Sthree Japa Karma – ಸ್ತ್ರೀ ಜಪ ಕರ್ಮ

ಸ್ತ್ರೀ ಜಪ ಕರ್ಮ

ಸುವಾಸಿನಿಯರು ಮೈತೊಳೆದುಕೊಂಡು ಸ್ವಚ್ಚ ಬಟ್ಟೆಯನ್ನು ಧರಿಸಿ ಪೂರವ/ಉತ್ತರ ಮುಖವಾಗಿ ಕುಳಿತು, ಒಂದು ಉದ್ದರಣೆಯಲ್ಲಿ ನೀರು ತೆಗೆದುಕೊಂಡು – “ಅಪವಿತ್ರ: ಪವಿತ್ರೊ ವಾ ಸರ್ವಾವಸ್ಥಾಂಗತೊಽಪಿ ವಾ | ಯಃ ಸ್ಮರೆತ್ ಪುಂಡರೀಕಾಕ್ಷಮ್ ಸ ಬಾಹ್ಯಾಭ್ಯಂತರಃ-ಸುಚಿಃ”. ಎಂದು ಹೇಳಿ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳಬೇಕು. ನಂತರ, ಗೋಪೀ ಚಂದನವನ್ನು ತೇಯ್ದು, ಹಣೇಯಲ್ಲಿ ಒಂದು ತಿಳಕ ಧರಿಸಬೇಕು. ಗಧಾ ಹಾಗು ನಾರಾಯಣ ಮುದ್ರೆಯನ್ನು ಹಣೆಯಲ್ಲಿ ಧರಿಸಬೇಕು. ಅನಂತರ ಎರಡು ಕೈಗಳ ಮಣಿಕಟ್ಟಿನ ಪಾರ್ಶ್ವಗಳಲ್ಲೂ, ಕುತ್ತಿಗೆಯಲ್ಲೂ, ಎಡ-ಬಲ ಪಕ್ಕೆಗಳಲ್ಲೂ, ಬೆನ್ನಿನ ಹಿಂದೆ ಧರಿಸಿ, ಎಲ್ಲ ಕಡೆ ಕುಂಕುಮವನ್ನು ಧರಿಸಬೇಕು.

ಆಮೇಲೆ ಆಚಮನ ಮಾಡಿ ಸೂರಯನಿಗೆ ಮೂರು ಸಲ ಅರ್ಘ್ಯ ಕೊಡಬೇಕು – “ಸೂರ್ಯಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮಿನಾರಾಯಣಾಯ ಇದಮರ್ಘ್ಯಂ” ಎಂದು ಹೇಳಬೇಕು.

ಆಮೇಲೆ- ಕೇಶವಾಯ ನಮಃ | ನಾರಾಯಣಾಯ ನಮಃ | ಮಾಧವಾಯ ನಮಃ | ಗೊವಿಂದಾಯ ನಮಃ | ವಿಷ್ಣವೇ ನಮಃ | ಮಧುಸೂದನಾಯ ನಮಃ | ತ್ರಿವಿಕ್ರಮಾಯ ನಮಃ | ವಾಮನಾಯ ನಮಃ | ಶ್ರೀಧರಾಯ ನಮಃ | ಹೃಷೀಕೇಶಾಯ ನಮಃ | ಪದ್ಮನಾಭಾಯ ನಮಃ | ದಾಮೋದರಾಯ ನಮಃ | ಸಂಕರ್ಷನಾಯ ನಮಃ | ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ | ಅನಿರುದ್ಧಾಯ ನಮಃ | ಪುರುಷೋತ್ತಮಾಯ ನಮಃ | ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ | ಅಚ್ಯುತಾಯ ನಮಃ | ಜನರ್ದನಾಯ ನಮಃ | ಉಪೇಂದ್ರಾಯ ನಮಃ | ಹರಯೇ ನಮಃ | ಕೃಷ್ಣಾಯ ನಮಃ | ಎಂದು ಎರಡು ಸಲ ಹೇಳಬೇಕು.

ಭೂತಗಳನ್ನು ಓಡಿಸುವುದು – ’ಅಪಸರ್ಪಂತ್ವಿತ್ಯಸ್ಯ ವಾಮದೇವಋಷಿಃ | ಭೂತಾನಿ ದೇವತಾಃ | ಅನುಷ್ತುಪ್ ಚಂದಃ | ಸಮಸ್ತಭೂತೋಚ್ಚಾಟನೇ ವಿನಿಯೋಗಃ’ – “ ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ | ಯೇ ಭೂತಾ ವಿಘ್ನಕರ್ತಾರಃ ತೇ ನಶ್ಯಂತು ಶಿವಾಜ್ಞಯಾ | ಅಪಕ್ರಾಮಂತು ಭೂತಾನಿ ಪಿಶಾಚಾಃ ಸರ್ವತೋ ದಿಶಂ | ಸರ್ವೇಷಾಮವಿರೋಧೇನ ಜಪಕರ್ಮ ಸಮಾರಭೇ |”

ಆಸನ್ಶುದ್ದೀಃ (ಭೂದೇವಿಯನ್ನು ಪ್ರರ್ಥಿಸುವುದು) – ’ಪೃಥಿವ್ಯಾ ಮೇರುಪೃಷ್ಋಷಿಃ | ಕೂರ್ಮೋ ದೇವತಾ | ಸುತಲಂ ಛಂದಃ | ಆಸನೇ ವಿನಿಯೋಗಃ ’ — “ ಪೃಥ್ವಿತ್ವಯಾ ಧೃತಾ ಲೋಕಾ ದೇವಿ ತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯಾ ಮಾಂ ದೇವಿ ಪವ್ವಿತ್ರಂ ಕುರು ಚ್ಚಾಸನಂ | ಮಾಂ ಚ ಪೂತಂ ಕುರು ಧರೇ ನತೋಽಸ್ಮಿ ತ್ವಾಂ ಸುರೇಶ್ವರಿ || ಇತಿ ಭೂಪ್ರಾರ್ಥನಾ

ಆಸನಸ್ಪರ್ಶ – “ಆಸನೇ ಸೋಮಮಓಡಲೇ ಕೋರ್ಮಸ್ಕಂಧೇ ಉಪವೀಷ್ಟೋಽಸ್ಮಿ

ನಮಸ್ಕಾರಮಾಡುವುದು (ಕೈಗಳನ್ನು ಜೋಡಿಸಿ): ಆಂ ಅನಂತಾಸನಾಯ ನಮಃ | ಮಂ ಮಂಡೂಕಾಯ ನಮಃ | ಕೂಂ ಕೂರ್ಮಾಯ ನಮಃ | ವಂ ವರಹಾಯ ನಮಃ | ಶೇಂ ಶೇಷಾಯ ನಮಃ | ಕಾಂ ಕಾಲಾಗ್ನಿ ರುದ್ರಾಯ ನಮಃ | ವಂ ವಜ್ರಾಯ ನಮಃ | .

ಅಥ ಕರಶುದ್ದಿಃ – (ಕೈಗಳನ್ನು ನೀರಿನಿಂದ ಶುದ್ದಿ ಮಾಡುವುದು) – “ಮಣಿಬಂಧೇ ಪ್ರಕೋಷ್ಠೇ ಚ ಕೂರ್ಪರೇ ಹಸ್ತಸಂಷು | ತತ್ಪೃಷ್ಠಪಾರ್ಶ್ವಯೋಶ್ಚೈವ ಕರಶುದ್ಧಿರುದಾಹೃತಾ ||”

ಗುರುನಮಸ್ಕರಃ – ಶ್ರೀಗುರುಭ್ಯೋನಮಃ, ಪರಮಗುರುಭ್ಯೋನಮಃ, ಶ್ರೀಮದಾನಂದತೀರ್ಥ ಭಗವತ್ಬಾದಾಚಾರ್ಯೆಭ್ಯೋನಮಃ, ವೇದವ್ಯಾಸಾಯ ನಮಃ, ಭಾರತೈ ನಮಃ, ಸರಸ್ವತ್ಯೈ ನಮಃ, ವಾಯವೇ ನಮಃ, ಬ್ರಹ್ಮಣೇ ನಮಃ, ಶ್ರೀಮಹಾಲಕ್ಷ್ಮೈ ನಮಃ, ನಾರಾಯಣಾಯ ನಮಃ, ಕೃಷ್ಣಾಯ ನಮಃ, ವಾಸುದೇವಾಯ ನಮಃ | ಹೃತ್ಕಮಲಸ್ಥಿತ ಪರಮಾತ್ಮಾನಂ ಸುಷುಮ್ನಾಮಾರ್ಗೇಣ ಮೂರ್ಧ್ನಿನ್ಯಸೇತ್ |

ಪಾಪಪುರುಷನ ಚಿಂತನೆ – ಶ್ರೀ ಯಂ ಶ್ರೀ, ಶ್ರೀ ರಂ ಶ್ರೀ, ಶ್ರೀ ವಂ ಶ್ರೀ | ಎಂದು ನಲ್ಕು ಬಾರಿ ಹೇಳಿ

ಎಡ ಹೋಟ್ಟೆಯನ್ನು ಮುಟ್ಟಿ – ಬ್ರಹ್ಮಹತ್ಯಾಶಿರಸ್ಕಂ ಚ ಸ್ವರ್ಣಸ್ತೇಯ ಭುಜದ್ವಯಮ್ | ಸುರಾಪಾನ ಹೃದಾಯುಕ್ತಂ ಗುರುತಲ್ಪಕಟಿದ್ವಯಮ್ | ತತ್ಸಂಯೋಗಪದದ್ವಂದ್ವಂ ಅಂಗ ಪ್ರತ್ಯಂಗ ಪಾತಕಮ್ | ಉಪಪಾತಕ ರೋಮಾಣಂ ರಕ್ತಶ್ಮಶ್ರುವಿಲೋಚನಮ್ | ಖಡ್ಗಚರ್ಮಧರಂ ಕೃಷ್ಣಂ ಕುಕ್ಷೌಪಾಪಂ ವಿಚಿಂತಯೇತ್ | ಎಂದು ಹೇಳಿ.

ನಾಭಿಯನ್ನು ಮುಟ್ಟಿ – “ಷಟ್ಕೋಣಮಂಡಲಮಧ್ಯಸ್ಥೋ ನೀಲವರ್ಣೋ ವಾಯ್ವಂತರ್ಗತ ಶ್ರೀ ಪದ್ಯುಮ್ನೋ ಭಗವಾನ್ ಮಚ್ಛರಿರಸ್ಥಪಾಪಪುರುಷಂ ವಾಯುನಾ ಶೋಷಯತು” ಎಂದು ಹೇಳಿ, ಶ್ರೀ ಯಂ ಶ್ರೀ (೬ ಸಾರಿ ಜಪಿಸಿ).

ಹೃದಯವನ್ನು ಮುಟ್ಟಿ – “ತ್ರಿಕೋಣಮಂಡಲಮಧ್ಯಸ್ಥೋ ರಕ್ತವರ್ಣಃ ಅಗ್ನ್ಯಂತರ್ಗತ್ ಶ್ರೀ ಸಂಕರ್ಷಣೋ ಭಗವಾನ್ ಮಚ್ಛರಿರಸ್ಥಪಾಪಪುರುಷಂ ಅಗ್ನಿನಾ ನಿರ್ದಹತು” ಎಂದು ಹೇಳಿ, ಶ್ರೀ ರಂ ಶ್ರೀ (೧೨ ಸಾರಿ ಜಪಿಸಿ). “ತಂ ದಗ್ಧಂ ಭಾವಯೇತ್ ತದ್ಬಸ್ಮ ವಾಮನಾಸಾಪುಟೇನ ಬಹಿರ್ನಿಸ್ಸಾರಯೇತ್” ಎಂದು ಹೇಳಿ, ಎಡಗಡೆಯ ಮೂಗಿನಹೋಳ್ಳೆಯಿಂದ ಹೊರಗೆ ಉಸಿರು ಬಿಡುವುದು. ಕೈಯಲ್ಲಿ ನೀರು ತೆಗೆದುಕೊಂಡು ಪಾದಗಳನ್ನೂ ಕೈಗಳನ್ನು ಒರೆಸಿಕೊಳ್ಳಬೇಕು.

ಶಿರವನ್ನು ಮುಟ್ಟಿ – “ವರ್ತುಲಮಂಡಲಮಧ್ಯಸ್ಥೋ ಶ್ವೇತವರ್ಣಃ ವರುಣಾಂತರ್ಗತ ಶ್ರೀ ವಾಸುದೇವೋ ಭಗವಾನ್ ಮಚ್ಛರಿರಮಮೃತವೃಷ್ಟ್ಯಾ ವರುಣೇನ ಆಪ್ಲಾವಯತು ||” ಎಂದು ಹೇಳಿ, ಶ್ರೀ ವಂ ಶ್ರೀ (೨೪ ಸಾರಿ ಜಪಿಸಿ).

ಬಲ ಹೋಟ್ಟೆಯನ್ನು ಮುಟ್ಟಿ – “ಅಶ್ವಮೇಧ ಶಿರಸ್ಕಂ ಚ ಮಹಾದಾನ ಭುಅಜದ್ವಯಮ್ | ಸೋಮಪಾನ ಹೃದಾಯುಕ್ತಂ ಬ್ರಹ್ಮಚರ್ಯ ಕಟಿದ್ವಯಮ್ | ತತ್ಸಂಯೋಗಪದದ್ವಂದ್ವಂ ಸಾಂಗೋಪಾಂಗ ಶುಭತ್ರಯಮ್ | ಸರ್ವವ್ರತಾಂಗರೋಮಾಣಂ ಗುರುಸೇವಾದಿಲೋಚನಮ್ |”

ಶ್ರೀ ಗುರುರಾಘವೇಂದ್ರ ಧ್ಯಾನಶ್ಲೋಕ – ತಪ್ತಕಾಂಚನಸಂಕಾಶಂ ಅಕ್ಷಮಾಲಾ ಕಮಂಡಲಂ ದೋರ್ಭ್ಯಾಂ ದಧಾನಂ, ಕಾಷಾಯವಸನಂ ರಾಮಮಾನಸಂ | ಯೋಗೀಂದ್ರತೀರ್ಥವಂದ್ಯಾಂಘ್ರೀಂ ತುಲಸೀದಾಮಭೂಷಿತಂ ಜ್ಞಾನಭಕ್ತಿತಪಃಪೂರ್ಣಂ ಧ್ಯಾಯೇತ್ ಸರ್ವಾಥಸಿದ್ಧಯೇ || ಎಂದು ಹೇಳಿ, ಅನಂತರ “ಗುರುರಾಜಾಂತರ್ಗತ ಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಮೂಲರಾಮಪ್ರೀತ್ಯರ್ಥಂ ಗುರುಮಂತ್ರಜಪಂ ಕರಿಷ್ಯೇ” ಎಂದು ಹೇಳಿ (೧೦೮ ಸಲ) ಶ್ರೀ ರಾಘವೇಂದ್ರಯ ನಮಃ ಮಂತ್ರ ಜಪಿಸಿ.

ಅಥ ಶ್ರೀಕೃಷ್ಣಮಂತ್ರಃ

ಪ್ರಾಣಾಯಾಮ – “ಶ್ರೀ ಕ್ಲೀಂ ಕೃಷ್ಣಾಯ ನಮಃ ಶ್ರೀ” ಎಂದು ಮೂರು ಬಾರಿ ಪ್ರಾಣಾಯಾಮ ಮಾಡುವುದು.

ಷಡಂಗನ್ಯಾಸ – ಶ್ರೀ ಪೂರ್ಣಪ್ರಜ್ಞಾತ್ಮನೇ ಹೃದಯಾಯ ನಮ್ಮಃ (ಎದೆಯನ್ನು ಮುಟ್ಟಿ) | ಶ್ರೀ ಪುರ್ಣಐಶ್ವರ್ಯಾತ್ಮನೇ ಶಿರಸೇ ಸ್ವಾಹಾ (ತಲೆಯನ್ನು ಮುಟ್ಟಿ) | ಶ್ರೀ ಪುರ್ಣಪ್ರಭಾತ್ಮನೇ ಶಿಖಾಯೈವೌಷಟ್ (ಶಿಖೆಯನ್ನು ಮುಟ್ಟಿ) | ಶ್ರೀ ಪುರ್ಣನಂದಾತ್ಮನೇ ಕವಚಾಯ ಹುಂ (ಎರಡು ಕೈಗಳನ್ನು ಕವಚದಂತೆ ಮೋಳಕೈಗಳು ವಕ್ಷಃಸ್ಥಳಕ್ಕೆ ತಗಲುವಂತೆ ಮಾಡಬೇಕು) | ಶ್ರೀ ಪುರ್ಣತೇಜಾತ್ಮನೇ ನೇತ್ರಾಭ್ಯಾಂ ವೌಷಟ್ (ಕಣ್ಣುಗಳನ್ನು ಮುಟ್ಟಿ) | ಶ್ರೀ ಪುರ್ಣಶಕ್ತ್ಯಾತ್ಮನೇ ಅಸ್ತ್ರಾಯಫಟ್ (ಒಂದು ಸಲ ಚಪ್ಪಾಳೆತಟ್ಟಿ).

ಅಸ್ಯ ಶ್ರೀಕೃಷ್ಣಷಡಕ್ಷರಮಹಾಮಂತ್ರಸ್ಯ ಬ್ರಹ್ಮಋಷಿಃ | ಗಾಯತ್ರೀಚ್ಛಂದಃ | ಶ್ರೀಕೃಷ್ಣೋ ದೇವತಾ | ಶ್ರೀಕೃಷ್ಣಪ್ರಿತ್ಯರ್ಥೇ ಜಪೇ ವಿನಿಯೋಗಃ |

ಧ್ಯಾನ – “ಧ್ಯಾಯೇದ್ಧರಿನ್ಮಣಿನಿಭಂ ಜಗದೇಕವಂದ್ಯಂ ಸೌಂದರ್ಯಸಾರಮರಿಶಂಖವರಾಭಯಾನಿ | ದೋರ್ಭಿರ್ದಧಾನಮಜಿತಂ ಸರಸಂ ಚ ಬೈಷ್ಮೀ ಸತ್ಯಾಸಮೇತಮಖಿಲಪ್ರದಮಿಂದಿರೇಶಮ್ |” ಎಂದು ಹೇಳಿ, ಶ್ರೀ ಕ್ಲೀಂ ಕೃಷ್ಣಾಯ ನಮಃ ಶ್ರೀ ಎಂದು ಜಪ (೧೦, ೨೦, ….., ೧೦೮, ೧೦೦೮) ಬಾರಿ ಮಾಡಿ. ನಂತರ ಶ್ರೀ ಕ್ಲೀಂ ಕೃಷ್ಣಾಯ ನಮಃ ಶ್ರೀ ಎಂದು ೧೦ಕ್ಕೆ ೧ರಂತೆ ಅರ್ಘ್ಯ ಕೊಡಿ.

ಪುನಃ ಪ್ರಾಣಾಯಾಮ, ಅಂಗನ್ಯಾಸ, ಕರನ್ಯಾಸ, ಧ್ಯನವನ್ನು ಮಾಡಿ.

ಆನೇನ ಶ್ರೀಕೃಷ್ಣಷಡಕ್ಷರಮಹಾಮಂತ್ರ ಜಪೇನ ಮಧ್ವಾಂತರ್ಗತ ಶ್ರೀಗೋಪಾಲ ಕೃಷ್ಣ ಪ್ರೀಯತಾಂ | ಶ್ರೀಕೃಷ್ಣಾರ್ಪಣಮಸ್ತು.

ನಾಮತ್ರಯ ಜಪ – ಜಪಕಾಲೇ ಮಂತ್ರತಮ್ತ್ರಸ್ವರವರ್ಣಭಕ್ತಿಲೋಪದೋಷಪ್ರಾಯಶ್ಚಿತಾರ್ಥಂ ನಾಮತ್ರಯಜಪಮಹಂ ಕರಿಷ್ಯೇ –
ಅಚ್ಯುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಎಂದು ಕಡಿಮೆಯಂದರೆ ಮೂರು ಬಾರಿ ಜಪಿಸಿ).

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: