವದು ಅರಿದಲ್ಲ || 115 ||

ಪಕ್ಷೀಂದ್ರವಾಹನನ ವಕ್ಷಸ್ಥಳನಿವಾಸಿ
ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ-
ಳಾಯತಾಕ್ಷಿ ನೋಡು ದಯದಿಂದ || 116 ||

ಹಲವು ಮಾತೇಕೆ ಶ್ರೀಲಲನೆ ಜಗನ್ನಾಥವಿ |
ಠ್ಠಲನಿಂದ ಕೂಡಿ ಮನದಲ್ಲಿ |  ಮನದಲ್ಲಿ ವಾಸವಾ- ಗ್ಹಲವು ಕಾಲದಲಿ ಅವಿಯೋಗಿ || 117 ||

ಶ್ರೀ ರುಕ್ಮಿಣೀವಿಲಾಸ

ಫಣಿರಾಜಶಯನ ರುಕ್ಮಿಣಿದೇವಿಯೊಡಗೂಡಿ
ಮಣಿಮಂಚದ ಮೇಲೆ ಕುಳಿತಿರ್ದು | ಕುಳಿತಿರ್ದು ಸತಿಯೊಡನೆ ಅಣಕವಾಡಿದನು ಇನಿತೆಂದು || 118 ||

ಹೇ ರಾಜಕನ್ನಿಕೆ! ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ | ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ || 119 ||

ಶಿಶುಪಾಲಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ | ಸುಕುಮಾರಿ ಎನಲು ಪರ-
ವಶಳಾದಳಾಗ ಮಹಲಕ್ಷ್ಮಿ || 120 ||

ಈ ಮಾತ ಕೇಳಿ ಕೈಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು | ಭುಗಿಲೆಂದು ಮಲಗಿದಾ- ಕಾಮಿನಿಯ ಕಂಡ ಕಮಲಾಕ್ಷ || 121 ||

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ದ ಕಂಗಳಶ್ರುಗಳ ಒರಸುತ್ತ || 122 ||

ಸಲಿಗೆಮಾತುಗಳ ಬಗೆ ತಿಳಿಯದಲೆ ಹೀಗೆ ಚಂ- ಚಲವನೈದುವರೆ ಚಪಲಾಕ್ಷಿ |  ಚಪಲಾಕ್ಷಿ ಏಳೆಂದು
ಲಲನೆಯಳ ನಗಿಸಿ ನಗುತಿರ್ದ || 123 ||

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ-
ಷಾದಪಡಲ್ಯಾಕೆ ಅನುದಿನ | ಅನುದಿನ ಸ್ಮರಿಸುವರ
ಕಾಡುಕೊಂಡಿಹನೆ ಬಳಿಯಲ್ಲಿ || 124 ||

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ-
ವರ್ಗದ ನುಡಿಗೆ ಹರುಷದಿ | ಹರುಷದಿಂದಲಿ ಪಾದ- ಯುಗ್ಮಕೆರಗಿದಳು ಇನಿತೆಂದು || 125 ||

ಜಗದೇಕಮಾತೆ ಕೈಮುಗಿದು ಲಜ್ಜೆಯಲಾಗ
ಮುಗುಳುನಗೆಸೂಸಿ ಮಾತಾಡಿ | ಮಾತಾಡಿದಳು ಪತಿಯ
ಮೊಗವನೋಡುತಲಿ ನಳಿನಾಕ್ಷಿ || 126 ||

ಪರಿಪೂರ್ಣಕಾಮ ನೀ ಕರುಣದಿಂದೀಗ ಸ್ವೀ- ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದಕಾರಣಾ- ಕ್ಷರಳೆನಿಸಿಕೊಂಡೆ ಶ್ರುತಿಯಿಂದ || 127 ||

ಭುವನಾಧಿಪತಿ ನೀನು ಅವಿಯೋಗಿ ನಿನಗಾನು ಅವಿವೇಕಿನೃಪರ ಪತಿಯೆಂದು | ಪತಿಯೆಂದು ಬಗೆವೇನೇ
ಸವಿಮಾತಿದಲ್ಲ ಸರ್ವಜ್ಞ || 128 ||

ಭಗವಂತ ನೀನು ದುರ್ಭರದೇಹಗತರವರು
ತ್ರಿಗುಣವರ್ಜಿತವು ತವ ರೂಪ | ತವ ರೂಪ ಗುಣಗಳನು
ಪೆÇಗಳಲೆನ್ನಳವೆ ಪರಮಾತ್ಮ || 129 ||

ಭಾನು ತನ್ನಯ ಕಿರಣಪಾಣಿಗಳ ದೆಶೆಯಿಂದ
ಪಾನೀಯಜಗಳ ಅರಳಿಸಿ | ಅರಳಿಸಿ ಗಂಧವನಾ-
ಘ್ರಾಣಿಸಿದಂತೆ ಗ್ರಹಿಸಿದಿ || 130 ||

ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸಿ-
ಗೊಯ್ದು ಹಾಕಿದೆಯೊ ಪರಿಪಂಥಿ | ಪರಿಪಂಥಿನೃಪರನ್ನು
ಐದುವೆನೆ ನಿನ್ನ ಹೊರತಾಗಿ || 131 ||

ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ | ಸಂಹಾರಮಾಡುವೆನು
ದುರ್ಮದಾಂಧರನು ಬಗೆವೆನೆ || 132 ||

ಮಂಜುಲೋಕ್ತಿಯ ಕೇಳಿ ಅಂಜಲೇಕೆಂದು ನವ- ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಪೇಳಿದ ಧ-
ನಂಜಯಪ್ರಿಯ ಸಥೆಯಿಂದ || 133 ||

ನಿನಗೆ ಎನ್ನಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು | ಎಂದೆಂದು ಇಹುದಿದಕೆ ಅನುಮಾನವಿಲ್ಲ ವನಜಾಕ್ಷಿ || 134 ||

ದೋಷವರ್ಜಿತರುಕ್ಮಿನೀಶನ ವಿಲಾಸ ಸಂ-
ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ-
ಲಾಷೆ ಪೂರೈಸಿ ಸಲಹುವ || 135 ||

ನೀತಜನಕನು ಜಗನ್ನಾಥವಿಠ್ಠಲ ಜಗ-
ನ್ಮಾತೆಯೆನಿಸುವಳು ಮಹಲಕ್ಷ್ಮೀ | ಮಹಲಕ್ಷ್ಮಿಸುತ ಬ್ರಹ್ಮ-
ಭ್ರಾತನೆನಿಸುವನು ಗುರುರಾಯ || 136 ||

ಶ್ರೀ ಕೃಷ್ಣಸ್ತೋತ್ರ

ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯ
ಮಾಣವಕರೂಪ ವಸುದೇವ |  ವಸುದೇವತನಯ ಸು- ಜ್ಞಾನವನು ಕೊಟ್ಟು ಕರುಣಿಸೊ || 137 ||

ಆದಿನಾರಾಯಣನು ಭೂದೇವಿಮೊರೆಕೇಳಿ
ಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ || 138 ||

ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರ ಅಸುವಳಿದು ಪೆÇರೆದ ಜಗವನ್ನ || 139 ||

ವಾತರೂಪಿಲಿ ಬಂದ ಆ ತೃಣಾವರ್ತನ್ನ
ಪಾತಾಳಕಿಳುಹಿ ಮಡುಹಿದ | ಮಡುಹಿ ಮೊಲೆಯುಣಿಸಿದಾ
ಪೂತಣಿಯ ಕೊಂದ ಪುರುಷೇಶ || 140 ||

ದೇವಕೀಸುತನಾಗಿ ಗೋವುಗಳ ಕಾಯ್ದರೆ
ಪಾವಕನ ನುಂಗಿ ನಲಿವೋನೆ | ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೆÇನೆ || 141 ||

ಕುವಲಯಾಪೀಡನನು ಲವಮಾತ್ರದಲಿ ಕೊಂದು
ಶಿವನ ಚಾಪವನು ಮುರಿದಿಟ್ಟ | ಮುರಿದಿಟ್ಟ ಮುಷ್ಟಿಕನ
ಬವರದಲಿ ಕೆಡಹಿದ ಧರೆಯೊಳು || 142 ||

ಕಪ್ಪ ಕೊಡಲಿಲ್ಲೆಂದು ದರ್ಪದಲಿ ದೇವೇಂದ್ರ
ಗುಪ್ಪಿದನು ಮಳೆಯ ವ್ರಜದೊಳು | ವ್ರಜದೊಳು ಪರ್ವತವ
ಪುಷ್ಪದಂತೆತ್ತಿ ಸಹಹಿದ || 143 ||

ವಂಚಿಸಿದ ಹರಿಯೆಂದು ಸಂಚಿಂತೆಯಲಿ ಕಂಸ
ಮಂಚದ ಮೇಲೆ ಕುಳಿತಿರ್ದ |  ಕುಳಿತಿರ್ದ ಮದಕರಿಗೆ
ಪಂಚಾಸ್ಯನಂತೆ ಎರೆಗಿದ || 144 ||

ದುರ್ಧರ್ಷಕಂಸನ್ನ ಮಧ್ಯರಂಗದಿ ಕೆಡಹಿ
ಗುದ್ದಿಟ್ಟ ತಲೆಯ ಜನ ನೋಡೆ | ಜನ ನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ || 145 ||

ಉಗ್ರಸೇನಗೆ ಪಟ್ಟ ಶ್ರೀಘ್ರದಲಿ ಕಟ್ಟಿ ಕಾ- ರಾಗೃಹದಲ್ಲಿದ್ದ ಜನನಿಯ | ಜನನಿಜನಕರ ಬಿಡಿಸಿ
ಅಗ್ರಜನ ಕೂಡಿ ಹೊರವಂಟ || 146 ||

ಅಂಬುಜಾಂಬಕಿಗೊಲಿದು ಜಂಭಾರಿಪುರದಿಂದ ಕೆಂಬಲ್ಲನಮರ ತೆಗೆದಂಥ | ತೆಗೆದಂಥ ಕೃಷ್ಣನ ಕ- ರಾಂಬುಜಗಳೆಮ್ಮ ಸಲಹಲಿ || 147 ||

ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ-
ಮ್ಮಪ್ಪಗಿಂದಧಿಕ ದೊರೆಯುಂಟೆ || 148 ||

ಗಂಧವಿತ್ತಬಲೆಯಳ ಕುಂದನೆಣಿಸದೆ ಪರಮ-
ಸುಂದರಿಯ ಮಾಡಿ ವಶನಾದ | ವಶನಾದ ಗೋ-
ವಿಂದ ಗೋವಿಂದ ನೀನೆಂಥ ಕರುಣಾಳೋ || 149 ||

ಎಂದು ಕಾಂಬೆನೊ ನಿನ್ನ ಮಂದಸ್ಮಿತಾನನವ ಕಂದರ್ಪನಯ್ಯ ಕವಿಗೇಯ |  ಕವಿಗೇಯ ನಿನ್ನಂಥ
ಬಂಧುಗಳು ನಮಗಿರಲೊ ಅನುಗಾಲ || 150 ||

ರಂಗರಾಯನೆ ಕೇಳು ಶೃಂಗಾರಗುಣಪೂರ್ಣ
ಬಂಗಪಡಲಾರೆ ಭವದೊಳು | ಭವಬಿಡಿಸಿ ಎನ್ನಂತ- ರಂಗದಲಿ ನಿಂತು ಸಲಹಯ್ಯ || 151 ||

ದಾನವಾರಣ್ಯಕೆ ಕೃಶಾನು ಕಾಮಿತಕಲ್ಪ-
ಧೇನು ಶ್ರೀಲಕ್ಷ್ಮೀಮುಖಪದ್ಮ | ಮುಖಪದ್ಮನವಸುಸ- ದ್ಭಾನು ನೀನೆಮಗೆ ದಯವಾಗೊ || 152 ||

ತಾಪತ್ರಯಗಳು ಮಹದಾಪತ್ತು ಪಡಿಸೋವು
ಕಾಪಾಡು ಕಂಡ್ಯ ಕಮಲಾಕ್ಷ | ಕಮಲಾಕ್ಷ ಮೊರೆಯಿಟ್ಟು
ದ್ರೌಪದಿಯ ಕಾಯ್ದೆ ಅಳುಕದೆ || 153 ||

ಕರಣನಿಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾಪರಿಯಲ್ಲಿ | ಪರಿಯಲ್ಲಿ ಮಧ್ವೇಶ
ಮರುಳುಮಾಡುವುದು ಉಚಿತಲ್ಲ || 154 ||

ಮತದೊಳಗೆ ಮಧ್ವಮತ ವ್ರತದೊಳಗೆ ಹರಿದಿನವು
ಕಥೆಯೊಳಗೆ ಭಾಗವತಕಥೆಯೆನ್ನಿ | ಕಥೆಯೆನ್ನಿ ಮೂರ್ಲೋಕ-
ಕತಿಶಯ ಶ್ರೀಕೃಷ್ಣಪ್ರತಿಮೆನ್ನಿ || 155 ||

ನೀನಲ್ಲದನ್ಯರಿಗೆ ನಾನೆರಗೆನೋ ಸ್ವಾಮಿ
ದಾನವಾಂತಕನೆ ದಯವಂತ |  ದಯವಂತ ಎನ್ನಭಿ-
ಮಾನ ನಿನಗಿರಲೋ ದಯವಾಗೊ || 156 ||

ಲೆಕ್ಕವಿಲ್ಲದೆ ದೇಶ ತುಕ್ಕಿದರೆ ಫಲವೇನು
ಶಕ್ತನಾದರೆ ಮಾತ್ರ ಫಲವೇನು | ಫಲವೇನು ನಿನ್ನ ಸ- ದ್ಭಕ್ತರನು ಕಂಡು ನಮಿಸದೆ || 157 ||

ನರರ ಕೊಂಡಾಡಿ ದಿನ ಬರಿದೆ ಕಳೆಯಲುಬೇಡ
ನರನ ಸಖನಾದ ಶ್ರೀಕೃಷ್ಣ | ಶ್ರೀಕೃಷ್ಣ ಮೂರ್ತಿಯ ಚರಿತೆ ಕೊಂಡಾಡೋ ಮನವುಬ್ಬಿ || 158 ||

ಪಾಹಿ ಪಾಂಡವಪಾಲ ಪಾಹಿ ರುಕ್ಮಿಣಿಲೋಲ
ಪಾಹಿ ದ್ರೌಪದಿಯ ಅಭಿಮಾನ | ಅಭಿಮಾನ ಕಾಯ್ದ ಹರಿ ದೇಹಿ ಕೈವಲ್ಯ ನಮಗಿಂದು || 159 ||

ಪಾಹಿ ಕರುಣಾಕರನೆ ಪಾಹಿ ಲಕ್ಷ್ಮೀರಮಣ
ಪಾಹಿ ಗೋಪಾಲ ಗುಣಶೀಲ | ಗುಣಶೀಲ ಪಾಪಸಂ-
ದೋಹ ಕಳೆದೆನ್ನ ಸಲಹಯ್ಯ || 160 ||

ಏಕಾಂತಿಗಳ ಒಡೆಯ ಲೋಕೈಕರಕ್ಷಕಾ-
ನೇಕಜನವಂದ್ಯ ನಳಿನಾಕ್ಷ | ನಳಿನಾಕ್ಷ ನಿನ್ನ ಪಾ- ದಕ್ಕೆ ಕೈಮುಗಿವೆ ದಯವಾಗೋ || 161 ||

ಬಾಹಿರಂತರದಲ್ಲಿ ದೇಹಾಭಿಮಾನಿಗಳು
ನೀ ಹೇಳಿದಂತೆ ನಡಿಸೋರು |  ನಡಿಸೋರು ನುಡಿಸೋರು
ದ್ರೋಹಕ್ಕೆ ಎನ್ನ ಗುರಿಮಾಳ್ಪೆ || 162 ||

ಏಕಾದಶೇಂದ್ರಿಯಗಳೇಕಪ್ರಕಾರದಲಿ
ಲೋಕೈಕನಾಥ ನಿನ್ನಲ್ಲಿ | ನಿನ್ನಲ್ಲಿ ನಿಸ್ಮೃತಿಯ ಕೊಡಲು
ವೈಕುಂಠ ನಾನೊಲ್ಲೆ || 163 ||

ನಿನ್ನವರ ನೀ ಮರೆದರಿನ್ನು ಸಾಕುವರ್ಯಾರು
ಪನ್ನಂಗಶಯನ ಪುರುಷೇಶ |  ಪುರುಷೇಶ ಸತತ ಶರಣ- ರನು ಬಿಡುವೋದುಚಿತಲ್ಲ || 164 ||

ಸ್ವಚ್ಛಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ ಅಚ್ಚಮಡಿಯೆಂದು ಕರೆಸೋರು | ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ಎಮಗಿನ್ನು || 165 ||

ಆನಂದನಂದ ಪರಮಾನಂದ ರೂಪ ನಿ- ತ್ಯಾನಂದವರದ ಅಧಮರ | ಅಧಮರಿಗೆ ನಾರಾಯ- ಣಾನಂದಮಯನೆ ದಯವಾಗೊ || 166 ||

ಏನೆಂಬೆ ನಿನ್ನಾಟಕಾನಂದಮಯನೆ ಗುಣಿ-
ಗುಣಗಳೊಳಗಿದ್ದು ಗುಣಕಾರ್ಯ | ಗುಣಕಾರ್ಯಗಳ ಮಾಡಿ
ಪ್ರಾಣಿಗಳಿಗುಣಿಸುವಿ ಸುಖದು:ಖ || 167 ||

ಕುಟ್ಟಿ ಬೀಸಿ ಕುಯ್ದು ಸುಟ್ಟು ಬೇಯ್ಸಿದ ಪಾಪ ಕೆಟ್ಟುಪೆÇೀಪುದಕೆ ಬಗೆಯಿಲ್ಲ |  ಬಗೆಯಿಲ್ಲದದರಿಂದ
ವಿಠ್ಠಲನ ಪಾಡಿ ಸುಖಿಯಾಗು || 168 ||

ಶುಕನಯ್ಯ ನೀನೆ ತಾರಕನೆಂದು ನಿನ್ನ ಸೇ-
ವಕರು ಪೇಳುವುದು ನಾ ಕೇಳಿ | ನಾ ಕೇಳಿ ಮೊರೆಹೊಕ್ಕೆ
ಭಕುತವತ್ಸಲನೆ ದಯವಾಗೋ || 169 ||

ಎನ್ನ ಪೆÇೀಲುವ ಪತಿತರಿನ್ನಿಲ್ಲ ಲೋಕದೊಳು ಪತಿತಪಾ-
ವನ ನಿನಗೆ ಸರಿಯಿಲ್ಲ | ಸರಿಯಿಲ್ಲ ಲೋಕದೊಳು ಅನ್ಯಭಯ ಎನಗೆ ಮೊದಲಿಲ್ಲ || 170 ||

ನೀ ನುಡಿದು ನಡೆದಂತೆ ನಾ ನುಡಿದು ನಡೆವೆನೋ
ಜ್ಞಾನಿಗಳ ಅರಸ ಗುಣಪೂರ್ಣ | ಗುಣಪೂರ್ಣ ನೀನೆನ್ನ
ಹೀನತೆಯ ಮಾಡಿ ಬಿಡುವೊದೇ || 171 ||

ಮೂರು ಗುಣಗಳ ಮಾನಿ ಶ್ರೀರಮಾಭೂದುರ್ಗೆ
ನಾರೇರ ಮಾಡಿ ನಲಿದಾಡಿ |  ನಲಿದಾಡಿ ಜೀವಿಗಳ
ದೂರತರ ಮಾಡಿ ನಗುತಿರ್ಪೆ || 172 ||

ವಿಷಯದೊಳು ಮನವಿರಿಸಿ ವಿಷಯ ಮನದೊಳಗಿರಿಸಿ
ವಿಷಯೇಂದ್ರಿಯಗಳ ಅಭಿಮಾನಿ | ಅಭಿಮಾನಿ ದಿವಿಜರಿಗೆ
ವಿಷಯನಾಗದಲೆ ಇರುತಿರ್ಪೆ || 173 ||

ಲೋಕನಾಯಕನಾಗಿ ಲೋಕದೊಳು ನೀನಿದ್ದು
ಲೋಕಗಳ ಸೃಜಿಸಿ ಸಲಹುವಿ | ಸಲಹಿ ಸಂಹರಿಸುವ
ಲೋಕೇಶ ನಿನಗೆ ಎಣೆಗಾಣೆ || 174 ||

ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸುವಿ |  ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸುವಿ || 175 ||

ಏಸು ಜನ್ಮದ ಪುಣ್ಯ ತಾ ಸಮನಿಸಿತೊ ಎನಗೆ
ವಾಸುಕಿ ಶಯನ ಜನರೆಲ್ಲ | ಜನರೆಲ್ಲ ವೈಕುಂಠ- ದಾಸನೆಂದೆನ್ನ ತುತಿಸೋರು || 176 ||

ಮಣಿಕುಂದಣಗಳು ಕಂಕಣದಿ ಶೋಭಿಸುವಂತೆ ತೃಣದಿ ನಿನ್ನಖಿಳ ಶ್ರೀದೇವಿ |  ಶ್ರೀದೇವಿಸಹಿತ ನಿ- ರ್ಗುಣನು ಶೋಭಿಸುವಿ ಪ್ರತಿದಿನ || 177 ||

ಈತನ ಪದಾಂಬುಜ ವಿಧಾತೃಮೊದಲಾದ ಸುರ-
ವ್ರಾತ ಪೂಜಿಪುದು ಪ್ರತಿದಿನ |  ಪ್ರತಿದಿನದಿ ಶ್ರೀಜಗ-
ನ್ನಾಥವಿಠ್ಠಲನ ನೆನೆ ಕಂಡ್ಯ || 178 ||

ಶ್ರೀ ದಶಾವತಾರಸ್ತೋತ್ರ

ವೇದತತಿಗಳನು ಕದ್ದೊಯ್ದವನ ಕೊಂದು ಪ್ರಳ- ಯೋದಧಿ ಯೊಳಗೆ ಚರಿಸಿದಿ | ಚರಿಸಿ ವೈವಸ್ವತನ ಕಾಯ್ದ ಮಹಮಹಿಮ ದಯವಾಗೋ || 179 ||

ಮಂದ್ರರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || 180 ||

ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿಭೂವರಹ ದಯವಾಗೋ || 181 ||

ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹಿದಿ | ಸಲಹಿದಿ ನರಸಿಂಹ
ತಂದೆ ನೀನೆಮಗೆ ದಯವಾಗೋ || 182 ||

ವೈರೋಚನಿಯ ಭೂಮಿ ಮೂರುಪಾದವು ಬೇಡಿ ಈರಡಿಯೊಳಗಳದೆ ಭೂವ್ಯೋಮ | ಭೂವ್ಯೋಮವಳೆದ ಭಾ- ಗೀರಥಿಯ ಜನಕ ದಯವಾಗೋ || 183 ||

ಕುವಲಯಾಧೀಶ್ವರರ ಬವರಮುಖದಲಿ ಕೊಂದು ಅವನಿಭಾರವನು ಇಳುಹಿದ |  ಇಳುಹಿದ ಸ್ವಾಮಿಭಾ ರ್ಗವರಾಮ ಎಮಗೆ ದಯವಾಗೋ || 184 ||

ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದಿ
ದಿತಿಜರನು ಒರಿಸಿ ಸುಜನರ |  ಸುಜನರನು ಪೆÇರೆದ ರಘು
ಪತಿಯೆ ನೀನೊಲಿದು ದಯವಾಗೋ || 185 ||

ವಸುದೇವದೇವಕೀಬಸುರಿಲಿ ಜನಿಸಿದಿ
ವಸುಧೆಭಾರವನು ಇಳುಹಿದಿ |  ಇಳುಹಿ ಪಾಂಡವರ ಪೆÇೀ
ಷಿಸಿದ ಶ್ರೀಕೃಷ್ಣ ದಯವಾಗೋ || 186 ||

ಜಿನನೆಂಬ ದನುಜ ಸಜ್ಜನಕರ್ಮವನು ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ |  ದುರ್ಬುದ್ಧಿ ಕವಿಸಿದ
ವಿನುತ ಶ್ರೀಬುದ್ಧ ದಯವಾಗೋ || 187 ||

ಕಲಿಯ ವ್ಯಾಪಾರ ವೆಗ್ಗಳವಾಗೆ ತಿಳಿದು ಶಂ-
ಫಲಿ ಎಂಬ ಪುರದಿ ದ್ವಿಜನಲ್ಲಿ | ದ್ವಿಜನಲ್ಲಿ ಜನಿಸಿ ಕಲಿ-
ಮಲವ ಹರಿಸಿದ ಕಲ್ಕಿ ದಯವಾಗೋ || 188 ||

ಈ ರೀತಿ ಹತ್ತವತಾರದಲಿ ಸಜ್ಜನರ
ನೀ ರಕ್ಷಿಸಿದಿ ಸ್ವಾಮಿ ಜಗನ್ನಾಥ | ಜಗನ್ನಾಥ ವಿಠ್ಠಲನೆ ಉ- ದ್ಧಾರ ಮಾಡಯ್ಯ ಭವದಿಂದ || 189 ||

ಶ್ರೀ ವೇಂಕಟೇಶಸ್ತೋತ್ರ

ಶರಣಾಗತರ ಕಲ್ಪತರುವೆ ವೇಂಕಟಧರಾ-
ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜ ಯುಗಳ ಸಂ- ದರುಶನವನೀಯೋ ಎಂದೆಂದೂ || 190 ||

ವೇಂಕಟಾಚಲನಿಲಯ ಪಂಕಜೋದ್ಭವನಯ್ಯ
ಶಂಕರಪ್ರಿಯ ಕವಿಗೇಯ | ಕವಿಗೇಯ ನಿನ್ನ ಪದ- ಕಿಂಕರ ನೆನಿಸೋ ಶುಭಕಾಯ || 191 ||

ಸ್ವಾಮಿತೀರ್ಥನಿವಾಸ ಕಾಮಿತಪ್ರದ ಕುಲ-
ಸ್ವಾಮಿ ಸರ್ವಜ್ಞ ಸರ್ವೇಶ | ಸರ್ವೇಶ ಸುರಸಾರ್ವ-
ಭೌಮ ನೀನೆನಗೆ ದಯವಾಗೋ || 192 ||

ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ ತಾವಕರೊಳಗಿಟ್ಟು ಸಲಹಯ್ಯ || 193 ||

ಸತ್ಯಸಂಕಲ್ಪ ಜಗದತ್ಯಂತಭಿನ್ನ ಸ-
ರ್ವೋತ್ತಮ ಪುರಾಣಪುರುಶೇಷ | ಪುರುಶೇಷ ಸತತ ತ್ವ ದ್ಭೃತ್ಯನ್ನ ಕಾಯೋ ಕರುಣಾಳೋ || 194 ||

ಕೃತಿಪತಿಯೆ ನಿನ್ನ ಸಂಸ್ಮೃತಿಯೊಂದಿರಲಿ ಜನ್ಮ-
ಮೃತಿನರಕಭಯವು ಬರಲಂಜೆ | ಬರಲಂಜೆ ಎನಗೆ ಸಂ- ತತ ನಿನ್ನ ಸ್ಮರಣೆ ಕರುಣಿಸೋ || 195 ||

ಸುಚಿಸದ್ಮನೆ ಮನೋವಚನಾತ್ಮಕೃತಕರ್ಮ-
ನಿಚಯ ನಿನಗೀವೆ ಸುಚರಿತ್ರ |  ಸುಚರಿತ್ರ ಸುಗುಣಗಳ- ರಚನೆಸುಖವೀಯೋ ರುಚಿರಾಂಗ || 196 ||

ಹೃದಯದಲಿ ತವ ರೂಪ ವದನದಲಿ ತವ ನಾಮ ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ || 197 ||

ಸತತ ಸ್ಮರಿಸುವ ನಿನ್ನ ನುತಿಸಿ ಬೇಡಿ ಕೊಳುವೆ
ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜಭಾಗ-
ವತರ ಸಂಗವನೆ ಕರುಣಿಸೋ || 198 ||

ಝುಷಕೇತುಜನಕ ದುರ್ವಿಷಯಕೊಳಗಾಗಿ ಸಾ-
ಹಸಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿ-
ನ್ನೊಶಮಾಡಿಕೊಳ್ಳೋ ವನಜಾಕ್ಷ || 199 ||

ಮಲಮೂತ್ರರಕ್ತಕಶ್ಮಲದೇಹಪೆÇೀಶಣೆಗೆ
ಬಳಲಿದೆ ನಾ ನಿನ್ನ ಭಜಿಸದೇ | ಭಜಿಸದೆ ಪರರ ಬಾ ಗಿಲ ಕಾಯ್ದು ಕಳೆದೆ ದಿವಸವ || 200 ||

ಶ್ವಾನಸೂಕರನೀಚಯೋನಿಯೊಳು ಬರಲಂಜಿ
ಶ್ರೀನಾಥ ನಿನ್ನ ಸ್ಮೃತಿಸ್ವರ್ಗ | ಸ್ಮೃತಿಸ್ವರ್ಗಸುಖ ನಿನ- ಗಾನು ಬೇಡುವೆನು ಕರುಣಿಸೋ || 201 ||

ನಿನ್ನ ವಿಸ್ಮೃತಿ ಜನ್ಮಜನ್ಮಕ್ಕೆ ಕೊಡದಿರು
ಎನ್ನ ಕುಲದೈವ ಎಂದೆಂದು | ಎಂದೆಂದು ನಿನಗಾನು
ಬಿನ್ನೈಪೆ ಬಿಡದೆ ಇನಿತೆಂದು || 202 ||

ಪ್ರಕೃತಿಗುಣಗಳ ಕಾರ್ಯ ಸುಖದು:ಖಮೂಲ ಜಡ-
ಪ್ರಕೃತಿಗಭಿಮಾನೀ ಮಹಲಕ್ಷ್ಮೀ | ಮಹಲಕ್ಷ್ಮಿಪತಿ ನಿನ್ನ
ಭಕತ ನಾನಯ್ಯ ಎಂದೆಂದು || 203 ||

ಪುಣ್ಯಪಾಪಾದಿಗಳು ನಿನ್ನಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣಿಸೊ || 204 ||

ಇನಿತಿದ್ದ ಬಳಿಕ ಯೋಚನೆಯಾಕೆ ಗರುಡವಾ-
ಹನನೆ ಮಹಲಕ್ಷ್ಮೀನರಸಿಂಹ | ನರಸಿಂಹ ಬಿನ್ನೈಪೆ
ಘನತೆ ನಿನಗಲ್ಲ ಕರುಣಾಳು || 205 ||

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ || 206 ||

ಹಯವದನ ಸೃಷ್ಟಿಸ್ಥಿತಿಲಯಕಾರಣನು ನೀನೆ
ದಯವಾಗಲೆಮಗೆ ದುರಿತೌಘ | ದುರಿತೌಘಗಳು ಬಟ್ಟ-
ಬಯಲಾಗುತಿಹವೋ ಸ್ಮೃತಿಯಿಂದ || 207 ||

ಕಲುಷವರ್ಜಿತನೆ ಮಂಗಳಚರಿತ ಭಕ್ತವ-
ತ್ಸಲ ಭಾಗ್ಯಪುರುಷ ಬಹುರೂಪ | ಬಹುರೂಪ ಎನಗಚಂ- ಚಲಭಕುತಿ ನೀನೇ ಕರುಣಿಸೋ || 208 ||

ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ ಕಾಲಕಾಲದಲಿ ಸ್ಮರಿಸುವ | ಸ್ಮರಿಸಿ ಹಿಗ್ಗುವ ಭಾಗ್ಯ
ಪಾಲಿಸೋ ಎನಗೆ ಪರಮಾತ್ಮ || 209 ||

ಕನಸಿಲಾದರು ವಿಷಯನೆನೆಹನೀಯದೆ ಎನ್ನ
ಮನದಲ್ಲಿ ನೀನೇ ನೆಲೆಗೊಳ್ಳೋ | ನೆಲೆಗೊಳ್ಳೊ ಲೋಕಪಾ-
ವನಚರಿತ ಪಾರ್ಥಸಖ ಶ್ರೀಕೃಷ್ಣ || 210 ||

ಚತುರವಿಧಪುರುಷಾರ್ಥ ಚತುರಾತ್ಮ ನೀನಿರಲು
ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ- ರತಿಭಾಗ್ಯ ನೀನೆ ಕರುಣಿಸೋ || 211 ||

ಜಯ ಮತ್ಸ್ಯ ಕೂರ್ಮ ಜಯ ಜಯ ವರಹ ನರಸಿಂಹ
ಜಯತು ವಾಮನದೇವ ಭೃಗುರಾಮ | ಭೃಗುರಾಮ ರಘುರಾಮ
ಜಯ ಕೃಷ್ಣ ಬೌದ್ಧ ಕಲಿಹರ್ತಾ || 212 ||

ಜಯ ವಿಶ್ವ ತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ
ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ ಜಯತು ಅನಿರುದ್ಧ ಪ್ರದ್ಯುಮ್ನ || 213 ||

ಜಯತು ಸಂಕರ್ಷಣನೆ ಜಯ ವಾಸುದೇವನೆ
ಜಯಜಯತು ಶ್ರೀಲಕ್ಷ್ಮೀನಾರಾಯಣ | ನಾರಾಯಣಾನಂತ
ಜಯತು ಶ್ರೀಗೋವಿಂದ ಅಚ್ಯುತ || 214 ||

ಜಯ ಪೂರ್ಣಜ್ಞಾನಾತ್ಮ ಜಯ ಪೂರ್ಣಐಶ್ವರ್ಯ ಜಯ ಪ್ರಭಾಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ ಜಯಜಯ ಶಕ್ತ್ಯಾತ್ಮ ಕೃದ್ಧೋಲ್ಕ || 215 ||

ಜಯಜಯತು ಮಹೋಲ್ಕ ಜಯಜಯತು ವೀರೋಲ್ಕ ಜಯಜಯತು ದ್ಯುಲ್ಕ ಸಹಸ್ರೋಲ್ಕ | ಸಹಸ್ರೋಲ್ಕ ಜಯಜಯ ಜಯ ಜಗನ್ನಾಥವಿಠಲಾರ್ಯ || 216 ||

ಶ್ರೀ ಶ್ರೀನಿವಾಸಸ್ತೋತ್ರ

ಶ್ರೀನಿವಾಸನ ಪೆÇೀಲ್ವ ದೀನವತ್ಸಲರುಂಟೆ ದಾನಿಗಳುಂಟೆ ಜಗದೊಳು | ಜಗದೊಳು ಇಹರೆಂಬ ಜ್ಞಾನಿಗಳುಂಟೆ ಅನುಗಾಲ || 217 ||

ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ
ತಾ ನಮ್ಮನಗಲಿ ಸೈರಿಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗಲಿ || 218 ||

ಶ್ರೀನಾಥ ನಿನ್ನವರ ನಾನಾಪರಾಧಗಳ
ನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞ ಏನೆಂಬೆ ನಿನ್ನ ಕರುಣಕ್ಕೆ || 219 ||

ಅಚ್ಯುತನೆ ನಿನ್ನಂಥ ಹುಚ್ಚುದೊರೆಗಳ ಕಾಣೆ
ಕಚ್ಚಿ ಬೈದೊದ್ದ ಭಕತರ | ಭಕತರಪರಾಧಗಳ
ತುಚ್ಛಗೈದವರ ಸಲಹಿದಿ || 220 ||

ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ ಇಂದಿರಾರಾಧ್ಯ ಸಲಹೆಮ್ಮ || 221 ||

ಎನ್ನ ಪೆÇೀಲುವ ಭಕ್ತರನ್ನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ
ಬಿನ್ನೈಪೆನಿನ್ನೂ ಸಲಹೆಂದು || 222 ||

ಇಂದಿರಾಪತಿ ನೀನು ಮಂದಭಾಗ್ಯನು ನಾನು
ವಂದ್ಯನೋ ನೀನು ಸುರರಿಂದ | ಸುರರಿಂದ ನರರಿಂದ
ನಿಂದ್ಯನೋ ನಾನು ಜಗದೊಳು || 223 ||

ಶರಣು ಶರಣರ ದೇವ ಶರಣು ಸುರವರಮಾನ್ಯ
ಶರಣು ಶಶಿಕೋಟಿಲಾವಣ್ಯ | ಲಾವಣ್ಯಮೂರುತಿಯೆ
ಶರಣೆಂಬೆ ಸ್ವಾಮಿ ಕರುಣಿಸೋ || 224 ||

ಎನ್ನೊಳಿಪ್ಪ ಮಹಾತ್ಮ ಅನ್ಯರೊಳು ನೀನಿದ್ದು ಅನ್ಯೋನ್ಯವಾಗಿ ಮಮತೆಯ |  ಮಮತೆಯ ಕಲ್ಪಿಸಿ
ನಿನ್ನೊಳಗೆ ನೀನೇ ರಮಿಸುವಿ || 225 ||

ಪತಿತನಾನಾದರೂ ಪತಿತಪಾವನ ನೀನು ರತಿನಾಥಜನಕ ನಗಪಾಣಿ | ನಗಪಾಣಿ ನೀನಿರಲು ಇತರ ಚಿಂತ್ಯಾಕೋ ಎನಗಿನ್ನು || 226 ||

ನಡೆನುಡಿಗಳಪರಾಧ ಒಡೆಯ ನೀನೆಣಿಸಿದರೆ
ಬಡವ ನಾನೆಂತು ಬದುಕಲೋ | ಬದುಕಲೋ ಕರುಣಾಳು ಕಡೆಬೀಳ್ವದೆಂತೋ ಭವದಿಂದ || 227 ||

ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ
ಈಶ ನೀನೆಂಬೋ ನುಡಿ ಸಿದ್ಧ | ನುಡಿ ಸಿದ್ಧವಾಗಿರಲು- ದಾಸೀನ ಮಾಡಲುಚಿತಲ್ಲ || 228 ||

ಆವಯೋನಿಯೊಳಿರಿಸು ಆವ ಲೋಕದೊಳಿರಿಸು ಆವಾಗ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೋ ದೇವಕೀಕಂದ ದಯದಿಂದ || 229 ||

ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ-
ರ್ವೇಷ್ಟಮೂರುತಿಯೇ ಜನರಿಂದ | ಜನರಿಂದ ನುಡಿಸಿದ್ದು
ಇಷ್ಟವೇ ಕಾಣೋ ಎನಗಿನ್ನು || 230 ||

ಶರಣಪಾಲಕನೆಂಬ ಬಿರುದಿದ್ದಮೇಲಿನ್ನು
ಪೆÇರೆಯದಿರಲೆನ್ನ ನಗರೇನೊ | ನಗೆರೇನೊ ಮೂರ್ಲೋಕ- ದರಸ ನೀನಾಗಿ ಇರುತಿರ್ದು || 231 ||

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ- ದೇಯವೆಂತೆಂದು ಸುಖಿಸುವಿ || 232 ||

ಸರ್ವಸ್ವತಂತ್ರ ನೀನೋರ್ವನಲ್ಲದೆ ಮ- ತ್ತೋರ್ವರಿನ್ನುಂಟೇ ಜಗದೊಳು | ಜಗದೊಳಗಜಾದಿಗಳು ದರ್ವಿಯಂದದಲಿ ಚರಿಸೋರು || 233 ||

ಏನುಕೊಟ್ಟರು ಕೊಡೋ ಶ್ರೀನಿವಾಸನೆ ನಿನ್ನ-
ಧೀನದವನಯ್ಯ ಎಂದೆಂದು | ಎಂದೆಂದು ಸುಖದು:ಖ-
ಮಾನಾದಿಗಳಿಗೆ ಪ್ರಭು ನೀನು || 234 ||

ಮುನ್ನಾವ ಜನ್ಮದ ಪುಣ್ಯ ತಾ ಪಲಿಸಿತೋ
ನಿನ್ನಂಥ ಸ್ವಾಮಿ ಎನಗಾದಿ | ಎನಗಾದಿ ಅದರಿಂದ
ಧನ್ಯರೋ ನಮ್ಮ ಹಿರಿಯರು || 235 ||

ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು- ರ್ಜನರ ಸಂಗದೊಳು ಇರಲೇನು || 236 ||

ಬಿಂಬ ನೀನೆನಗೆ ಪ್ರತಿಬಿಂಬ ನಾ ನಿನಗೆ ಕ್ಷೀ- ರಾಂಬುಧಿ ಶಾಯಿ ನರಸಿಂಹ |  ನರಸಿಂಹ ನೀನಿರಲು
ಹಂಬಲಿಪುದ್ಯಾಕೆ ಜಗದೊಳು || 237 ||

ಏನುಮಾಡುವ ಕರ್ಮ ನೀನೆ ಮಾಡಿಪೆ ಎಂಬ ಜ್ಞಾನವೇ ಎನಗೆ ಜಿತವಾಗಿ |  ಜಿತವಾಗಿ ಇರಲಿ ಮ- ತ್ತೇನು ನಾನೊಲ್ಲೆ ನಿನ್ನಾಣೆ || 238 ||

ಅಪರಾದಿ ನಾನೆಂಬುದುಪಚಾರ ಮಾತ್ರ ನಿನ- ಗಪರಾಧವೆಂಬೋದಿಳೆಯೊಳು | ಇಳೆಯೊಳು ಇನ್ನುಂಟೆ ಅಪರಾಧಿ ಎಂಬೋದಪರಾಧ || 239 ||

ಎಲ್ಲಿ ಈಶತ್ವ ಮತ್ತಲ್ಲಿಹುದು ಕರ್ತೃತ್ವ
ಹುಲ್ಲುಮನುಜರಿಗೆ ಕರ್ತೃತ್ವ |  ಕರ್ತೃತ್ವವೆಂಬುದು
ಎಲ್ಲಿಹುದು ಬರಿದೆ ಅಪವಾದ || 240 ||

ಹಗಲು ಇರಳು ಸ್ಮರಣೆಯೊದಗುತಿರೆ ಜಿಹ್ವೆಯೊಳು
ಬಗೆಯಲಿನ್ನುಂಟೆ ಸಾಧನಗಳು | ಸಾಧನಗಳೇತಕ್ಕೆ
ಜಗದೊಳಗೆ ಇನ್ನು ಅವರಿಗೆ || 241 ||

ನಿನ್ನ ವಿಸ್ಮೃತಿಕೊಡುವ ಪುಣ್ಯಕರ್ಮಗಳೊಲ್ಲೆ
ನಿನ್ನನೇ ನೆನೆವ ಮಹಪಾಪ |  ಮಹಪಾಪ ಕರ್ಮಗಳು
ಜನ್ಮಜನ್ಮದಲಿ ಇರಲಯ್ಯ || 242 ||

ಗುಣಕಾಲಕರ್ಮಗಳ ಮನೆಮಾಡಿ ಜೀವರಿಗೆ
ಉಣಿಸುವಿ ನೀನೇ ಸುಖದು:ಖ | ಸುಖದು:ಖಮಿಶ್ರಫಲ ಉಣದೆ ಸರ್ವತ್ರ ಬೆಳಗುವಿ || 243 ||

ನಿನಗಸಮ್ಮತವಾದ ಅನಿಮಿಷೇಶನ ಲೋಕ ಎನಗ್ಹತ್ತದಯ್ಯ ಯದುನಾಥ | ಯದುನಾಥ ನೀನಿತ್ತ ಘನನರಕವೆನಗೆ ಪುರುಷಾರ್ಥ || 244 ||

ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳು
ನಾನೆಲ್ಲಿ ಕಾಣೆ ನರಸಿಂಹ | ನರಸಿಂಹ ನರಕ ಬಂ- ದೇನುಮಾಡುವುದೋ ಎನಗಿನ್ನು || 245 ||

ದ್ರುಹಿಣಪಿತ ನಿನ್ನವರ ಸಹವಾಸ ನಿನ್ನನು-
ಗ್ರಹವೆಂದು ತಿಳಿವೆ ಅನುಗಾಲ | ಅನುಗಾಲ ಸುಖವೀವ
ಮಹರಾದಿಲೋಕ ನಾನೊಲ್ಲೆ || 246 ||

ಎನಗೆ ದಾತನು ನೀನು ನಿನಗೆ ದೂತನು ನಾನು ಇನಿತಿದ್ದ ಬಳಿಕ ಅಧಮರ | ಅಧಮಮಾನವರನ್ನು ಅನುಸರಿಸಲ್ಯಾಕೋ ನಾನಿನ್ನು || 247 ||

ಪೂಜ್ಯಪೂಜಕ ನೀನು ಪೂಜೋಪಕರಣಸ್ಥ
ಮೂಜಗತ್ಪತಿಯೆ ನೀನಾಗಿ | ನೀನಾಗಿ ಭಕತರಿಗೆ
ನೈಜಸುಖವ್ಯಕ್ತಿ ಕೊಡುತಿರ್ಪೆ || 248 ||

ಸನ್ನಿಧಾನವು ನಿನ್ನದೆನ್ನಲಿ ಇರಲಾಗಿ
ಮನ್ನಿಸುತ್ತಿಹರು ಜನರೆಲ್ಲ | ಜನರೆಲ್ಲ ನಿನ್ನ ಕಾ- ರುಣ್ಯ ಕಾರಣವೋ ಕಮಲಾಕ್ಷ || 249 ||

ಏನು ಬಗೆಯಾದರೂ ನೀ ಸಲಹಬೇಕೆನ್ನ
ವಾಸವವಂದ್ಯ ವರದೇಶ | ವರದೇಶ ನಿನ್ನವರ
ದಾಸನಾನೆಂದು ದಯದಿಂದ || 250 ||

ಜ್ಞಾನಗಮ್ಯನೆ ಕೇಳು ನೀನರಿಯದಪರಾಧ
ನಾನೊಮ್ಮೆಮಾಡೆ ನಳಿನಾಕ್ಷ |  ನಳಿನಾಕ್ಷ ಕಾಯೊ ಕೊ-
ಲ್ಲೇನನ್ನ ಮಾಡೋ ಶರಣನ್ನ || 251 ||

ವಿಧಿನಿಷೇಧಗಳೆಂಬುದಧಮಾಧಿಕಾರಿಗ-
ಲ್ಲದೆ ನಿನ್ನ ನಾಮ ಸರ್ವತ್ರ |  ಸರ್ವತ್ರ ಚಿಂತಿಪ
ಬುಧರಿಗಿನ್ನುಂಟೆ ಜಗದೊಳು || 252 ||

ಜಲದೊಳಗೆ ಮಿಂದು ನಿರ್ಮಲರಾದೆವೆಂದು ತ-
ಮ್ಮೊಳು ತಾವೆ ಹಿಗ್ಗಿಸುಖಿಸೋರು | ಸುಖಿಸೋರು ಪರಮ ಮಂ- ಗಳಮೂರ್ತಿ ನಿನ್ನ ನೆನೆಯದೆ || 253 ||

ಜಡಭೂತಜಲ ಜನರ ಮಡಿಮಾಡಲಾಪವೆ
ಜಡಧಿಮಂದಿರನ ಶುಭನಾಮ | ಶುಭನಾಮ ಮೈಲಿಗೆಯ
ಬಿಡಿಸಿ ಮಂಗಳವ ಕೊಡದೇನೊ || 254 ||

ಓಡಿಹೋಗುವ ಮಡಿಯ ಮಾಡಿ ದಣಿಯಲುಬೇಡ
ನೋಡು ಸರ್ವತ್ರ ಹರಿರೂಪ |  ಹರಿರೂಪ ನೋಡಿ ಕೊಂ
ಡಾಡಿ ಸುಖಿಯಾಗೋ ಮನವುಬ್ಬಿ || 255 ||

ಮೀನುಮೊಸಳೆಗಳ ತಪ್ಪೇನೊ ಜಲದೊಳಗಿಹವು
ಸ್ನಾನಫಲವ್ಯಾಕೆ ಬರಲಿಲ್ಲ | ಬರಲಿಲ್ಲ ಜಲಚರ-
ಪ್ರಾಣಿಗಿನ್ನಜ್ಞರಿಗೆ ಕೊರೆತೇನೋ || 256 ||

ಮನವೆ ಆಲೋಚಿಸಿಕೊ ನಿನಗಿದ್ದ ಚಿಂತೆ ನ-
ಮ್ಮನಿರುದ್ಧಗಿಲ್ಲೇ ಈ ಅನುಗಾಲ | ಅನುಗಾಲ ಸಲಹುವ
ಬಿನಗುಮಾನವರ ಬಿಡು ಕಂಡ್ಯ || 257 ||

ಬಂಡಮನವೆ ಕೇಳು ಕಂಡಕಂಡವರಿಗೆ
ಅಂಡಲೆದರೇನೋ ಪುರುಷಾರ್ಥ | ಪುರುಷಾರ್ಥ ಸ್ವಾಮಿಪದ-
ಪುಂಡರೀಕವನೇ ನೆರನಂಬು || 258 ||

ಅಶನ ವಸನಗಳೀವ ವಸುದೇವಸುತನಿರಲು
ಹುಸಿಯಾಗಿ ಬದುಕೋ ನರರಿಗೆ | ನರರಿಗಾಲ್ಪರಿದರೆ
ಹಸಿವೆಯಡಗುವುದೇ ಎಲೆ ಜೀವ || 259 ||

ಹಿಂದೆ ಜನ್ಮಾಂತರದಿ ತಂದುಕೊಟ್ಟವರಾರು
ಇಂದು ಮುಂದೀವ ಪ್ರಭುವಾರು | ಪ್ರಭುವಾರು ಎಲೆ ಮನವೆ
ಮಂದಮತಿಯಾಗಿ ಕೆಡಬೇಡ || 260 ||

ಅನ್ನವಿಲ್ಲೆಂದು ನೀನನ್ಯರಿಗೆ ಹಲುಬದಿರು ಅನ್ನಮಯನಾದ ಅನಿರುದ್ಧ | ಅನಿರುದ್ಧ ಜಗಕೆ ದಿ-
ವ್ಯಾನ್ನ ತಾ ಕೊಟ್ಟು ಸಲಹುವ || 261 ||

ಏಸೇಸು ಜನಮದಲಿ ಬೇಸರಾಗದೆ ಜೀವ-
ರಾಶಿಗಳಿಗನ್ನ ಕೊಡುತಿರ್ಪ | ಕೊಡುತಿರ್ಪ ನಮ್ಮನು ಉ- ದಾಸೀನಮಾಡಿ ಬಿಡುವೋನೆ || 262 ||

ಅನ್ನದನ್ನಾದ ಸಪ್ತನ್ನ ಕಲ್ಪಕನಾಗಿ
ಅನ್ನಮಯರೂಪೀ ಅನಿರುದ್ಧ |  ಅನಿರುದ್ಧ ಜಗಕೆ ದಿ-
ವ್ಯಾನ್ನಗಳ ಕೊಟ್ಟು ಸಲಹುವ || 263 ||

ಪ್ರಾಣಪಂಚಕರೂಪ ಪ್ರಾಣಾಂತರಾತ್ಮಕನು
ಪ್ರಾಣಿಗಳೊಳಗಿದ್ದು ಪ್ರತಿದಿನ |  ಪ್ರತಿದಿನವು ಪ್ರದ್ಯುಮ್ನ
ಪ್ರಾಣಮಯನೆಂದು ಕರೆಸುವ || 264 ||

ಎಂತೆಂತು ನೀ ನಡೆಸಿದಂತೆ ನಾ ನಡೆವೆನೋ
ಎಂತು ನೀ ನುಡಿಸೆ ನುಡಿವೆನು | ನುಡಿವೆನಲ್ಲದೆ ರಮಾ- ಕಾಂತ ಎನ್ನಲ್ಲಿ ತಪ್ಪೇನೋ || 265 ||

ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು || 266 ||

ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆ
ಶರ್ವಾದಿವಂದ್ಯ ಶಿವರೂಪಿ | ಶಿವರೂಪಿ ಸಜ್ಜನರ
ಸರ್ವಕಾಲದಲಿ ಸಲಹಯ್ಯ || 267 ||

ಉಂಡು ಉಟ್ಟಿದ್ದೆಲ್ಲಖಂಡನ ಮಖವೆನ್ನಿ
ಕಂಡದ್ದು ಹರಿಯ ಪ್ರತಿಮೆನ್ನಿ | ಪ್ರತಿಮೆನ್ನಿ ಮೂರ್ಜಗಕೆ
ಪಾಂಡವಪ್ರಿಯನೇ ದೊರೆಯೆನ್ನಿ || 268 ||

ಮನವಚನಕಾಯದಿಂದನುಭವಿಪ ವಿಷಯಗಳ
ನಿನಗರ್ಪಿಸುವೆನೋ ನಿಖಿಳೇಶ | ನಿಖಿಳೇಶ ನಿನ್ನ ಪಾ-
ವನಮೂರ್ತಿ ತೋರಿ ಸುಖವೀಯೋ || 269 ||

ನಿಖಿಳಾಗಮೈಕವೇದ್ಯಕಳಂಕ ಸುಚರಿತ್ರ
ವಿಖನಸಾರಾಧ್ಯ ಸುಖರೂಪ |  ಸುಖರೂಪ ನಿನ್ನಂಥ
ಸಖನಿರಲು ದುರಿತ ಬರಲುಂಟೆ || 270 ||

ಭೋಜ್ಯವಸ್ತುಗಳಲ್ಲಿ ಭೋಜ್ಯನಾಮಕನಾಗಿ
ತಜ್ಜನ್ಯರಸವ ಹರಿ ತಾನು | ಹರಿ ತಾನು ಉಂಡುಣಿಸಿ
ನಿರ್ಜರೋತ್ತಂಸ ಸುಖವೀವ || 271 ||

ಭೂಮಂಡಲವೆ ಪೀಠ ವ್ಯೋಮಮಂಡಲ ಛತ್ರ
ಸೋಮಸೂರ್ಯರೇ ಮಹದೀಪ | ಮಹದೀಪ ನಕ್ಷತ್ರ-
ಸ್ತೋಮಗಳೆ ನಿನಗೆ ಉಪದೀಪ || 272 ||

ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಬೆಳೆವ ಬೆಳಸುಗಳೇ ನೈವೇದ್ಯ | ನೈವೇದ್ಯ ಜನರ ಕಂ- ಗಳ ಕಾಂತಿ ನಿನಗೆ ಆರಾರ್ತಿ || 273 ||

ತರುಗಳೇ ಚಾಮರಗಳಾಗಿರ್ಪವು ನಿನಗೆ
ಶರಧಿಗರ್ಜನಯೇ ಮಹವಾದ್ಯ | ಮಹವಾದ್ಯ ಜೀವರ-
ಸ್ವರಗಳೇ ನಿನಗೆ ಸಂಗೀತ || 274 ||

ಪಾತಾಳ ಪಾದುಕ ವಿಧಾತೃಲೋಕವೆ ಮುಕುಟ
ಶ್ವೇತದ್ವೀಪವೆ ನಿನಗೆ ಒಡ್ಯಾಣ | ಒಡ್ಯಾಣ ವೈಕುಂಠ ಆತಪತ್ರವೇ ನಿನಗೀವೆ || 275 ||

ನಡೆವುದೇ ಹರಿಯಾತ್ರೆ ನುಡಿವುದೇ ಹರಿನಾಮ
ಕುಡಿವ ನೀರುಗಳೇ ಅಭಿಷೇಕ | ಅಭಿಷೇಕ ದಿನದಿನದಿ ಒಡಲಿಗುಂಬನ್ನ ನೈವೇದ್ಯ || 276 ||

ವೇದಶಾಸ್ತ್ರಗಳು ನಿನಗಾದರುಪಚಾರವು
ಹಾದಿ ನಡೆಯುವುದೇ ನರ್ತನ | ನರ್ತನವು ಸಜ್ಜನರ
ವಾದಸಂವಾದಗಳು ಉಯ್ಯಾಲೆ || 277 ||

ನಕ್ಷತ್ರ ಮಂಡಲವು ಲಕ್ಷದೀಪವು ನಿನಗೆ ಋಕ್ಷೇಶತರಣಿ ಆಕಾಶ | ಆಕಾಶದೀಪಗಳು
ವೃಕ್ಷವಲ್ಲಿಜವೇ ಫಲಪುಷ್ಪ || 278 ||

ಕುಂಡವೇ ಗೋಳಕವು ಕೆಂಡವೇ ಕರಣಗಳು
ಉಂಡುಡುವ ವಿಷಯ ಅವದಾನ | ಅವದಾನ ಕೈಗೊಂಡು
ಪುಂಡರೀಕಾಕ್ಷ ದಯವಾಗೋ || 279 ||

ಗೋಳಕಗಳೆಲ್ಲ ನಿನಗಾಲಯವು ಕರಣಗಳ-
ಸಾಲುಗಳೆ ದೀಪ ತದ್ಭೋಗ್ಯ |  ತದ್ಭೋಗ್ಯವಿಷಯಗಳ
ಮೇಳನವೆ ನಿನಗೆ ಮಹಪೂಜೆ || 280 ||

ತತ್ತತ್ಪದಾರ್ಥದಲಿ ತತ್ತದಾಕಾರನಾ-
ಗೆತ್ತನೋಡಿದರು ಇರತಿರ್ಪ |  ಇರುತಿರ್ಪ ಹರಿಗೆ ನಾ
ಭೃತ್ಯನೆಂಬುವುದೇ ಬಲುಧರ್ಮ || 281 ||

ಸದಸದ್ವಿಲಕ್ಷಣನೆ ಅಧಿಭೂತ ಅಧ್ಯಾತ್ಮ- ಅಧಿದೈವದರಸ ರಸರೂಪೀ | ರಸರೂಪನಾಗಿ ಸ-
ನ್ಮುದ ತುಷ್ಟಿ ಕೊಡುತಿರ್ಪೆ || 282 ||

ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದ ವೃತ್ತಿಗಳನ್ನು ಸೃಜಿಸುವಿ | ಸೃಜಿಸಿ ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ || 283 ||

ಅಧಿಭೂತ ಅಧ್ಯಾತ್ಮ ಅಧಿದೈವತಾಪ ಕಳೆ-
ವುದು ನಿನ್ನ ದಿವ್ಯತ್ರಯನಾಮ | ತ್ರಯನಾಮ ಸರ್ವದಾ ಒದಗಲೋ ಬಂದು ವದನಕ್ಕೆ || 284 ||

ನಾನಾಪದಾರ್ಥದಲಿ ನಾನಾಪ್ರಕಾರದಲಿ ನೀನಿದ್ದು
ಜಗವ ನಡೆಸುವಿ | ನಡೆಸುವಿ ಹರಿ ನೀನೆ
ನಾನೆಂಬ ನರಗೆ ಗತಿಯುಂಟೆ || 285 ||

ಸೇವ್ಯಸೇವಕರಲ್ಲಿ ಸೇವ್ಯ ಸೇವಕನಾಗಿ ಅವ್ಯಕ್ತನಾಗಿ ನೆಲೆಸಿರ್ಪೆ | ನೆಲೆಸಿರ್ಪೆ ಸರ್ವದಾ
ಸೇವ್ಯ ನಾ ನಿನಗೆ ಸರಿಗಾಣೆ || 286 ||

ಮರಳು ಮನವೇ ಕೇಳು ಮರೆವರೇ ಹರಿನಾಮ ಕರುಣಾಬ್ಧಿಕೃಷ್ಣ ಅನುಗಾಲ |  ಅನುಗಾಲ ಸಲಹುವನು
ಬರಿದೆ ಚಿಂತ್ಯಾಕೋ ನಿನಗಿನ್ನು || 287 ||

ತಂದೆ ಮಕ್ಕಳನು ಪೆÇರೆವಂದದಲಿ ಶ್ರೀಕಾಂತ ಎಂದೆಂದು ತನ್ನ ಭಕತರ | ಭಕತರ ಸಲಹುವ
ಸಂದೇಹವ್ಯಾಕೋ ನಿನಗಿನ್ನು || 288 ||

ಅಂಬುಜಭವಾಂಡದೊಳು ಒಂಬತ್ತು ವಿಧವಿಪ್ಪ ಅಂಬುಜಾಂಬಕನ ವಿಭೂತಿ |  ವಿಭೂತಿರೂಪವನು ಕಾಂಬುವನೆ ಯೋಗೀ ಜಗದೊಳು || 289 ||

ಕರ್ತೃಕರ್ಮಗಳಲ್ಲಿ ಕಾರಣಕ್ರಿಯೆಗಳಲಿ
ನಿತ್ಯ ನೀನಿದ್ದು ನಡೆಸುವಿ | ನಡೆಸುವಿ ಜೀವರ ಕೃತಕೃತ್ಯರನು ಮಾಡಿ ಸಲಹುವಿ || 290 ||

ನಿತ್ಯಬದ್ಧನು ನಾನು ನಿತ್ಯಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ-
ವ್ಯಾಪ್ತನು ನೀನು ಅಣು ನಾನು || 291 ||

ಹೃಷಿಕನಿಯಾಮಕನೆ ವಿಷಯದೊಳು ನೀ ನಿಂತು
ಪ್ರಸುಖಾತ್ಮನಾಗಿ ರಮಿಸುವಿ | ರಮಿಸಿ ಜೀವರನು ಮೋ-
ಹಿಸಿ ತಿಳಿಯಗೊಡದೆ ಇರುತಿರ್ಪೆ || 292 ||

ಶ್ರೀಪ್ರಾಣನಾಯಕನೆ ನೀ ಪ್ರಾಣಿಗಳ ಮೇಲೆ
ಸುಪ್ರೀತನಾಗಿ ಸಲಹೆಂದು | ಸಲಹೆಂದು ಸರ್ವದಾ
ನಾ ಪ್ರಾರ್ಥಿಸುವೆನೋ ಪರಮಾತ್ಮ || 293 ||

ಅನಘ ರೋಗಘ್ನ ಎಂದನಿತು ಮಂಗಳನಾಮ
ನೆನೆಯೆ ದುರಿತಗಳು ಬರಲುಂಟೆ | ಬರಲುಂಟೆ ಲೋಕದ
ಜನರ ಧನ್ವಂತ್ರಿ ಕಾಪಾಡೋ || 294 ||

ನಿನ್ನ ಕೊಂಡಾಡಿದಂತನ್ಯರನು ಕೊಂಡಾಡೆ
ನಿನ್ನನೇ ನೋಡ ಬಯಸುವೆ |  ಬಯಸುವೆ ಬೇಸರದೆ ಎನ್ನ ಕುಲದೈವ ಸುಖವೀಯೋ || 295 ||

ನೀರುತೃಣವೀಯೆ ಗೋ ಕ್ಷೀರವನು ಕರೆದಂತೆ
ಸೂರಿಗಳು ಮಾಳ್ಪ ಅಪರಾಧ | ಅಪರಾಧ ಸ್ವೀಕರಿಸಿ
ಸಾರೂಪ್ಯವೀವೆ ಸರ್ವಜ್ಞ || 296 ||

ನಿನ್ನ ಸಂಕಲ್ಪಕ್ಕೆ ಅನ್ಯಥಾವಾಗಿಪ್ಪ
ಪುಣ್ಯಕರ್ಮಗಳ ನಾನೊಲ್ಲೆ |  ನಾನೊಲ್ಲೆ ಶ್ರೀಹರಿಯೆ
ಮನ್ನಿಸೈ ನಿನ್ನ ಮನದಂತೆ || 297 ||

ನಿನ್ನ ತುತಿಪುದಕಿಂತ ಪುಣ್ಯಬೇರೇನಯ್ಯ
ನಿನ್ನಂಘ್ರಿಭಜನೆಸುಖಕಿಂತ | ಸುಖಕಿಂತ ಪುರುಷಾರ್ಥ
ಇನ್ನುಂಟೆ ಸ್ವಾಮಿ ಜಗದೊಳು || 298 ||

ದೇಶಕಾಲಾದಿಗಳಿಗೀಶ ನೀನೆಂದರಿದು-
ಪಾಸನೆಯ ಗೈವ ಭಜಕರು | ಭಜಕರೆಲ್ಲಿದ್ದರೂ
ದೋಷವೆಲ್ಲಿಹುದೋ ಅವರಿಗೆ || 299 ||

ಅನಿರುದ್ಧ ಪ್ರದ್ಯುಮ್ನ ಅನಲಧರಣೀಧರನೆ ಅನುವಿಷ್ಟನಾಗಿ ಪ್ರಕೃತಿಯ | ಪ್ರಕೃತಿಯ ನಿರ್ಮಿಸಿದ ಘನಮಹಿಮ ಎನಗೆ ದಯವಾಗೋ || 300 ||

ವಾಸುದೇವಾನಂತ ವಾಸವಾನುಜ ವರ-
ವಾಸುಕೀಶಯನ ವನಮಾಲಿ |  ವನಮಾಲಿ ವೀತಭಯ
ವಾಸವಾಗೆನ್ನಮನದಲ್ಲಿ || 301 ||

ನಾರಾಯಣಾಚ್ಯುತ ಮುರಾರಿ ಮುನಿಗಣಸೇವ್ಯ
ನಾರದಪ್ರಿಯ ನರಸಿಂಹ | ನರಸಿಂಹ ನಿನ್ನವರಿ- ಗಾರೋಗ್ಯಭಾಗ್ಯ ಕರುಣಿಸೋ || 302 ||

ಮೃತ್ಯುಂಜಯಾರಾಧ್ಯ ಮೃತ್ಯುಮೃತ್ಯುವೆ ಮೃಕಂ- ಡಾತ್ಮಜ ಪ್ರಿಯ ಕವಿಗೇಯ |  ಕವಿಗೇಯ ಭಕ್ತರಪ-
ಮೃತ್ಯುಪರಿಹರಿಸಿ ಸಲಹಯ್ಯ || 303 ||

ಇಂದಿರಾರಮಣ ಗೋವಿಂದ ಕೇಶವ ಭಕ್ತ-
ಬಂಧು ನೀನೆಂದೂ ಮೊರೆಹೊಕ್ಕೆ | ಮೊರೆಹೊಕ್ಕೆ ಕಾರುಣ್ಯ
ಸಿಂಧು ನೀನೆನಗೆ ದಯವಾಗೋ || 304 ||

ನೋಕನೀಯನೆ ನಿನ್ನ ಶ್ರೀಕಮಲಜಾದಿಗಳು ಏಕದೇಶವನು ಅರಿಯರೊ |  ಅರಿಯದಾಮಹಿಮೆಗಳು ಈ ಕುಮತಿಜನರು ತಿಳಿವೋರೇ || 305 ||

ವಾಸುದೇವನ ಬಿಟ್ಟು ಲೇಸು ಹಾರೈಸಿಕೊಂ-
ಡೇನು ದೈವಗಳ ಭಜಿಸಲು |  ಭಜಿಸಲು ಬರಿದೆ ಆ- ಯಾಸವಲ್ಲದೆ ಸುಖವಿಲ್ಲ || 306 ||

ನಾನಿನ್ನ ಮರೆತರೂ ನೀನೆನ್ನ ಮರೆಯದಲೆ
ಸಾನುರಾಗದಿ ಸಲಹುವಿ | ಸಲಹುವಿ ಸರ್ಜಜ್ಞ ಏನೆಂಬೆ ನಿನ್ನ ಕರುಣಕ್ಕೆ || 307 ||

ಜೀವನಾಮಕನಾಗಿ ಜೀವರೊಳು ನೀ ನಿಂತು ಜೀವಕೃತಕರ್ಮ ನೀ ಮಾಡಿ | ನೀ ಮಾಡಿ ಮಾಡಿಸಿ ಜೀವರಿಗೆ ಕೊಡುವೆ ಸುಖದು:ಖ || 308 ||

ಸತ್ಯಸಂಕಲ್ಪ ತ್ವಚ್ಚಿತ್ತಾನುಸಾರ ಮ-
ಚ್ಚಿತ್ತ ವರ್ತಿಸಲಿ ಸರ್ವತ್ರ | ಸರ್ವತ್ರ ಸರ್ವದಾ
ಭಕ್ತಿ ಇರಲೆನಗೆ ಅನುಗಾಲ || 309 ||

ನರಕಸ್ವರ್ಗಗಳೆರಡು ಇರುತಿಹವು ಇಲ್ಲೆ ವಿ-
ಸ್ಮರಣೆಯೇ ನರಕ ಸ್ಮೃತಿ ಸ್ವರ್ಗ | ಸ್ಮೃತಿಸ್ವರ್ಗವಿರೆ ಬಾಹ್ಯ
ನರಕಭಯಕಂಜೆ ಎಂದೆಂದು || 310 ||

ಪ್ರಾಣಭಯಬಂದಾಗ ಕಾಣದಲೆ ಹಲುಬಿದರು
ಪ್ರಾಣಮಯನಾದ ಪ್ರದ್ಯುಮ್ನ | ಪ್ರದ್ಯುಮ್ನ ಮೂಜಗ- ತ್ತ್ರಾಣನಾಗಿನ್ನು ಸಲಹುವ || 311 ||

ವಾಮನ ತ್ರಿವಿಕ್ರಮ ನಿರಾಮಯ ನಿರಾಧಾರ
ರಾಮ ರಾಜೀವದಳನೇತ್ರ | ದಳನೇತ್ರ ಮಮ ಕುಲ-
ಸ್ವಾಮಿ ನೀನೆಮಗೆ ದಯವಾಗೋ || 312 ||

ಶೋಕನಾಶನ ವಿಗತಶೋಕ ನೀನೆಂದರಿದು
ನಾ ಕರವಮುಗಿವೆ ಕರುಣಾಳು | ಕರುಣಾಳು ಭಕತರ-
ಶೋಕಗಳ ಕಳೆದು ಸುಖವೀಯೋ || 313 ||

ಆನಂದನಂದ ವಿಜ್ಞಾನಮಯ ವಿವಿಧ ಸ-
ನ್ಮಾನದ ಪ್ರವರಸಮವರ್ತಿ | ಸಮವರ್ತಿ ಸುಮನಸ- ತ್ರಾಣ ನೀನೆಮಗೆ ದಯವಾಗೋ || 314 ||

ನೀನಿಪ್ಪಲೋಕ ನಿರ್ವಾಣವೆಂದಾಗಮಪು-
ರಾಣ ಪೇಳುವುವು ಅನುದಿನ | ಅನುದಿನದಿ ನರಕ ವಿ-
ದ್ದೇನು ಮಾಡುವುದೋ ಎನಗಿನ್ನು || 315 ||

ಕೃಪಣವತ್ಸಲ ಎನ್ನಪರಾಧಗಳ ನೋಡಿ ಕುಪಿತನಾಗುವುದೆ ಕಮಲಾಕ್ಷ |  ಕಮಲಾಕ್ಷ ನೀನೆನಗೆ ಉಪಕಾರಿ ಎಂದು ಸ್ಮರಿಸುವೆ || 316 ||

ಸತ್ಯಸಂಕಲ್ಪ ಜಗದತ್ಯಂತಭಿನ್ನ ಸ-
ರ್ವೋತ್ತಮೋತ್ತಮನೇ ಸುಖಪೂರ್ಣ | ಸುಖಪೂರ್ಣ ನೀನೆನ್ನ ಚಿತ್ತದಿಂದ ಅಗಲದಿರು ಕಂಡ್ಯ || 317 ||

ಜ್ಞಾನಕರ್ಮೇಂದ್ರಿಯಗಳಾನಂದಮಯಗಧಿ-
ಷ್ಠಾನವೆಂದರಿದು ಪ್ರತಿದಿನ | ಪ್ರತಿದಿನ ಉಂಬನ್ನ-
ಪಾನಾದಿವಿಷಯ ಹರಿಗೆನ್ನಿ || 318 ||

ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ
ಅನಿಮಿತ್ತ ಬಂಧು ಸಲಹುವಿ |  ಸಲಹುವಿ ಸರ್ವದಾ ಎಣೆಗಾಣೆ ನಿನ್ನ ಕರುಣಾಕ್ಕೆ || 319 ||

ಮಾನಧನವನಿತೆಸಂತಾನಗಳ ಬಯಸುತ್ತ
ಸ್ನಾನಜಪಹೋಮಉಪವಾಸ | ಉಪವಾಸ ವ್ರತನೇಮ
ಏನು ಮಾಡಿದರೂ ಹರಿಮೆಚ್ಚ || 320 ||

ಶ್ರೀವರನೆ ನೀ ತತ್ವದೇವತೆಳೊಳಗಿದ್ದು
ಯಾವತ್ತು ಕರ್ಮ ನೀ ಮಾಡಿ | ನೀ ಮಾಡಿಸುತ
ಜೀವರಿಗೆ ಈವ ಸುಖದು:ಖ || 321 ||

ವೈಷಮ್ಯಮೊದಲಾದ ದೋಷರಹಿತನೆ ನಿರಭಿ-
ಲಾಷೆಯಲಿ ನಿನ್ನ ಸರ್ವತ್ರ | ಸರ್ವತ್ರ ಚಿಂತಿಪರ
ತೋಷಿಸುವೆ ಒಲಿದು ಸುಖವಿತ್ತು || 322 ||

ಭೂರಮಣ ನಿತ್ಯಸಂಸಾರಿಗಳಲಿದ್ದು ಧನ-
ದಾರಾದಿಗಳಲಿ ಮಮತೆಯ |  ಮಮತೆಯ ಕೊಟ್ಟು ಸಂ- ಚಾರಮಾಡಿಸುವೆ ಭವದೊಳು || 323 ||

ಕ್ರೂರಕರ್ಮವ ದುರ್ಗೆರಮಣನೆ ದೈತ್ಯರೊಳು ತೋರಿಕೊಳ್ಳದಲೆ ನೀ ಮಾಡಿ | ನೀ ಮಾಡಿ ಮಾಡಿಸುತ ಘೋರದು:ಖಗಳನುಣಿಸುವಿ || 324 ||

ಹರಿಯೆ ನೀನೊಳಗಿದ್ದು ಪರದಾರಧನಗಳಲಿ
ಎರಗಿಸುವೆ ಮನವ ಮರುಗಿಸಿ | ಮರುಗಿಸಿ ಮೋಹಿಸುವೆ
ಕರುಣಿ ನಿನಗಿದು ಉಚಿತವೆ || 325 ||

ಎಲ್ಲಿ ಹರಿರೂಪ ಮತ್ತಲ್ಲಿ ಗುಣಕ್ರಿಯೆಗಳು
ಅಲ್ಲೆ ಗುಣರೂಪಕ್ರಿಯೆಗಳು |  ಕ್ರಿಯೆಗಳು ಗುಣರೂಪ
ಬಲ್ಲವನೆ ಜ್ಞಾನಿ ಜಗದೊಳು || 326 ||

ನಿನ್ನಧೀನನು ನಾನು ನಿನ್ನ ದಾಸರ ದಾಸ ಎನ್ನದೇನಯ್ಯ ಅಪರಾಧ | ಅಪರಾಧಗಳ ನೋಡಿ
ಬನ್ನಬಡಿಸೋದು ಉಚಿತವೆ || 327 ||

ಒಳಹೊರಗೆ ನೀನಿದ್ದು ತಿಳಿಯಗೊಡದಲೆ ಜಗದಿ
ಹಲವು ಕರ್ಮಗಳ ನೀ ಮಾಡಿ | ನೀ ಮಾಡಿ ಮಾಡಿಸುತ
ಫಲಗಳನ್ನೀವೆ ಜನರಿಗೆ || 328 ||

ದೇವಗಂಗೆಯ ತಡಿಯ ಭಾವಿತೋಡುವನಂತೆ ದೇವೇಶನಿರಲು ತಿರಿದುಂಬ | ತಿರಿದುಂಬ ರಕ್ಕಸರ ದೇವರೆಂತೆಂದು ಕೆಡದಿರು || 329 ||

ನಿರ್ದೋಷ ಗುಣಪೂರ್ಣ ಸ್ವರ್ಧುನೀಜನಕ ಗೋ-
ವರ್ಧನೋದ್ಧಾರ ಗಂಭೀರ |  ಗಂಭೀರ ಖಳರ ಕುಲ-
ಮರ್ದನನೆ ನೀನೆನಗೆ ದಯವಾಗೋ || 330 ||

ನಾರಾಯಣನಿರುದ್ಧ ಈರೈದುಕರಣದಿ ವಿ-
ಹಾರಗೊಳುತಿರ್ಪ ಪ್ರದ್ಯುಮ್ನ | ಪ್ರದ್ಯುಮ್ನ ಸಂಕರ್ಷಣನೆ ನೀ-
ವಿರಾಜಿಸುವಿ ಜಗದೊಳು || 331 ||

ವಾಸುದೇವನೆ ಜೀವರಾಶಿಯೊಳಗಿದ್ದು ಅವ- ಕಾಶಕೊಡುತಿರ್ಪೆ ವಿಷಯಕ್ಕೆ |  ವಿಷಯಗಳನುಂಡು ಸಂ- ತೋಷಪಡಿಸುವಿ ಭಕತರ || 332 ||

ಅಣುವಿಗಣುತರನಾಗಿ ಘನಕೆ ಘನತರನಾಗಿ ಅಣುಮಹತ್ತುಗಳ ದೆಶೆಯಿಂದ | ದೆಶೆಯಿಂದ ನೀ ವಿಲ- ಕ್ಷಣನೆನಿಸಿಕೊಂಬೆ ಶ್ರುತಿಯೊಳು || 333 ||

ವಿಹಿತಕರ್ಮಗಳಿಂದ ಅಹಿಕಪಾರತ್ರಿಕಗ-
ಳಹವು ಜೀವರಿಗೆ ಸರ್ವತ್ರ | ಸರ್ವತ್ರ ಸಜ್ಜನರ
ಸಹವಾಸವೆಂತು ದೊರೆವುದೋ || 334 ||

ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ
ಎನ್ನರಸ ಎನ್ನ ಕುಲದೈವ | ಕುಲದೈವ ಇಹಪರದಿ ಎನ್ನ ಬಿಟ್ಟಗಲದೇ ಇರುಕಂಡ್ಯ || 335 ||

ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ
ಮನ್ನಿಸು ಕಂಡ್ಯ ಮಹರಾಯ |  ಮಹರಾಯ ನೀ ಮರೆದ- ರಿನ್ನಾರು ಸಾಕಲರಿಯರು || 336 ||

ಸರ್ವಾಂತರಾತ್ಮಕನೆ ದುರ್ವಿಷಯತೈಲದೊಳು
ದರ್ವಿಯಂದದಲಿ ಚರಿಸುವ |  ಚರಿಸುವ ಮನದಲ್ಲಿ
ಸರ್ವಕಾಲದಲ್ಲಿ ನೆಲೆಗೊಳ್ಳೋ || 337 ||

ಏನಬೇಡಲಿ ನಿನ್ನ ಧೀನವೀಜಗವು ಸ್ವಾ-
ಧೀನವಸ್ತುಗಳ ನಾ ಕಾಣೆ | ನಾ ಕಾಣೆ ಭಕ್ತಿ ವಿ- ಜ್ಞಾನವೈರಾಗ್ಯವನೆ ಕರುಣಿಸೋ || 338 ||

ಆಶೆಯೊಂದುಂಟು ಸರ್ವೇಶ ವಿಜ್ಞಾಪಿಸುವೆ
ವಿಶ್ವಂಭರಾಭಾಗ್ಯಸತಿಮೋಹ | ಸತಿಮೋಹ ತಪ್ಪಿಸಿ
ನೀ ಸಲಹಬೇಕೋ ದಯದಿಂದ || 339 ||

ಏನು ಬೇಡುವುದಿಲ್ಲ ಮಾನಾದಿಸಂಪತ್ತು
ನಾನೊಲ್ಲೆ ಸ್ವಪ್ನದಲಿ ತವ ನಾಮ | ತವ ನಾಮ ಕ್ಷಣಕ್ಷಣಕೆ
ತಾನೊದಗಲೆನ್ನ ವದನಕ್ಕೆ || 340 ||

ಸಿರಿ ನಿನ್ನ ಚರಣದ ಕಿರುಬೆರಳ ನಖದ ಗುಣ
ಅರಿಸಿನೋಡುತಲಿ ಅನುಗಾಲ | ಅನುಗಾಲ ಕಾಣದಿರೆ
ಬೆರಗುಬೀಳುವಳೋ ಮರುಳಾಗಿ || 341 ||

ಕರ್ಮಜ್ಞ ಕರ್ಮೇಶ ಕರ್ಮಪ್ರವರ್ತಕನೆ ಕರ್ಮಫಲದಾತ ಕರ್ಮಸ್ಥ | ಕರ್ಮಸ್ಥ ಎನ್ನ ದು-
ಷ್ಕರ್ಮ ಕಳೆದು ನೀ ಸಲಹಯ್ಯ || 342 ||

ಸ್ವಾನಂದಪರಿಪೂರ್ಣ ನಾನಾವಿಷಯಗಳಲಿ
ನೀ ನಿಂದು ಮಮತೆಯ ಕಲ್ಪಿಸಿ | ಕಲ್ಪಿಸಿ ಹೀನನೆಂ- ದೆನ್ನನೇತಕ್ಕೆ ದಣಿಸುವಿ || 343 ||

ವಿಜಿತಾತ್ಮ ನೀ ಭೂಭುಜರೊಳಿದ್ದು ಅನವರತ ಯಜಮಾನನೆಂದು ಕರೆಸುವಿ |  ಕರೆಸಿ ಶಿಕ್ಷಕನಾಗಿ
ಪ್ರಜರ ಸಂತೈಪೆ ಅನುಗಾಲ || 344 ||

ಎಲ್ಲರಂದದಿ ಲಕ್ಷ್ಮಿನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || 345 ||

ಗೋವಿಂದನೇ ಬಂದು ಆವಾವ ಕಾಲದಲಿ
ಕಾವನು ಎಂಬ ನುಡಿ ಸಿದ್ಧ |  ನುಡಿ ಸಿದ್ಧವಾಗಿರಲು ಆವ ಭಯಕಂಜೆ ಎಂದೆಂದು || 346 ||

ಕರಿವರದನೇ ನಿನ್ನ ಕರುಣವಿಲ್ಲದೆ ಭವ-
ಶರಧಿಯನೆ ದಾಟುವ ತೆರನ್ಹ್ಯಾಂಗೆ | ತೆರನ್ಹ್ಯಾಂಗೆ ಲೋಕದ-
ವರಿಂದಲಿ ಎಮಗೆ ಸುಖವಿಲ್ಲ || 347 ||

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಸ್ವಪರಗತನಾಗಿ ನೀ ಮಾಡಿ | ನೀ ಮಾಡಿ ಮಾಡಿಸಿ
ಅಪರಿಚಿತನಂತೆ ಇರುತಿರ್ಪೆ || 348 ||

ಶರಣು ದೇವರ ದೇವ ಶರಣರಿಗೆ ಸುಖವೀವ
ಶರಧಿಜೆಯ ರಮಣ ಕರುಣಿಸೊ | ಕರುಣಿಸಿ ಸಲಹೊ ನಾ
ಮೊರೆಹೊಕ್ಕೆ ನಿನ್ನ ಚರಣಕ್ಕೆ || 349 ||

ದೋಷದೂರನೆ ಕೇಳು ದ್ವೇಷಿ ನಿನಗಾನಲ್ಲ
ಈಷಣತ್ರಯದಿ ಮಮತೆಯ |  ಮಮತೆಯ ಕೊಟ್ಟು ಪ್ರ- ದ್ವೇಷಗೋಳಿಸುವುದು ಉಚಿತಲ್ಲ || 350 ||

ಪನ್ನಗಾಚಲವಾಸ ನಿನ್ನುಳಿದು ಸಂತೈಪ-
ರಿನ್ನೆಲ್ಲಿ ಕಾಣೆ ನಿನ್ನಾಣೆ | ನಿನ್ನಾಣೆ ಸುಗುಣ ಸಂ-
ಪನ್ನ ಸಜ್ಜನರ ಸಲಹೆಂಬೆ || 351 ||

ಭೂರಮಣ ಸರ್ವಪ್ರಕಾರದಲಿ ಒಲಿದೆಮ್ಮ
ದೂರದಲಿ ಬಪ್ಪ ದುರಿತೌಘ | ದುರಿತೌಘ ಸಂಹರಿಸಿ
ಕಾರುಣಿಕ ನೀನೇ ಸಂತೈಸೋ || 352 ||

ಅನಾಥಬಂಧುವೆ ಜಗನ್ನಾಥವಿಠ್ಠಲ ಪ್ರ-
ಪನ್ನಪರಿಪಾಲ ಮಾಲೋಲ | ಮಾಲೋಲ ಅರಿಪಾಂಚ- ಜನ್ಯಧೃತಪಾಣಿ ಸಲಹೆಮ್ಮ || 353 ||

ಮಾಯಾವಾದಖಂಡನ

ಶಿವನು ನೀನಾದರೆ ಶಿವರಾಣಿ ನಿನಗೇನು ಅವಿವೇಕಿಮನುಜ ಈ ಮಾತು | ಈ ಮಾತು ಕೇಳಿದರೆ ಕವಿಜನರು ನಗರೇ ಕೈಹೊಡೆದು || 354 ||

ಎಲ್ಲ ಒಂದೇ ಎಂಬ ಖುಲ್ಲಮಾನವ ನಿನ್ನ
ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ ಇಲ್ಲವೇ ಜನನೀ ಭಗಿನೇರು || 355 ||

ಬಿಂಬ ಒಂದೇ ಪ್ರತಿಬಿಂಬ ಒಂದೆಂಬೆಲಾ
ಅಂಬರ ನೆಳಲು ಕುಪ್ಪಾಗೆ | ಕುಪ್ಪಾದಬಳಿಕ ನೀ
ನೆಂಬ ಈ ಮಾತು ಪುಸಿಯಲ್ಲೇ || 356 ||

ಎಲ್ಲ ಒಂದೇ ಎಂಬ ಸೊಲ್ಲು ಖರೆಯೆಂತೆನಲು
ಸುಳ್ಳು ಎಂಬೋದು ಖರೆಯಾಗಿ | ಖರೆಯಂಬ ಮಾತುಗಳು
ಸುಳ್ಳೆನ್ನರೇನೋ ಸುಜನರು || 357 ||

ನಿನ್ನ ನಾ ಬೈದರೆ ಎನ್ನ ನೀ ಬೈಯಲು
ನಿರ್ಮೂಲವಾಯಿತು ಅದ್ವೈತ | ಅದ್ವೈತ ಉಳುಹಲಿಕೆ
ಸುಮ್ಮನಿರಬೇಕೋ ಎಲೊ ಪ್ರಾಣಿ || 358 ||

ಶುದ್ಧಬ್ರಹ್ಮನ ಸುಗುಣ ಕದ್ದಪ್ರಯುಕ್ತ ಪ್ರ-
ಸಿದ್ಧಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೆÇದ್ದಿತೋ ಉದ್ಧಾರವೆಲ್ಲಿ ಭವದಿಂದ || 359 ||

ಸುಳ್ಳಿಗಿಂದಧಿಕ ಮತ್ತಿಲ್ಲವೋ ಮಹಪಾಪ
ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ- ತಲ್ಲೊ ಜಾರತ್ವ ಇದರಂತೆ || 360 ||

ಮಾಯಾವಾದಿಮತವು ಹೇಯವೆಂಬುದು ಸಿದ್ಧ
ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಳಿದರೆ
ಬಾಯಿಬಿಟ್ಯಾಕೆ ಅಳುತಿದ್ದಿ || 361 ||

ಮೇ ಮಾತೆ ವಂಧ್ಯೆಂಬ ಈ ಮಾತಿನಂತೆಲೆ
ಈ ಮೂರ್ತಮೂಜಗವು ಪುಸಿಯೆಂಬ | ಪುಸಿಯೆಂಬ ಮಾತುಗಳು
ಭ್ರಾಮಕವೊ ಖರೆಯೋ ನಿಜವೆಲ್ಲಿ || 362 ||

ಶಶವಿಷಾಣಗಳೆಂದರೊಪ್ಪುವರೆ ಬಲ್ಲವರು
ಬಸವಗುಂಟೇನೋ ಮೊಲೆಹಾಲು | ಮೊಹೆಹಾಲು ಉಂಟೆ ತೋ- ರಿಸು ಮಿಥ್ಯೆ ಸತ್ಯವಹುದೇನೋ | 363 ||

ಸತ್ಯವೆಂದರೆ ಖರೆಯು ಮಿಥ್ಯೆ ವೆಂದರೆ ಸುಳ್ಳು
ಸತ್ಯಮಿಥ್ಯೆಗಳು ಏಕತ್ರ | ಏಕತ್ರ ಇಹುದೆ ಉ-
ನ್ಮತ್ತ ಈ ಮಾತು ನಿಜವೆಲ್ಲಿ || 364 ||

ಭೀತಿ ನಿರ್ಭೀತಿ ಶೀತಾತಪಗಳೊತ್ತಟ್ಟು
ನೀತವಾಗಿಹವೆ ಜಗದೊಳು |  ಜಗದೊಳಿದ್ದರೆ ತೋರು
ಜಾತಿಭೇದಗಳು ಇರಲಾಗಿ || 365 ||

ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ-
ಶ್ವಾಸಮಾಡದಲೆ ಜೀವೇಶ | ಜೀವೇಶರೈಕ್ಯೋಪ- ದೇಶಮಾಡಿದವ ಚಂಡಾಲ || 366 ||

ಜೀವೇಶರೊಂದೆಂಬ ಈ ವಾಕು ಕೇಳ್ವರಿಗೆ ಕೇವಲಾಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು- ಗಾವಿ ನೀನೆಂದು ಕರೆಯರೆ || 367 ||

ಗುಣವಂತನೆಂಬ ಮಾತನು ಕೇಳಿ ಸುಖಿಸದವ
ಮನುಜಪಶು ಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ ಗಣನೆಮಾಡದಲೆ ಬೈಯ್ವೋರೋ || 368 ||

ಮಲಗರ್ತಕೆ ಶುದ್ಧಜಲಧಿಸಮವೆಂತೆಂಬಿ
ಕಲುಷವರ್ಜಿತಗೆ ತೃಣಜೀವ |  ತೃಣಜೀವ ಸರಿಯೆ ಸಿಂ-
ಬಳಕೆ ಗೋಘೃತವು ಸಮವೇನೋ || 369 ||

ಐರಾವತಕೆ ಸರಿಯೆ ಕೂರೆಹೇನಿನ ಮರಿಯು
ಮೇರುಪರ್ವತಕೆ ಕಸಕುಪ್ಪೆ |  ಕಸಕುಪ್ಪೆ ಸರಿಬಹುದೆ
ತೋರಿಸೋ ನಿನ್ನ ಅಜ್ಞಾನ || 370 ||

ಅಜರಾಮರಣ ಬ್ರಹ್ಮಭುಜಗಭೂಷಣಪೂಜ್ಯ ತ್ರಿಜಗದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ ಅಜಗಜನ್ಯಾಯ ಪುಸಿಯಲ್ಲ || 371 ||

ಪಾಲಗಡಲೊಳಗಿರುವ ಶ್ರೀಲೋಲ ಹರಿಯೆಲ್ಲಿ
ಹೇಲುಚ್ಚೆಯೊಳಗೆ ಹೊರಳುವ | ಹೊರಳುವ ಬಳಲುವ ಖೂಲಮಾನವನೆ ನೀನೆಲ್ಲಿ || 372 ||

ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯು ಶ್ಲೇಷ್ಮ ಭಾ- ಗೀರಥಿಗೆ ಸರಿಯೆ ಖರಮೂತ್ರ | ಖರಮೂತ್ರ ಜೀವ ಲ- ಕ್ಷ್ಮೀರಮಣಗೆಣೆಯೆ ಜಗದೊಳು || 373 ||

ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ-
ರ್ಗುಣ ಅಜ್ಞ ಅಲ್ಪನೆನುತಿದ್ದೀ | ಅನುತಿದ್ದಿ ಹರಿಗೆ ದೂ-
ಷಣೆಯು ಬೇರುಂಟೆ ಇದಕಿಂತ || 374 ||

ಈಶ ನಾನೆನಲು ಕೀನಾಶನಿಂದಲಿ ದಣಿಪ
ದಾಸನೆಂಬುವಗೆ ದಯದಿಂದ |  ದಯದಿಂದ ತನ್ನಯಾ-
ವಾಸದೊಳಗಿಟ್ಟು ಸಲಹುವ || 375 ||

ಈಶತ್ವವೆಂಬುದು ಶ್ರೀಶಗಲ್ಲದೆ ಜೀವ- ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ ಈಶ ಬಿಟ್ಟಿಹನೆ ಜಗದೊಳು || 376 ||

ಉದ್ಗೀಥ ಶ್ರೀಪ್ರಾಣಹೃದ್ಗತನು ಜಗದೇಕ-
ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪವಗೆ ಯಮ ಗದ್ಗದ ನಡುಗಿ ನಮಿಸುವ || 377 ||

ಸ್ವಾಮಿಭೃತ್ಯನ್ಯಾಯ ಈ ಮಾತಿನೊಳು ಬಂತು ಗ್ರಾಮಧಾಮಗಳು ಇದರಂತೆ |  ಇದರಂತೆ ನೋಡಿಕೋ
ನೀಮಾತ್ರ ನುಡಿಯೆ ಸಾಕೆಂಬೆ || 378 ||

ಈಶ ನಾನೆಂದವನ ಶ್ವಾಸಬಿಡಗೊಡದೆ ಯಮ
ಪಾಶಗಳ ಕಟ್ಟಿ ಸೆಳೆದೊಯ್ದು |  ಸೆಳೆದೊಯ್ದು ನರಕದಿ
ಘಾಸಿಗೊಳಿಸುವನೋ ಬಹುಕಾಲ || 379 ||

ಮಾತೃಪಿತೃದ್ರೋಹಿ ಭ್ರಾತೃಸಖಗುರುಬಂಧು- ಘಾತಕನು ನೀನು ಪುಸಿಯಲ್ಲ |  ಪುಸಿಯಲ್ಲ ಶ್ರೀ ಜಗ-
ನ್ನಾಥವಿಠ್ಠಲನೇ ನಾನೆಂಬಿ || 380 ||

ಶ್ರೀ ಅಗ್ನಿದೇವರ ಸ್ತೋತ್ರ ದೇವಮುಖ ಎನ್ನಯ ಕರಾವಲಂಬನವಿತ್ತು
ಪಾವಕರಿಗೊಲಿದು ಭವತಾಪ | ಭವತಾಪ ಪರಿಹರಿಸು
ಪಾವಕನ ಜನಕ ಪ್ರತಿದಿನ || 381 ||

ಹುತವಹನ ಎನ್ನ ದುರ್ಮತಿಯ ಪರಿಹರಿಸಿ ಸ-
ದ್ಗತಿಯ ಪಥ ತೋರೋ ದಯದಿಂದ | ದಯದಿಂದ ನಿತ್ಯ ನಾ
ನುತಿಸುವೆನು ನಿನ್ನ ಕರುಣಾಳೋ || 382 ||

ಕೃಷ್ಣವರ್ತ್ಮನೆ ಎನ್ನ ದುಷ್ಟಕರ್ಮವ ನೋಡಿ
ಭ್ರಷ್ಟನೆನ್ನದಲೆ ಸಂತೈಸು | ಸಂತೈಸು ಭಾರ್ಗವಗ-
ಧಿಷ್ಠಾನನೆಂದು ಮೊರೆಹೊಕ್ಕೆ || 383 ||

ರುದ್ರಾಕ್ಷಗನೆ ಮಹೋಪದ್ರವವ ಪರಿಹರಿಸು
ಭದ್ರಪ್ರಕಾಶ ಮಹಭದ್ರ | ಮಹಭದ್ರ ವಿಖ್ಯಾತಕರುಣಾಸ-
ಮುದ್ರ ಶರಣೆಂಬೆ || 384 ||

ಕಡಲ ಒಡಲೊಳಗಿದ್ದು ಬಡಬಾಗ್ನಿ ಎನಿಸುವಿ ಅಡವಿಯೊಳಗಿದ್ದು ದಾವಾಗ್ನಿ |  ದಾವಾಗ್ನಿಯೆನಿಸುವಿ
ಪೆÇಡವಿಯೊಳು ಭೌಮ ಎನಿಸುವಿ || 385 ||

ಶುಚಿನಾಮಕನೆ ಮನೋವಚನಾದಿಗಳ ದೋಷ-
ನಿಚಯಗಳನೆಣಿಸಿ ದಣಿಸದೆ |  ದಣಿಸದೆ ಮಚ್ಚಿತ್ತ ಖಚಿತವನು ಮಾಡೋ ಹರಿಯಲ್ಲಿ || 386 ||

ವೀತಿಹೋತ್ರನೆ ಜಗನ್ನಾಥವಿಠ್ಠಲನ ಸಂ-
ಪ್ರೀತಿಪೂರ್ವಕದಿ ತುತಿಸುವ | ತುತಿಸಿ ಹಿಗ್ಗುವ ಭಾಗ್ಯ
ಜಿತವಾಗಿ ಇರಲಿ ಎಮೆದೆಂದು || 387 ||

ಮಂಗಳಂ

ಸುವ್ವಿಪದ

ರಾಗ ಆನಂದಭೈರವಿ    ಆದಿತಾಳ

ಸುವ್ವಿ ಶ್ರೀದೇವಿರಮಣ ಸುವ್ವಿ ಸರ್ವರಾಜಶಯನ
ಸುವ್ವಿ ದೈತ್ಯನಿಕರಹರಣ ಸುವ್ವಿ ನಾರಯ್ಣ |

ಭವ್ಯಚರಿತ ದುರಿತವಿಪಿನಹವ್ಯವಹನ ಭವೇಂದ್ರಾದಿ-
ಸೇವ್ಯಮಾನ ಸುಪ್ರಸಿದ್ಧ ಸುಲಭಮೂರುತೇ ಅವ್ಯಯಾತ್ಮನೇ ಸುಖಾತ್ಮ ನಿನ್ನ ದಿವ್ಯ ಮಹಿಮೆ ತುತಿಪ
ಸುವ್ವಿವೇಕಿಗಳಿಗೆ ಕೊಡುವುದಮಿತಮೋದವ || 388 ||

ವಾಸವಾದ್ಯಮರವಾತಾಶಿಶಾರದೆಂದುಮಧ್ವ- ದೇಶಿಕಾರ್ಯಚಿತ್ತಸಿಂಹಪೀಠಮಧ್ಯಗ ದೇಶಕಾಲವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ-
ಹೀಸಮೇತಕೃಷ್ಣ ಕೊಡಲಿ ನಮಗೆ ಮೋದವ || 389 ||

ಕಮಲಸಂಬವನ ವೇದ ತಮನು ಒಯ್ಯುತಿರಲು ಲಕ್ಷ್ಮಿ- ರಮಣ ಮತ್ಸ್ಯನಾಗಿ ತಂದ ಶರಧಿ ಮಥನದಿ ಕಮಠರೂಪದಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ-
ಸುಮನಸೇಂದ್ರಸ್ವಾಮಿ ಕೊಡಲಿ ಎಮಗೆ ಮಂಗಳ || 390 ||

ಕನಕಲೋಚನನ್ನ ಸದದು ಮನುಜಸಿಂಗವೇಷನಾದ ದ್ಯುನದಿಪಡೆದ ಜನನಿ ಕಡಿದು ವನವ ಚರಿಸಿದ ಜನಪಕಂಸನೊದದು ತ್ರಿಪುರವನಿತೆಸುವ್ರತವನಳಿದ
ವಿನುತ ಕಲ್ಕಿ ದೇವರಾಜ ಎಮ್ಮ ಸಲಹಲಿ || 391 ||

ಪಾಹಿ ಪಾವನ್ನಚರಿತ ಪಾಹಿ ಪಾಹಿ ಪದ್ಮನೇತ್ರ
ಪಾಹಿ ನಿಗಮನಿಕರಸ್ತ್ರೋತ್ರ ಲಲಿತಗಾತ್ರ ಮಾಂ
ಪಾಹಿ ಸುಜನಸ್ತೋಮಮಿತ್ರ ದೋಷದೂರ ಸುಗುಣ ಸಂ-
ದೋಹ ಜಗನ್ನಾಥ ವಿಠ್ಠಲ ಜಯ ತ್ರಿಧಾಮಗ || 392 ||

|| ಶ್ರೀ ಕೃಷ್ಣಾರ್ಪಣಮಸ್ತು ||

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: