ಶ್ರೀವ್ಯಾಸರಾಜರ ಭಗವದ್ಗೀತಾಸಾರ

ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ ||ಪ||

ಶ್ಲೋಕ |

ಕುರುಕ್ಷೇತ್ರದಿ ಎನ್ನವರು ಪಾಂಡವರು

ಪೇಳೋ ಸಂಜಯಾ ಏನು ಮಾಡುವರು ಕೂಡಿ |

ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾ|

ಮಾತನಾಡಿದ ನಿನ್ನ ಸುತ ದ್ರೋಣಗಿಂತು ||

ಪಲ್ಲವಿ|

ಕೇಳಿ ತಾ ಪಾರ್ಥನು ಕುರು ದಂಡ

ರಣದಲಿ ಚಂಡ | ಗಾಂಡೀವ ಕರದಂಡ

ಅಚ್ಯುತ ಪಿಡಿರಥ ನಡೆ ಮುಂದ

ಬಹು ತ್ವರದಿಂದ | ನೋಡುವೆ ನೇತ್ರದಿಂದ ||

ಗುರುಹಿರಿಯರ ಕೂಡ ಯಾಕೆಂದ

ಯುದ್ಧ ಸಾಕೆಂದ | ಭಿಕ್ಷವೆ ಸುಖವೆಂದ||

ಕುಂತಿಸುತ ಈ ಮಾತು ಉಚಿತಲ್ಲ

ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ ||೧||

ಶ್ಲೋಕ|

ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ

ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ|

ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ

ಬಿಲ್ಲು ಪಿಡಿದು ಕೀರ್ತಿಪಡೆ ಲೋಕದಲ್ಲಿ ||

ಪಲ್ಲವಿ|

ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ

ಈ ದೇಹಕ್ಕೆ| ಪಾವಕನ ದಾಹಕ್ಕೆ |

ಉದಕಗಳಿಂದ ವೇದನೆಯಕ್ಕೆ

ಜೀವಕ್ಕ | ಮಾರುತನ ಶೋಷಕ್ಕೆ

ನಿತ್ಯ ಅಭೇದ್ಯ ತಾ ಜೀವನ

ಸನಾತನ| ವಸ್ತ್ರದಾಂಗೆ ಈ ತನವು |

ನನಗಿಲ್ಲಯ್ಯ|ಅದನಾ ಬಲ್ಲೆನಯ್ಯಾ ||೨||

ಶ್ಲೋಕ|

ಜ್ಞಾನ ದೊಡ್ಡದು ಕರ್ಮಬಂಧನವ ಬಿಟ್ಟು

ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು |

ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ

ಸಮ ದೇಹಕೆ ಫಲಕರ್ಮ ಕಾರಣವಲ್ಲ ||

ಪಲ್ಲವಿ |

ಕರ್ಮದಲ್ಲೆ ನಿನಗಧಿಕಾರ

ಫಲ ತಾ ದೂರ| ಧನುಂಜಯಗೋಸ್ಕರ|

ಇತ್ತ ಬಾರಯ್ಯ | ಯೋಗಬುದ್ಧಿ ಮಾಡಯ್ಯ|

ಜಿತ ಬುದ್ಧಿ ಯಾವುದೈ ಕೇಶವ

ಜಗತ್ಪಾಶವ | ನೋಡದೇ ಪರಮೇಶ |

ಗೋವಿಂದನಲಿ ಮನವಿಟ್ಟವ

ಕಾಮ ಬಿಟ್ಟವ ಜಿತ ದೇಹ ತಾನಾದಾ ||೩||

ಶ್ಲೋಕ|

ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ

ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನಪ||

ಕರ್ಮವಿಲ್ಲದೆ ಮೋಕ್ಷವುಂಟೆ ಇನ್ನು

ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ||

ಪಲ್ಲವಿ |

ಯುದ್ಧ ಕರ್ಮವ ಮಾಡೋ ಪಾಂಡವ

ರಣ ತಾಂಡವ | ವೈರಿ ಷಂಡನೆಂಬುವ|

ಜನರೆಲ್ಲ ಮಾಳ್ಪರೋ ನಿನ್ನ ನೋಡಿ

ಮತ್ತೆನ್ನ ನೋಡಿ | ನೋಡಿದರ ನೀ ಬೇಡಿ |

ಎನಗ್ಯಾಕೆ ಪೇಳಯ್ಯ ಜನಕರ್ಮ

ಕ್ಷತ್ರಿಯ ಧರ್ಮ | ನಷ್ಟವಾಗುವದು ಧರ್ಮ|

ಅರ್ಪಿಸು ಎನ್ನಲ್ಲಿ ಸರ್ವವು

ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು ||೪||

ಶ್ಲೋಕ|

ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು

ಭೋಗವರ್ಜಿತ ಕೀಳು ಸನ್ಯಾಸಿಯಿರವು |

ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ

ಹಾಗೆ ಭಕ್ತಿಗೆ ಸಂಸೃತಿಯ ಇಲ್ಲ ||

ಪಲ್ಲವಿ |

ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ

ಸಮನಾನಲ್ಲಿ| ಭಜಿಪರ ಮನದಲ್ಲಿ

ಮನಸು ಯಾರ ಜೀವಕೆ ಬಂದು

ಇತ್ತ ಬಾರೆಂದು | ಮತ್ತೆ ವೈರಿ ದಾರೆಂದು|

ಲೋಷ್ಟ ಕಾಂಚನ ನೋಡು ಸಮಮಾಡಿ|

ಆಸನ ಹೂಡಿ | ನಾಸಿಕ ತುದಿ ನೋಡಿ|

ಧ್ಯಾನ ಮಾಡು ಹರಿ ಅಲ್ಲಿಹ

ಅವನಲ್ಲಿಹ | ಯೋಗ ಸನ್ನಿಹಿತನವನೇ ||೫||

ಶ್ಲೋಕ|

ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ

ಘೋರ ಸಂಸಾರ ಯಾತನೆ ಅವರಿಗೆಲ್ಲಿ|

ಶರೀರವೆ ಕ್ಷೇತ್ರವೆಂತೆಂದು ತಿಳಿಯೋ||

ಪಲ್ಲವಿ | ಶರೀರದೊಳಗಿದ್ದು ಪಾಪಿಲ್ಲ

ದುಃಖಲೇಪಿಲ್ಲ | ಆಕಾಶವು ಎಲ್ಲಾ|

ಮೂರು ಸದ್ಗುಣ |ಕೇಳೈಯ್ಯ ಫಲ್ಗುಣ|

ಸುಖದುಃಖ ಸಮಮಾಡಿ ನೋಡು ನೀ |

ಈಡ್ಯಾಡು ನೀ| ಬ್ರಹ್ಮನ ನೋಡು ನೀ|

ಸೂರ್ಯ ಚಂದ್ರರ ತೇಜ ನನದಯ್ಯ

ಗುಡಾಕೇಶಯ್ಯ| ಅನ್ನ ಪಚನ ನನ್ನದಯ್ಯ ||೬||

ಶ್ಲೋಕ|

ನಾನೇ ಉತ್ತಮ ಮನಸು ಎನ್ನಲ್ಲು ಮಾಡೋ

ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ

ಜ್ಞಾನ ದುರ್ಲಭ ಅವರ ಭಕ್ತಿಗಳಂತೆ

ನಾನು ಕೊಡುವೆನು ಫಲವ ಮನಸು ಬಂದಂತೆ||

ಪಲ್ಲವಿ |

ಸ್ಮರಣೆ ಮಾಡುತ ದೇಹ ಬಿಡುವರೋ

ನನ್ನ ಪಡೆವರೋ | ಬಲು ಭಕ್ತಿ ಮಾಡುವರೋ|

ಅನಂತ ಚೇತನ ಸುಳಿವೆನು

ಹರಿ ಸುಲಭನು | ಮತ್ತೆ ಜನನವಿಲ್ಲವಗೆ|

ಎನ್ನ ಭಕ್ತರಿಗಿಲ್ಲ ನಾಷವು

ಸ್ವರ್ಗದಾಶವು| ಬಿಟ್ಟು ಚರಣ ಭಕುತಿಯ ||೭||

ಶ್ಲೋಕ|

ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |

ಇಷ್ಟ ಪೂರ್ತಿಯ ಆಗಲೊ ಎನಗೆ ಶ್ರೀಪ|

ರಾಮ ನಾನಯ್ಯ ರಾಜರ ಗುಂಪಿನಲ್ಲಿ

ಸೋಮ ನಾನಯ್ಯ ರಾಜರ ಗುಂಪಿನಲ್ಲಿ

ಸೋಮ ನಾನಯ್ಯ ತಾರಕ ಮಂಡಲದಲಿ||

ಪಲ್ಲವಿ |

ಅಕ್ಷರದೊಳಗೆ ಅಕಾರನು

ಗುಣಸಾರನು| ಪಕ್ಷಿಗಳಲಿ ನಾನು ಗರುಡನು|

ಸಕಲ ಜಾತಿಗಳಲ್ಲಿ

ಶ್ರೇಷ್ಟತನದಲಿ| ಎನ್ನ ರೂಪ ತಿಳಿಯಲ್ಲಿ|

ತೋರಿಸೋ ಶ್ರೀಕೃಷ್ಣ ನಿನ್ನ ರೂಪ|

ನಾನಾ ರೂಪ| ಅರ್ಜುನ ನೋಡೋ ರೂಪ|

ಕಂಡನು ತನ್ನನು ಸಹಿತದಿ |

ಹರಿ ದೇಹದಿ| ಬ್ರಹ್ಮಾಂಡಗಳಲ್ಲಿ ||೮||

ಶ್ಲೋಕ|

ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು|

ಗೋರ ನರಕದ ಲೋಭ ಕಾಮನು ನಾನು |

ಸಾರ ದಾನವು ಸಜ್ಜನರ ಹಸ್ತದಲ್ಲಿ

ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ||

ಪಲ್ಲವಿ |

ಸರ್ವ ದಾನದಕಿಂತ ಎನಭಕ್ತಿ

ಕೇಳೊ ಭೂಶಕ್ತಿ | ಮಾಡಯ್ಯ ವರಕ್ತಿ |

ಕೃಷ್ಣ ಹರಣವಾಯ್ತು ನಿನ್ನಿಂದ

ಮೋಹ ಎನ್ನಿಂದ| ಬಹು ಸುವಾಕ್ಯ ದಿಂದ

ಕೃಷ್ಣ ಭೀಮಾನುಜರ ಸಂವಾದ

ಮಹ ಸುಖಪ್ರದ| ಧೃತರಾಷ್ಟ್ರ ಕೇಳಿದ|

ಬಲ್ಲೆನು ವ್ಯಾಸರ ದಯದಿಂದ|

ಮನಸಿನಿಂದ| ಕೃಷ್ಣನಲ್ಲೇ ಜಯವೆಂದ ||೯||

|| ಶ್ರೀ ಕೃಷ್ಣಾರ್ಪಣಮಸ್ತು ||

Advertisements

ಜಯ ಜಯ ಜಗತ್ರಾಣ | ಜಗದೊಳಗೆ ಸುತ್ರಾಣ | ಅಖಿಲಗುಣ ಸದ್ಧಾಮ | ಮಧ್ವನಾಮ

ಜಯ ಜಯ ಜಗತ್ರಾಣ | ಜಗದೊಳಗೆ ಸುತ್ರಾಣ | ಅಖಿಲಗುಣ ಸದ್ಧಾಮ | ಮಧ್ವನಾಮ
This Pallavi of Madhvanama extols Lord of Wind (Vayudeva) and his three incarnations by the four adjectives, and it can be appropriated only to Lord Vayu and none else. This poetic work (Kruti) emphasis and glorifies the power, strength, character, and his infinite actions (ಅನಂತ ವ್ಯಾಪಾರ).
The adjective “Jaya” is repeated which emphasizes two sets of attributes. The first instance of Jaya (ಜಯ) is extolling his Knowledge, devotion, resignedness / asceticism, strength, bravery, and other extra-ordinary (ಜ್ಞಾನ, ಭಕ್ತಿ, ವೈರಾಗ್ಯ, ಬಲ, ವೀರ್ಯಾದಿ ಮಹದ್ಗುಣಗಳು) attributes that is not seen in any of infinite Jivas (ಜೀವಕೋಟಿ). The second instance of Jaya (ಜಯ) is describing that the Vayu Deva will be the next Brahma.
The adjective “Jagatrana (ಜಗತ್ರಾಣ)” is indicating that he is supporting this Brahmanda (ಬ್ರಹ್ಮಾಂಡ) as Vayu Kurma and stabilizing it. This also shows is limitless power and his benevolence towards Jivas.
The adjective “Jagadolage Sutrana (ಜಗದೊಳಗೆ ಸುತ್ರಾಣ)” means he is spread across this Brahmanda and protects & bestows all life forms.
The adjective Akhilaguna Saddhama (ಅಖಿಲಗುಣ ಸದ್ಧಾಮ) means he is greater than all demi-gods starting from Saraswati, Bharathi, Rudra and others in terms of Knowledge, devotion, resignedness/asceticism, strength, bravery, and other extra-ordinary (ಜ್ಞಾನ, ಭಕ್ತಿ, ವೈರಾಗ್ಯ, ಬಲ, ವೀರ್ಯಾದಿ ಮಹದ್ಗುಣಗಳು).
The word Madhvanama (ಮಧ್ವನಾಮ) is referring to his third incarnation as Acharya Madhwa, and especially the word Madhwa depicts his blemishless happiness, all-inclusive knowledge, all auspicious qualities, and the one who has authored scriptures that leads to Moksha.
The four adjectives also represent him in terms of his base form and his three incarnations. The first adjective represents Base Form, the second adjective represents his Hanumantha incarnation, the third adjective represents Bhīma, and the fourth adjective represents Acharya Madhwa.

Lord of Wind is a true reflection of Almighty Narayana, and due to this, he is the greatest amongst infinite jivas in terms of auspicious qualities. He is also extolled in many Veda suktas, and in this Brahmanda, he exists in infinite forms. He is constantly engaged in managing and completing God’s work. He is the personification of compassion, he uplifts and protects all devotees of Sri Hari, he has incarnated as Hanuma-Bhīma-Madhwa. He is the remover of all ill-doctrines, and from time unmemorable he is giving the knowledge of truth, five-fold difference, hierarchy, all sound narrates Sri Hari. In all time, all place, all state, without any bit of change, he is serving Sri Hari on Lord’s orders. He has all the unique 32 characteristics akin to Brahma.
He resides in all three type of jivas and performs all activities and hence he is called as Vayunamaka – Satprada. Since he is the main reason for the movement and functioning of Jivas in their subtle body, he is called as Praanamaka – Chestaprada. By residing in the four types of Jivas body and protecting them, he is called as Dharmanamaka – Dharanaprada. Finally, since he is the approver of suitable mukti to a Jiva on its intrinsic quality, he is called as Muktinamaka – Muktiprada.

Gayatri Suladi – Purandara Dasaru

ನೀನೆ ಮುಖ್ಯಕಾರಣ|
ಆಕಾರಣರೊ ಬೊಮ್ಮಾದಿಗಳು|
ನೀನೇವೇಕರ್ತು ಅಕರ್ತುಗಳವರು|
ಸರ್ವಸ್ವತಂತ್ರ ನೀನು ಅಸ್ವತಂತ್ರರವರು|
ಮೂಲ್ ನೀನು ಮಧ್ಯಮರವರು|
ನಿತ್ಯನೆಂದೆನಿಪ ನೀನು ಲಯರಂತರಾತ್ಮಕನಾಗಿ|
ಸ್ವೀಕರಿಸುವ ನಿನಾಧೀನವಯ್ಯ|
ಅನಾದಿ ಕಾಲ ಕರ್ಮ ಗುಣಗಳನನುಸ್ರಿಸಿ|
ಘಲಗಳನುಣಿಸುವೆ ಪುರಂದರವಿಠಲ |೧|

ತನ್ನಿಂದೊಂದೆರಡು ಜ್ಞಾನ ಗುಣಾಧಿಕರ|
ಮೊದಲು ಮಾಡಿಕೊಂಡು ಬೊಮ್ಮನ ಪರಿಯಂತ|
ತಾರತಮ್ಯ ಪಂಚಭೇದ ಮಾರ್ಗವರಿತು|
ನವವಿಧ ಸದ್ಭಕ್ತಿಯುಕ್ತನಾಗಿ ನಿತ್ಯ|
ಜನನ ಮರಣ ದೂರ ಪುರಂದರವಿಠಲ ನ್ನ |
ಗುಣ ರೂಪಕ್ರಿಯವನ್ನೇ ತಿಳಿಯಬೇಕು |೨|

ಪುರುಷ ಸೂಕ್ತವೇ ಮೊದಲಾದ ವೇದಗಳಿಂದ|
ಮತ್ತೇ ಕೆಲವು ಉಪನಿಷದ್ವೇದ್ಯನು ನೀನೇ|
ಮಹಾಭಾರತ ಪುರಾಣಗಳಲ್ಲಿದ್ದ ರೂಪ|
ಗುಣಕ್ರೀಯಾಗಳು ಸಾರ್ವಭೌಮ ಬೊಮ್ಮ ಬಲ್ಲ|
ಆತನಿಂದಲಿ ವಾಣಿ ಭಾರತೇರ್ಬಲ್ಲರು|
ವಾಣಿಯಿಂದಲಿ ಮಹಾದೇವ ತಾ ಬಲ್ಲನು|
ರುದ್ರನಿಂದಲಿ ಉಮಾದೇವಿಯು ಬಲ್ಲಳು|
ಉಮೆಯಿಂದ ಇಂದ್ರ ಕಾಮರು ಬಲ್ಲರು|
ಸಕಲ ದೇವತೆಗಳು ಪುರಂದರವಿಠಲನ|
ಬಲ್ಲರಿಯರೋ ಸಾಕಲ್ಯದಿಂದ |೩|

ಓಂಕಾರ ಪ್ರತಿಪಾದ್ಯವ್ಯಾಹೃತಿಯೊಳಗಿದ್ದು|
ಗಾಯತ್ರಿ ಎನಿಸುವೆ ಪುರುಷಸೂಕ್ತಮೇಯ|
ಏಕೋತ್ತರಪಂಚಾಶದ್ವರಣಗಳಲ್ಲಿ|
ವರ ಕಲ್ಪಕಲ್ಪಕ್ಕು ವರದ ಪುರಂದರವಿಠಲ|
ವ್ಯಾಹೃತಿಯೋಳಗಿದ್ದು ಗಾಯತ್ರಿ ಎನಿಸುವೆ |೪|

ಓಂ ಆಶೇಷಗುಣಧಾರ ಇತಿ ನಾರಾಯಣಸ್ಯ ಸೋ |
ಪೂರ್ಣೋ ಭವತಿ ವರೋನಂತಗುಣೋ|
ಸುಖೋ ಯದ್ವ್ಯಾಹೃತಿರೀರಿತಾ|
ಗುಣೈಸ್ತತಃ ಪ್ರಸ್ವಿತಾ| ವರ್ಣಿಯಾನ್ ಗುಣೋನ್ನತೆ|
ಭಾರತೀ ಜ್ಞಾನರೂಪತ್ವಾತ್ ಭ್ರ್ಗೋಧೇಯೋ ಖಿಳೈರ್ಜನ್ಯೆಃ |
ಪ್ರೇರಕಾಶೇಷ ಬುದ್ಧೀನಾಂ|ಸ ಗಾಯತ್ರ್ಯರ್ಥ ಈರಿತಃ |
ಪುರಂದರವಿಠಲ ಸರ್ವೋತ್ತಮ ಕಾಣಿರೋ |೫|

ನಿನ್ನ ಮಹಿಮೆಗಳ ನೀನೆ ಬಲ್ಲದೆ |
ಅನ್ಯರೇನು ಬಲ್ಲರು ಪುರಂದರವಿಠಲ |೬|

ಶ್ರೀಮದ್ವಾದಿರಾಜ ಪೂಜ್ಯಶ್ರೀಚರಣಂ ವಿರಚಿತಂ ಶ್ರೀರಾಮಕವಚಮ್ ||

Sri Rama Kavacham

ಕಪಿಕಟಕಧುರಿಣ ಕಾರ್ಮುಕನ್ಯಸ್ತಬಾಣ: ಕ್ಷಪಿತದಿತಿಜಸೈನ್ಯ: ಕ್ಷತ್ರಿಯೇಷ್ವಗ್ರಗಣ್ಯ: |
ಜಲಧಿರಚಿತಸೇತುರ್ಜಾನಕೀತೋಷಹೇತು: ಪಥಿ ಪಥಿ ಗುಣಸಾಂದ್ರ: ಪಾತು ಮಾಂ ರಾಮಚಂದ್ರ: || ೧ ||

ಕಪಿಸೇನೆಗೆ ಪ್ರಧಾನನಾಯಕನು, ಬಿಲ್ಲಿಗೆ ಬಾಣವನ್ನು ಜೋಡಿಸಿ ಹಿಡಿದಿರುವವನು, ದೈತ್ಯಸೇನೆಯನ್ನು ನಾಶಪಡಿಸಿರುವವನು, ಕ್ಷತ್ರಿಯಶ್ರೇಷ್ಠ , ಸಮುದ್ರದಲ್ಲಿ ಸೇತುನಿರ್ಮಾಣ ಮಾಡಿದವನು, ಸೀತಾದೇವಿಯರಿಗೆ ಸಂತೋಷಪ್ರದನಾದವನು ಮತ್ತು ಗುಣಪೂರ್ಣನೂ ಆದ ಶ್ರೀರಾಮಚಂದ್ರನು ನನ್ನ ಪ್ರಯಾಣದ ಪ್ರತಿಯೊಂದು ಮಾರ್ಗದಲ್ಲಿಯೂ ನನ್ನನ್ನು ಕಾಪಾಡಲಿ.

ಶ್ರೀಮತ್ಕಿರೀಟವಿಭ್ರಾಜಿಶಿರಾ ರಾಮ: ಶಿರೋsವತು |
ಕುಟಿಲಾಲಕಸಂಶೋಭಿಲಲಾಟಾಂತ: ಸುರಾರ್ಥಿತ: || ೨ ||

ಮಾಣಿಕ್ಯಮೌಕ್ತಿಕೋದ್ಭಾಸಿತಿಲಕ: ಸೂರ್ಯವಂಶಜ: |
ಲಲಾಟಂ ಪಾತು ಸುಭ್ರೂರ್ಮೇ ಕೌಸಲ್ಯಾನಂದನೋ ಭ್ರುವೌ || ೩ ||

ಕಾಂತಿಯುಕ್ತವಾದ ಕಿರೀಟದಿಂದ ಶೋಭಿತವಾದ ಶಿರಸ್ಸುಳ್ಳ ರಾಮನು ನನ್ನ ತಲೆಯನ್ನು ರಕ್ಷಿಸಲಿ. ಗುಂಗುರು ಕೂದಲುಗಳಿಂದ ಸುಶೋಭಿತವಾದ ಹಣೆಯ ಕೊನೆಯ ಭಾಗವುಳ್ಳ ದೇವತೆಗಳಿಂದ ಪ್ರಾರ್ಥಿತನಾದ, ಮಾಣಿಕ್ಯ ಮತ್ತು ಮುತ್ತುಗಳಿಂದ ಪ್ರಕಾಶಿಸುವ ತಿಲಕವುಳ್ಳ ಸೂರ್ಯವಂಶಜನಾದ ಶ್ರೀರಾಮನು ನನ್ನ ಹಣೆಯನ್ನು ರಕ್ಷಿಸಲಿ. ಸುಂದರವಾದ ಹುಬ್ಬುಗಳುಳ್ಳ ಕೌಸಲ್ಯಾನಂದನನು ನನ್ನೆರಡು ಹುಬ್ಬುಗಳನ್ನು ರಕ್ಷಿಸಲಿ.

ಧನುರ್ವಿದ್ಯಾಪಾರದೃಶ್ವಾ ನೇತ್ರೇ ಪಾತ್ವಬ್ಜಲೋಚನ: |
ಲಸನ್ನಾಸಾಪುಟೋ ನಾಸಾಂ ವಿಶ್ವಾಮಿತ್ರವೃತೋsವತು || ೪ ||

ಧನುರ್ವಿದ್ಯೆಯಲ್ಲಿ ಪಾರಂಗತನಾದ, ಕಮಲಲೋಚನನಾದ ಶ್ರೀರಾಮನು ನನ್ನೆರಡು ಕಣ್ಣುಗಳನ್ನು ಕಾಪಾಡಲಿ. ವಿಶ್ವಾಮಿತ್ರರಿಂದ ಸ್ವೀಕೃತನಾದ ಶೋಭಿಸುತ್ತಿರುವ ನಾಸಾಪುಟವುಳ್ಳ ಶ್ರೀರಾಮನು ನನ್ನ ಮೂಗನ್ನು ಕಾಪಾಡಲಿ.

ಬಿಂಬೋಷ್ಠೋsವ್ಯಾನ್ಮದೀಯೌಷ್ಠೌ ಶಂಭುಕಾರ್ಮುಕಭಂಜನ: |
ಕುಂದಕೋಶಲಸದ್ದಂತೋ ದಂತಾನ್ಮೇ ಜಾನಕೀಪತಿ: || ೫ ||

ರುದ್ರದೇವರ ಧನಸ್ಸನ್ನು ಮುರಿದಿರುವ, ತೊಂಡೆಹಣ್ಣಿನಂತಹ ತುಟಿಯುಳ್ಳ ಶ್ರೀರಾಮನು ನನ್ನ ಎರಡು ತುಟಿಗಳನ್ನು ಕಾಪಾಡಲಿ. ಮಾಗಿಮಲ್ಲಿಗೆ ಮೊಗ್ಗಿನಂತೆ ಶೋಭಿಸುತ್ತಿರುವ ಹಲ್ಲುಳ್ಳ ಜಾನಕೀಪತಿಯು ನನ್ನ ಹಲ್ಲುಗಳನ್ನು ಕಾಪಾಡಲಿ.

ಮನೋಜ್ಞರಸನೋ ಜಿಹ್ವಾಂ ಪಾತು ಲೋಕಮಯಾಂತಕೃತ್ |
ವಾಚಾಂ ವ್ಯಾಖ್ಯಾವಿದಗ್ಧೋsವ್ಯಾತ್ತ್ಯಕ್ತಸಾಮ್ರಾಜ್ಯಸಂಭ್ರಮ: || ೬ ||

ಪರಶುರಾಮನಲ್ಲಿ ಸೇರಿದ ಲೋಕಮಯರಾಕ್ಷಸರನ್ನು ಸಂಹಾರ ಮಾಡಿರುವ,  ಮನೋಹರವಾದ ನಾಲಿಗೆಯುಳ್ಳ ಶ್ರೀರಾಮನು ನನ್ನ ನಾಲಿಗೆಯನ್ನು ಕಾಪಾಡಲಿ. ಸಾಮ್ರಾಜ್ಯ ವೈಭವವನ್ನು ಬಿಟ್ಟಿರುವ ಉಪನ್ಯಾಸ ವಿಶಾರದನಾದ ಶ್ರೀರಾಮಚಂದ್ರನು ನನ್ನ ಮಾತನ್ನು ಕಾಪಾಡಲಿ.

ಆಸ್ಯಂ ಚಂದ್ರೋಪಮಾಸ್ಯೋsವ್ಯಾದ್ರಾಮಚಂದ್ರೋ ವನೇಚರ: |
ಕಂಬುಗ್ರೀವೋsವತು ಗ್ರೀವಾಂ ಖರದೂಷಣಸೈನ್ಯಜಿತ್ || ೭ ||

ವನಚಾರಿಯಾದ ಮತ್ತು ಚಂದ್ರನಂತೆ ಮುಖವುಳ್ಳ ಶ್ರೀರಾಮಚಂದ್ರನು ಮುಖವನ್ನು ಕಾಪಾಡಲಿ. ಖರದೂಷಣರ ಸೈನ್ಯವನ್ನು ಜಯಿಸಿದ,  ಶಂಖದಂತಹ ಕುತ್ತಿಗೆಯುಳ್ಳ ಶ್ರೀರಾಮಚಂದ್ರನು ನಮ್ಮ ಕತ್ತನ್ನು ಕಾಪಾಡಲಿ.

ಚಾರುದೀರ್ಘಕರ: ಪಾಣೀ ಮಾರೀಚಮೃಗಲುಬ್ಧಕ: |ಕಂಕಣಾಂಗದಮುದ್ರಾಢ್ಯೋsಂಗುಲೀಸ್ತ್ಯಕ್ತಪ್ರಿಯಾಕೃತಿ: || ೮ ||

ಮಾಯಾಮೃಗರೂಪನಾದ ಮಾರೀಚನೆಂಬ ಮೃಗವನ್ನು ಬೇಟೆಯಾಡುವ ಬೇಟೆಗಾರನಾದ,  ಸುಂದರವಾದ ಉದ್ಧವಾದ ಕೈಗಳುಳ್ಳ ಶ್ರೀರಾಮನು ನನ್ನ ಕೈಗಳನ್ನು ಕಾಪಾಡಲಿ. ಪ್ರಿಯರಾದ ಸೀತೆಯರ ಆಕೃತಿಯನ್ನು ತ್ಯಜಿಸಿರುವ ಬಳೆ, ತೋಳ್ಬಳೆ ಉಂಗುರಗಳಿಂದ ಶ್ರೀಮಂತನಾದ.

ಪಾತು ಪೀನಾಂಸಯುಗ್ಮೋsಸೌ ಹನೂಮನ್ನಯನೋತ್ಸವ: |
ಹಾರಕೌಸ್ತುಭಭೃತ್ಕಂಠಮೂಲಂ ಸುಗ್ರೀವಸಖ್ಯಕೃತ್ || ೯ ||

ಪುಷ್ಟವಾದ ಎರಡು ಹೆಗಲುಗಳುಳ್ಳ ,  ಹನುಮಂತದೇವರ  ಕಣ್ಮನಗಳಿಗೆ ಆನಂದಕರನಾದ ಶ್ರೀರಾಮಚಂದ್ರನು ನನ್ನ ಬೆರಳುಗಳನ್ನು ಕಾಪಾಡಲಿ. ಹಾರವನ್ನು, , ಕೌಸ್ತುಭವನ್ನೂ  ಧರಿಸಿರುವ,  ಸುಗ್ರೀವನೊಡನೆ ಸ್ನೇಹವನ್ನು ಮಾಡಿರುವ ಶ್ರೀರಾಮಚಂದ್ರನು ನನ್ನ ಕುತ್ತಿಗೆಯ ಬುಡವನ್ನು ಕಾಪಾಡಲಿ.

ಉರ: ಪಾತು ಮಹೋರಸ್ಕ: ತಾಲಾತ್ಮಾಸುರಖಂಡನ: |
ಮಧ್ಯಂ ಕೃಶಲಸನ್ಮಧ್ಯ: ಪಾತು ವಾಲ್ಯಂಗಭೇದನ: || ೧೦ ||

ಅಸುರ ರೂಪಿಗಳಾದ ತಾಳವೃಕ್ಷಗಳನ್ನು ಖಂಡಿಸಿದ, ವಿಶಾಲವಾದ ಉರಸ್ಥವುಳ್ಳ (ಎದೆ) ರಾಮಚಂದ್ರನು ಎದೆಯನ್ನು ಕಾಪಾಡಲಿ. ವಾಲಿಯ ಎದೆಯನ್ನು ಸೀಳಿದ, ಕೃಶವಾಗಿ ಶೋಭಿಸುವ ಮಧ್ಯಪ್ರದೇಶವುಳ್ಳ ಶ್ರೀರಾಮಚಂದ್ರನು ನನ್ನ ಮಧ್ಯಪ್ರದೇಶವನ್ನು (ಸೊಂಟ) ಕಾಪಾಡಲಿ.

ದರ್ಭಶಾಯೀ ವಿಭು: ಪಾತು ವಲೀಸ್ತ್ರಿವಲಿಪಲ್ಲವ: |
ತನೂದರ: ಪಾತು ಕುಕ್ಷಿಂ ಕೃತಸೇತುರ್ಮಹಾರ್ಣವೇ || ೧೧ ||

ಚಿಗುರೆಲೆಯಂತೆ ತ್ರಿವಳಿಯುಳ್ಳ , ದರ್ಭಶಾಯಿಯಾದ,  ಸ್ವಾಮಿಯಾದ ಶ್ರೀರಾಮನು ತ್ರಿವಳಿಗಳನ್ನು ಕಾಪಾಡಲಿ. (ನಾಭಿಯ ಮೇಲಿನ ಪ್ರದೇಶದಲ್ಲಿ ಕಾಣಿಸುವ ಮೂರು ಚರ್ಮದ ಸುಕ್ಕು = ಪದರಕ್ಕೆ ತ್ರಿವಳಿ ಎಂದು ಹೆಸರು). ಮಹೋದಧಿಯಲ್ಲಿ ಸೇತುವೆಯನ್ನು ಕಟ್ಟಿರುವ ಶ್ರೀರಾಮನು ಕುಕ್ಷಿಯನ್ನು ಕಾಪಾಡಲಿ.

ನಿಮ್ಮನಾಭಿ: ಪ್ರಭು: ಪಾತು ನಾಭಿಂ ಕಪಿಚಮೂಪತಿ: |
ಪೀತಾಂಬರ: ಸ್ಫುರತ್ಕಾಂಚೀದ್ಯೋತಮಾನಕಟಿದ್ವಯ: || ೧೨ ||

ಲಂಕಾಪ್ರಾಕಾರನಿರ್ಭೇದೀ ರಾಮ: ಪಾತು ಕಟಿಂ ಮಮ |
ಊರೂ ಕರಿಕರೋರುರ್ಮೇ ಚಾರುಬಾಣಧನುರ್ಧರ: || ೧೩ ||

ಕಪಿಸೇನಾಪತಿಯಾದ,  ಆಳವಾದ ಹೊಕ್ಕುಳುಳ್ಳ  ಪ್ರಭುವು ನಾಭಿಯನ್ನು ಕಾಪಾಡಲಿ. ಶೋಭಿಸುತ್ತಿರುವ ಒಡ್ಯಾಣದಿಂದ ಪ್ರಕಾಶಿತವಾದ ಎರಡು ಕಟಿಗಳುಳ್ಳ ಪೀತಾಂಬರಧಾರಿಯಾದ, ಲಂಕೆಯ ಪ್ರಾಕಾರವನ್ನು ಭೇದಿಸಿರುವ ರಾಮನು ನನ್ನ ಕಟಿಯನ್ನು ಕಾಪಾಡಲಿ. ಆನೆಯ ಸೊಂಡಿಲಿನಂತೆ ತೊಡೆಗಳುಳ್ಳ , ಮನೋಹರವಾದ ಬಿಲ್ಲುಬಾಣ ಧರಿಸಿರುವ ಶ್ರೀರಾಮನು ನನ್ನ ಎರಡು ತೊಡೆಗಳನ್ನು ಕಾಪಾಡಲಿ.

ಜೃಂಭಿರಾವಣಸೈನ್ಯಾಬ್ಧಿಕುಂಭಸಂಭವಕೋಟಿಧೂ: |
ಜಾನುನೀ ವೃತ್ತವಿಲಸಜ್ಜಾನುಯುಗ್ಮೋಮಮಾವತು || ೧೪ ||

ಮತ್ತೂ ಮತ್ತೂ (ಉಕ್ಕುತ್ತಿರುವ) ಹೆಚ್ಚುತ್ತಿರುವ ರಾವಣನ ಸೈನ್ಯವೆಂಬ ಸಮುದ್ರಕ್ಕೆ ಕುಂಭಸಂಭವರಾದ ಕೋಟಿ ಅಗಸ್ತ್ಯರ ಹಿರಿಮೆಯನ್ನು ಹೊಂದಿರುವ (ಅಗಸ್ತ್ಯರು ಸಮುದ್ರಪಾನ ಮಾಡಿದಂತೆ ರಾವಣನ ಸೈನ್ಯಸಾಗರವನ್ನು ಒಣಗಿಸಿದವನು),  ದುಂಡಗಿರುವ ಶೋಭಾಯಮಾನವಾದ ಎರಡು ಮೊಣಗಂಟುಗಳುಳ್ಳ ಶ್ರೀರಾಮನು ನನ್ನೆರಡು ಮೊಣಗಂಟುಗಳನ್ನು ಕಾಪಾಡಲಿ.

ಕುಂಭಕರ್ಣಾದಿನಿರ್ಭಂಗದಂಭೋಲೀಸಮಸಾಯಕ: |
ಜಂಘೇ ತುಂಗೇಭದಂತಾಭಜಂಘಾಯುಗ್ಮೋsವತು ಪ್ರಭು: || ೧೫ ||

ಕುಂಭಕರ್ಣ ಮೊದಲಾದವರನ್ನು ಭಂಗಗೊಳಿಸುವ ವಿಷಯದಲ್ಲಿ ವಜ್ರಾಯುಧಕ್ಕೆ ಸಮನಾದ ಬಾಣವುಳ್ಳ , ಎತ್ತರವಾದ ಮಹಾಗಜದ ಎರಡು ದಂತಗಳಂತಿರುವ, ಎರಡು ಜಂಘೆಗಳುಳ್ಳ (ಕಣಕಾಲು) ಸ್ವಾಮಿಯು ನನ್ನ ಎರಡು ಜಂಘೆಗಳನ್ನು ಕಾಪಾಡಲಿ.

ದಶಾನನಶಿರೋsರಣ್ಯಪರಶ್ವಧಪರಾಕ್ರಮ: |
ಮುಕ್ತಾಂಕುರಸಮಶ್ರೀ ಮದ್ಗುಲ್ಫೋ ಗುಲ್ಫೌ ಮಾಮವತು || ೧೬ ||

ರಾವಣನ ಶಿರಸ್ಸುಗಳೆಂಬ ಕಾಡಿಗೆ ಕೊಡಲಿಯ ಸಮವಾದ ಪರಾಕ್ರಮವುಳ್ಳ , ಮುತ್ತಿನ ಮೊಳಕೆಗೆ ಸಮನಾದ ಕಾಂತಿಯುಳ್ಳ ಕಾಲ್ಗಂಟುಳ್ಳ  ಶ್ರೀರಾಮನು ನನ್ನೆರಡು ಕಾಲ್ಗಂಟುಗಳನ್ನು ಕಾಪಾಡಲಿ.

ಸಸಂಭ್ರಮಸುರಶ್ರೇಣೀಶರೋಜುಷ್ಟಾಂಘ್ರಿಪಲ್ಲವ: |
ಪಾದೌ ರಕ್ಷತು ಮೇ ನಿತ್ಯಂ ವಿಭೀಷಣಪದಪ್ರದ: || ೧೭ ||

ದೇವತೆಗಳು ಸಂತೋಷದಿಂದ ವೇಗವಾಗಿ ಸಾಲು ಸಾಲಾಗಿ ಬಂದು ಶ್ರೀರಾಮಚಂದ್ರನ ಚಿಗುರೆಲೆಯಂತಹ ಕಾಲುಗಳನ್ನು ಸೇವಿಸುತ್ತಿದ್ದಾರೆ. ವಿಭೀಷಣನಿಗೆ ಸಾಮ್ರಾಜ್ಯ ಪದವಿಯನ್ನು ಕೊಟ್ಟಿರುವ ಇಂತಹ ಶ್ರೀರಾಮನು ನನ್ನ ಪಾದಗಳನ್ನು ಕಾಪಾಡಲಿ.

ನಖಾನ್ ಪಾತು ನಖಶ್ರೇಣೀಶಶಿದ್ಯೋತಿತದಿಙ್ಮುಖ: |
ಅಗ್ನಿಜ್ವಾಲೋದಿತಸ್ವೀಯಸೀತೋ ವೀತಚ್ಛಿದಾಕೃತಿ: || ೧೮ ||

ಉಗುರುಗಳ ಸಾಲುಗಳೆಂಬ ಚಂದ್ರನಿಂದ ಪ್ರಕಾಶಗೊಳಿಸಲ್ಪಟ್ಟ ದಿಕ್ ಪ್ರದೇಶವುಳ್ಳ (ಉಗುರುಗಳು  ಚಂದ್ರನಂತೆ ಪ್ರಕಾಶಿಸುತ್ತಿವೆ). ಅಗ್ನಿಜ್ವಾಲೆಯನ್ನು ಭೇದಿಸಿ ಹೊರಗೆ ಬಂದಿರುವ ತನ್ನವರಾದ ಸೀತೆಯುಳ್ಳ , ಮೂಲರೂಪದ ಭೇದವಿಲ್ಲದಿರುವ ಆಕೃತಿಯ ಶ್ರೀರಾಮಚಂದ್ರನು ನನ್ನ ಉಗುರುಗಳನ್ನು ಕಾಪಾಡಲಿ‌.

ರಕ್ತಪಾದತಲಾದಿತ್ಯ: ಪಾತು ಪಾದತಲೇ ಮಮ |
ಪ್ರಾಪ್ತಾಯೋಧ್ಯಾಪುರೈಶ್ವರ್ಯ: ಪ್ರಾಚ್ಯಾಂ ಪಾತು ಮನೋರಮ: || ೧೯ ||

ಕೆಂಪಾದ ಪಾದತಳವೆಂಬ ಸೂರ್ಯನುಳ್ಳ ಶ್ರೀರಾಮನು ನನ್ನ ಅಂಗಾಲುಗಳನ್ನು ಕಾಪಾಡಲಿ. ಅಯೋಧ್ಯಾಪಟ್ಟಣದ ರಾಜ್ಯೈಶ್ವರ್ಯವನ್ನು ಪಡೆದ ಸುಂದರಾಂಗನಾದ ಶ್ರೀರಾಮನು ನನ್ನನ್ನು ಪೂರ್ವದಿಕ್ಕಿನಲ್ಲಿ ಕಾಪಾಡಲಿ.

ಧರ್ಮಪ್ರವರ್ತಕ: ಪಾಯಾದವಾಚ್ಯಾಂ ನೀರದದ್ಯುತಿ: |
ಪಾತು ಪ್ರತೀಚ್ಯಾಂ ಯಜ್ವೀಂದ್ರೋ ಹನೂಮತ್ಪಾರಮೇಷ್ಠ್ಯದ: || ೨೦ ||

ಧರ್ಮಪ್ರವರ್ತಕನಾದ, ಮೋಡದಂತಹ ಕಾಂತಿಯುಳ್ಳ ಶ್ರೀರಾಮಚಂದ್ರನು ದಕ್ಷಿಣದಲ್ಲಿ ಕಾಪಾಡಲಿ. ಯಾಗ ಕರ್ತೃಗಳಲ್ಲಿ ಶ್ರೇಷ್ಠನಾದವನು ಮತ್ತು ಹನುಮಂತದೇವರಿಗೆ  ಬ್ರಹ್ಮಪದವಿಯನ್ನು ಕೊಟ್ಟಿರುವ ಶ್ರೀರಾಮಚಂದ್ರನು ಪಶ್ಚಿಮದಲ್ಲಿ ಕಾಪಾಡಲಿ.

ಉದೀಚ್ಯಾಮುದ್ಗತಾಯೋಗವಿದೇಹತನಯಾಪ್ರಿಯ: |
ಅಧೋsಧ:ಕೃತಪಾಪೌಘ: ಪಾತು ರಾಮೋsಖಿಲಾಗ್ರಣೀ: || ೨೧ ||

ತನ್ನಿಂದ ವಿಯೋಗರಹಿತರಾದ ಶ್ರೀಸೀತಾದೇವಿಯರಿಗೆ ಪ್ರಿಯನಾದ ಶ್ರೀರಾಮಚಂದ್ರನು ಉತ್ತರದಿಕ್ಕಿನಲ್ಲಿ ಕಾಪಾಡಲಿ. ಭಕ್ತರ ಪಾಪಸಮೂಹವನ್ನೆಲ್ಲಾ ದೂರಮಾಡಿ (ಕೆಳಗೆ ತಳ್ಳಿರುವ),  ಸರ್ವೋತ್ತಮನಾದ ರಾಮನು ಕೆಳಗಿನ ಭಾಗದಲ್ಲಿ ಕಾಪಾಡಲಿ.

ಊರ್ಧ್ವಮುನ್ನೀತಸಜ್ಜೀವನಾನಾಸಂಘಸುಖಪ್ರದ: |
ಯ ಇದಂ ರಘುನಾಥಸ್ಯ ಕವಚಂ ಬಿಭೃಯಾನ್ನರ: || ೨೨ ||

ಯತಿನಾ ವಾದಿರಾಜೇನ ರಚಿತಂ ನಿರ್ಮಲಂ ದೃಢಮ್ |
ಸ್ಪ್ರಷ್ಟುಂ ತಂ ನೈವ ರಾಕ್ಷಾಂಸಿ ಪಾಪಾನಿ ರಿಪವೋsಪಿ ವಾ || ೨೩ ||

ಊರ್ಧ್ವಲೋಕಕ್ಕೆ ಕರೆದುಕೊಂಡು ಹೋಗಿರುವ ನಾನಾ ಜೀವಸಮೂಹಕ್ಕೆ ಸುಖಪ್ರದನಾದ ಶ್ರೀರಾಮಚಂದ್ರನು ಊರ್ಧ್ವಪ್ರದೇಶದಲ್ಲಿ ಕಾಪಾಡಲಿ.

ಯಾವ ಮನುಷ್ಯನು ಗುರುವಾದಿರಾಜ ಯತಿಗಳಿಂದ ರಚಿತವಾದ,  ನಿರ್ಮಲವಾದ, ದೃಢವಾದ ರಘುನಾಥನ ಈ ಕವಚವನ್ನು ಧರಿಸಿರುತ್ತಾನೋ, ಅವನನ್ನು ರಾಕ್ಷಸರೂ, ಪಾಪಗಳೂ ಅಥವಾ ಶತ್ರುಗಳಾಗಲಿ ಮುಟ್ಟುವುದಕ್ಕೆ ಸಮರ್ಥರಾಗುವುದಿಲ್ಲ.

ವಿಪದೋ ವ್ಯಾಧಯೋ ವಾsಪಿ ಶಕ್ನುವಂತಿ ಶರೋಪಮಾ: |
ಅರಿಂ ಜಿತ್ವಾ ತು ಸಂಸಾರಂ ಯಾಸ್ಯತ್ಯಂತೇsಪುನರ್ಭವಮ್ || ೨೪ ||

ವಿಪತ್ತುಗಳೂ ಅಥವಾ ಬಾಣಗಳಂತೆ ಹಿಂಸಕವಾದ ರೋಗಗಳಾಗಲಿ ಈ ಕವಚವನ್ನು ಧರಿಸುವನನ್ನು ಸ್ಪರ್ಶಿಸಲಾರವು. ಈ ಕವಚವನ್ನು ಮನಸ್ಸಿನಲ್ಲಿ ಧರಿಸುವ ಮಾನವನು ಶತ್ರುವನ್ನು ಜಯಿಸಿ ಸಂಸಾರವನ್ನು ದಾಟಿ ಪುನರಾವೃತ್ತಿರಹಿತವಾದ ಮೋಕ್ಷವನ್ನು ಪಡೆಯುತ್ತಾನೆ.

|| ಇತಿ ಶ್ರೀಮದ್ವಾದಿರಾಜ ಪೂಜ್ಯಶ್ರೀಚರಣಂ ವಿರಚಿತಂ ಶ್ರೀರಾಮಕವಚಮ್ ಸಂಪೂರ್ಣಮ್ ||

ಗುರುಜಗನ್ನಾಥದಾಸಾರ್ಯ ವಿರಚಿತಂ ಶ್ರೀರಾಘವೇಂದ್ರಾಷ್ಟಾಕ್ಷರ ಸ್ತೋತ್ರಂ

ಗುರುಜಗನ್ನಾಥದಾಸಾರ್ಯ ವಿರಚಿತಂ ಶ್ರೀರಾಘವೇಂದ್ರಾಷ್ಟಾಕ್ಷರ ಸ್ತೋತ್ರಂ

ಗುರುರಾಜಾಷ್ಟಾಕ್ಷರಂ ಸ್ಯಾತ್ ಮಹಾಪಾತಕನಾಶನಮ್ |
ಏಕೈಕಮಕ್ಷರಂ ಚಾತ್ರ ಸರ್ವಕಾಮ್ಯಾರ್ಥ ಸಿದ್ಧಿದಮ್ || ೧ ||

ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಶ್ರೀರಾಘವೇಂದ್ರಾಯ ನಮ: ಎಂಬ ಅಷ್ಟಾಕ್ಷರ ಮಂತ್ರವು ಮಹಾಪಾತಕಗಳನ್ನು ಕಳೆಯುವಂಥಾದ್ದಾಗಿದೆ. ಇದರಲ್ಲಿರುವ ಒಂದೊಂದು ಅಕ್ಷರವೂ ಸರ್ವಕಾಮ್ಯಾರ್ಥಗಳನ್ನು ಕೊಡುವಂಥದ್ದಾಗಿದೆ.

ಈ ಶ್ಲೋಕದಿಂದ ರಾಘವೇಂದ್ರಾಯ ನಮ: ಎಂಬ ಪುಣ್ಯ, ದಿವ್ಯ ನಾಮದ ಪ್ರತಿಯೊಂದು ಅಕ್ಷರದ ಮಹಾತ್ಮೆಯನ್ನು ನಮ್ಮ ಗುರುಜಗನ್ನಾಥದಾಸರಾಯರು ತಿಳಿಸುತ್ತಿದ್ದಾರೆ.

“Sri Raghavendraya Namaha this eight letter hymn will destroy all sins. Each letter of this word will fulfil all our desires.”

ರಕಾರೋಚ್ಚಾರಣಮಾತ್ರೇಣ ರೋಗಹಾನಿರ್ನ ಸಂಶಯ: |
ಘಕಾರೇಣ ಬಲಂ ಪುಷ್ಟಿ: ಆಯು: ತೇಜಶ್ಚ ವರ್ಧತೇ || ೨ ||
ರ ಕಾರದ ಉಚ್ಚಾರಣೆಯಿಂದ ರೋಗ ಹಾನಿಯಾಗವಲ್ಲಿ ಸಂಶಯವಿಲ್ಲ. ಘ ಕಾರದ ಉಚ್ಚಾರದಿಂದ ಬಲ, ಪುಷ್ಟಿ, ಆಯುಷ್ಯ ಮತ್ತು ತೇಜಸ್ಸು(ಶರೀರದ ಕಾಂತಿ) ವರ್ಧಿಸುತ್ತವೆ.

“Pronouncing ra will protect us from all illness. Whereas pronouncing Gh will provide us strength, energy, aura, and extended life time.”

ವಕಾರೇಣಾತ್ರ ಲಭತೇ ವಾಂಛಿತಾರ್ಥಾನ್ನ ಸಂಶಯ: |
ದ್ರಕಾರೇಣಾಘರಾಶಿಸ್ತು ದ್ರಾವ್ಯತೇ ದ್ರುತಮೇವ ಹಿ || ೩ ||

ವ ಕಾರೋಚ್ಚಾರದಿಂದ ಭಕ್ತನು ವಾಂಛಿತಾರ್ಥಗಳನ್ನೆಲ್ಲಾ ಪಡೆಯುತ್ತಾನೆ. ದ್ರ ಕಾರದ ಉಚ್ಚಾರಣದಿಂದ ಪಾಪಗಳ ರಾಶಿಯು ಕೂಡಲೇ ಓಡಿಸಲ್ಪಡುತ್ತದೆ.

“Pronouncing va will fulfil the devotees desires, and pronouncing dra will destroy all our sins immediately”

ಯಕಾರೇಣ ಯಮಾದ್ಬಾಧೋ ವಾರ್ಯತೇ ನಾತ್ರ ಸಂಶಯ: |
ನಕಾರೇಣ ನರೇಂದ್ರಾಣಾಂ ಪದಮಾಪ್ನೋತಿ ಮಾನವ: || ೪ ||

ಯ ಕಾರದ ಉಚ್ಚಾರದಿಂದ ಯಮ ಬಾಧೆಯು ನಿಶ್ಚಿತವಾಗಿ ನಿವಾರಿಸಲ್ಪಡುತ್ತದೆ. ನ ಕಾರದ ಉಚ್ಚಾರದಿಂದ ಭಕ್ತನು ರಾಜಪದವಿಯನ್ನು(ಉನ್ನತ ಅಧಿಕಾರಗಳ ಸ್ಥಾನವನ್ನು) ಹೊಂದುತ್ತಾನೆ.

“Pronouncing ya will protect us from Yama (the lord of death) and pronouncing na will provide the devotee deserved recognition.”

ಮಕಾರೇಣೈವ ಮಾಹೇಂದ್ರಮೈಶ್ವರ್ಯಂ ಯಾತಿ ಮಾನವ: |
ಗುರೋರ್ನಾಮ್ನಾಶ್ಚ ಮಹಾತ್ಮ್ಯಂ ಅಪೂರ್ವಂ ಪರಮಾದ್ಭುತಮ್ || ೫ ||

ಮ ಕಾರೋಚ್ಚಾರದಿಂದ ಇಂದ್ರದೇವರ ಐಶ್ವರ್ಯವನ್ನು ಪಡೆಯುವನು. ಈ ರೀತಿ ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಹೆಸರಿನ ಮಹಾತ್ಮ್ಯವು ಹಿಂದೆಂದೂ ಕಾಣದಂಥದ್ದೂ ಪರಮಾಶ್ಚರ್ಯ ಭರಿತವೂ ಆಗಿದೆ.

“Pronouncing ma will get the devotee the wealth of Indra. Such is the illustrious and amazing power of reciting Sri Raghavendraya Namaha.”

ತನ್ನಾಮಸ್ಮರಣಾದೇಹ ಸರ್ವಾಭಿಷ್ಟಂ ಪ್ರಸಿದ್ಯತಿ |
ತಸ್ಮಾನ್ನಿತ್ಯಂ ಪಠೇದ್ಭಕ್ತ್ಯಾ ಗುರುಪಾದರತಸ್ಸದಾ || ೬ ||

ಈ ಮಹಾನುಭಾವರ ಹೆಸರನ್ನು(ಅಷ್ಟಾಕ್ಷರ ಮಂತ್ರವನ್ನು) ಉಚ್ಚಾರ ಮಾಡುವುದಿರಲಿ, ಸ್ಮರಣೆ ಮಾಡುವ ಮಾತ್ರದಿಂದಲೇ ಸರ್ವಾಭಿಷ್ಟವೂ ಲಭಿಸುವುದು. ಆದ್ದರಿಂದ, ಗುರುವರ್ಯರ ಪಾದಗಳನ್ನು ಆಶ್ರಯಿಸಿದ ಭಕ್ತನು ಈ ಮಂತ್ರವನ್ನು ನಿತ್ಯವೂ ಭಕ್ತಿಯಿಂದ ಪಠಿಸಬೇಕು.

“ಶ್ರೀರಾಘವೇಂದ್ರಾಯ ನಮ:” ಇತ್ಯಾಷ್ಟಾಕ್ಷರಮಂತ್ರತ: |
ಸರ್ವಾನ್ಕಾಮಾನವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ || ೭ ||

“ಶ್ರೀರಾಘವೇಂದ್ರಾಯ ನಮ:”(ಶ್ರೀರಾಘವೇಂದ್ರ ಗುರುಸಾರ್ವಭೌಮರಿಗೆ ನಮಸ್ಕಾರಗಳು) ಎಂಬ ಅಷ್ಟಾಕ್ಷರ ಮಂತ್ರದ ಜಪ ಮಾಡುವುದರಿಂದ ಭಕ್ತನು ತನ್ನೆಲ್ಲಾ ಕಾಮನೆಗಳನ್ನು ಪಡೆಯುತ್ತಾನೆ ಎಂಬಲ್ಲಿ ಸಂದೇಹ ಬುದ್ಧಿಯನ್ನು ಮಾಡಕೂಡದು.

There is no doubt that by just meditating Sri Raghavendraya Namaha will fulfil all desires

ಅಷ್ಟೋತ್ತರಶತಾವೃತ್ತಿಂ ಸ್ತೋತ್ರಸ್ಯಾಸ್ಯ ಕರೋತಿ ಯ: |
ತಸ್ಯ ಸರ್ವಾರ್ಥಸಿದ್ಧಿಸ್ಯಾತ್ ಗುರುರಾಜಪ್ರಸಾದತ: || ೮ ||

ಯಾವನು ಶ್ರೀಗುರುವರ್ಯರ ಈ ಸ್ತೋತ್ರವನ್ನು ೧೦೮ ಬಾರಿ ಪಠಿಸುವನೋ, ಅವನಿಗೆ ಶ್ರೀಗುರುಸಾರ್ವಭೌಮರ ಅನುಗ್ರಹದಿಂದ ಸರ್ವಾರ್ಥಗಳ ಸಿದ್ಧಿಯಾಗುತ್ತದೆ.

One who meditates this hymn for 108 times will be blessed by Sri Guru Raghavendra

ಏತದಷ್ಟಾಕ್ಷರಸ್ಯಾತ್ರ ಮಹಾತ್ಮ್ಯಂ ವೇತ್ತಿ ಕ: ಪುಮಾನ್ |
ಪಠನಾದೇವ ಸರ್ವಾಥಸಿದ್ಧಿರ್ಭವತಿ ನಾನ್ಯಥಾ || ೯ ||

ಈ ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅಷ್ಟಾಕ್ಷರ ಮಂತ್ರದ ಮಹಾತ್ಮೆಯನ್ನು ಯಾವ ಭಕ್ತನು ಸಂಪೂರ್ಣವಾಗಿ ತಿಳಿಯಲು ಸಮರ್ಥನಾದಾನು? ಈ ಅಷ್ಟಾಕ್ಷರ ಮಂತ್ರದ ಪಠಣ ಮಾಡುವ ಮಾತ್ರದಿಂದ ಸರ್ವಾರ್ಥಗಳ ಸಿದ್ಧಿಯಾಗುತ್ತದೆ. ಬೇರೆ ಮಾರ್ಗದಿಂದ ಆಗುವುದಿಲ್ಲ.

One who knows the power of this Hymn and meditates will have his desires and wealth met. There is no other means to him.

ಸ್ವಾಮಿನಾ ರಾಘವೇಂದ್ರಾಖ್ಯ ಗುರುಪಾದಾಬ್ಜಸೇವಿನಾ |
ಕೃತಮಷ್ಟಾಕ್ಷರಸ್ತೋತ್ರಂ ಗುರುಪ್ರೀತಿಕರಂ ಶುಭಮ್ || ೧೦ ||

ಗುರುಗಳಿಗೆ ಪ್ರೀತಿಯನ್ನುಂಟು ಮಾಡುವ ಶುಭಕರವಾದ ಈ ಅಷ್ಟಾಕ್ಷರ ಸ್ತೋತ್ರವನು, ಶ್ರೀರಾಘವೇಂದ್ರತೀರ್ಥರೆಂಬ ಗುರುವರ್ಯರ ಪಾದಕಮಲಗಳನ್ನು ಸದಾ ಸೇವಿಸುವ ಸೇವಕನಿಂದ ವಿರಚಿಸಲ್ಪಟ್ಟಿದೆ.

This Stotra is writtern by a staunch devotee of Sri Guru Raghavendra

ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ (dhareyOddhaaraka merevaru gurugalu)

ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |1|

ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |2|

ಹರಿಮತ ಸಾರುವ ಹರಿಪದ ಹಾಡುವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |3|

ಧರಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ
ಗುರು ರಾಘವೇಂದ್ರರು ಕರಮೆರೆದಿಹರು ವರಮಂತ್ರಾಲಯದಲ್ಲಿ |4|

ತನುಮನ ಧನಗಳ ಕೊನೆಗಾಣದೆ ಭುವವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಯೆನಿಸಿ ಮೆರೆದರು ವರಮಂತ್ರಲಯದಲ್ಲಿ |5|

ವಿಷಯದ ವಿಷದಿಂದುಸಿರಿಡುತಲಿ ಬಲುದೆಶೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ |6|

ದಿನ ಸಂಸಾರದ ನೆನದರೆ ಘೋರದ ಘನರಥವೆಡೆತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |7|

ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |8|

ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ
ಧರೆಯೊಲು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಲೆಳಲ್ಲಾ |9|

ಸುರತರು ಫಲಿತಿದೆ ವರಕರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವುತನು ಪರಸುಖ ಸಾಧನದಲ್ಲಿ |10|

ಉರುತರ ತಪಸು ಸಮಾಧಿಗಳಿಲ್ಲಧೆ ದೊರೆವುದು ಸತ್ಗತಿ ಇಲ್ಲಿ
ಅರಿಯದೆ ವೇದ ಪುರಾಣ ಸುಶಾಸ್ತ್ರವ ದೊರೆವುದು ಸನ್ಮತಿ ಇಲ್ಲಿ |11|

ಮಾಧವ ಮತದಾಂಭೊಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದೀಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |12|

ವೆದಾಂತದ ಪೂತೋಟದ ಪರಿಮಲ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |13|

ಪಾವನತರ ಮಹಯಾತ್ರಾರ್ಥಿಗಳೋವಿಸಿ ನೆಲೆಸಿಹರಿಲ್ಲಿ
ಭುವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |14|

ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೋಳು ಕಳೆದೊಗೆಯುವರಿಲ್ಲಿ |15|

ಕುಷ್ಟಾದಿಗಳೆಂಬಷ್ಟಾ ದಶಗಳು ಶ್ರೀಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠಾಣ ಕೃಪೆಯಲ್ಲಿ |16|

ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೊತಿರೆ ಪದಯುಗದಲ್ಲಿ |17|

ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯೆರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |18|

ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |19|

ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳೆ ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |20|

ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಲವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದಿ ಪುಂಗವರಾಲಯದಲ್ಲಿ |21|

ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸರ್ವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |22|

ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರುನಿಂತಲ್ಲಿ |23|

ರಾಜರ ರಾಜರ ಗುರುಮಹರಾಜರ ತೇಜವು ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |24|

ಅನಘರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು
ಘನವ್ಯಾಪಕ ಜಗ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು |25|

ತುಂಗ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೆÇಂಗೊಳಲುದುತ ಕಂಗೋಚರಿಸುವರಿಲ್ಲಿ |26|

ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಬ್ರಮದಿಂದಾ |27|

ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ
ಕೇಶವನೊಲಿದನು ತೋಷದಿ ತುತಿಪರು ಸೂಸುವ ಭಾಷ್ಪಗಲಿಂದಾ |28|

ಬೃಂದಾವನ ಗೊವಿಂದನು ಗುರುಗಳ ವೃಂದಾವನದೊಳಗಿಂದು
ಮುಂದೋರದ ಭವ ಬಂದದಿ ಸಿಲುಕಿದ ಬ್ರಿಂದವ ಪೆÇರೆಯುವರಿನ್ದು |29|

ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕರೆನೆದರು ಕುಂದದ ಕಾಂತಿಯೊಳಿಲ್ಲಿ |30|

ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದ
ಚಿತ್ತದ ಬ್ರಾಂತಿಯನುಥರಿಪೌ ಪುರುಷೋತ್ತಮ ಗಾಯನದಿಂದ |31|

ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು
ಭೂದಿವಿಜರಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |32|

ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರೆಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |33|

ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |34|

ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯುಧಿಮಿದಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |35|

ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜಗದೊಳು ಪೂಮಳೆಗೆರೆವರು ಘೋಶಿಸಿ ದಿನ ದುಂಧುಭಿಧ್ವನಿಯಿಂದಾ |36|

ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವಧಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರದುದು ಬಹುಸಿರಿಯಿಂದಾ |37|

ಹರಿಯನು ತೋರಿಸಿದ ಗುರುಸಂದರ್ಶನ ಉರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದಿಂದು |38|

ಗುರು ಪಾದೋದಕ ಪೆÇರೆವದು ಭಕ್ತರ ಧುರಿತೌಘವಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |39|

ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆಸಂಸಾರದೊಳುರುತರಗಾದೆನು ಪೆÇರೆವುದು ಕರುಣದೊಲಿಂದು |40|

ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕಣಿಕರ ತೋರುವುದಿಂದು |41|

ಹಸು ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷಣ ಪದ ತುಸುಸಹ ನೆನಯದೆ ಪಶು ಜೀವನ ಕೈಗೊಂಡು |42|

ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೆÇರುಯುವದಿಂದು |43|

ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲುಸುವಿಕಾಸಿತ ಹಾರವಿದೆಂದು |44|

ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |45|

Sri Raghavendra Vijaya – Part 9 by Guru Jagannatha Dasaru

ರಾಘವೇಂದ್ರ ವಿಜಯ – Part 9

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯತು ಜಯ ಗುರುರಾಜ ಶುಭತಮ
ಜಯತು ಕವಿಜಯಗೇಯ ಸುಂದರ
ಜಯತು ನಿಜ ಜನ ಜಾಲಪಾಲಕ ಜಯತು ಕರುಣಾಳೊ
ಜಯತು ಸಜ್ಜನ ವಿಜಯದಾಯಕ
ಜಯತು ಕುಜನಾರಣ್ಯ ಪಾವಕ
ಜಯತು ಜಯ ಜಯ ದ್ವಿಜವರಾರ್ಚಿತ ಪಾದ ಪಂಕೇಜ ||೧||

ಹಿಂದೆ ನೀ ಪ್ರಹ್ಲಾದನೆನಿಸೀ
ತಂದೆಸಂಗಡ ವಾದ ಮಾಡೀ
ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ
ಮುಂದೆ ನಿನ್ನಯ ಪಿತಗೆ ಸದ್ಗತಿ
ಛಂದದಿಂದಲಿ ಕೊಡಿಸಿ ಮೆರೆದೆಯೊ
ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲಾ ||೨||

ತೊಳಪುನಾಶಿಕ ಕದಪುಗಳು ಬಲು
ಪೊಳೆವ ಕಂಗಳು ನೀಳಪೂರ್ಭುಗ-
ಳೆಸೆವ ತಾವರೆನೊಸಲು ಥಳಥಳನಾಮವಕ್ಷತಿಯು
ಲಲಿತ ಅರುಣಾಧರದಿ ಮಿನುಗುವ
ಸುಲಿದದಂತಸುಪಂಕ್ತಿ ಸೂಸುವ
ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕತಾನೊಪ್ಪ ||೩||

ಕಂಬು ಕಂಠವು ಸಿಂಹ ಸ್ಕಂಧವು
ಕುಂಭಿಕರಸಮ ಬಾಹುಯುಗ್ಮವು
ಅಂಬುಜೋಪಮ ಹಸ್ತಯುಗಳವು ನೀಲಬೆರಳುಗಳು
ಅಂಬುಜಾಂಬಕ ಸದನ ಹೃದಯದಿ
ಅಂಬುಜಾಕ್ಷೀತುಲಸಿ ಮಾಲಾ
ಲಂಬಿತಾಮಲಕುಕ್ಷಿವಳಿತ್ರಯ ಗುಂಭಸುಳಿನಾಭೀ ||೪||

ತೊಳಪುನಾಮಸಮುದ್ರಿಕಾವಳಿ
ಪೊಳೆವೊ ಪೆಣೆಯೊಳ ಗೂರ್ಧ್ವಪುಂಡ್ರವು
ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ
ಲಲಿತ ಮೇಖಲ ಕೈಪ ಕಟಿತಟ
ಚಲುವ ಊರೂಯುಗಳ ಜಾನೂ
ಜಲಜ ಜಂಘೆಯು ಗುಲ್ಪಪದಯುಗ ಬೆರಳು ನಖವಜ್ರ ||೫||

ಅರುಣ ಶಾಠಿಯು ಶಿರದಲಿಂದಲಿ
ಚರಣ ಪರಿಯತರದಲೊಪ್ಪಿರೆ
ಚರಣಪಾದುಕಗಳ ಪುರದಲಿ ನಿರುತ ಶೋಭಿಪದು
ಕರುಣಪೂರ್ಣಕಟಾಕ್ಷದಿಂದಲಿ
ಶರಣ ಜನರನ ಪೊರೆಯೊ ಕಾರಣ
ಕರೆದರಾಕ್ಷಣ ಬರುವನೆಂಬೋ ಬಿರುದು ಪೊತ್ತಿಹನು ||೬||

ರಾಯನಮ್ಮೀಜಗಕೆ ಯತಿಕುಲ
ರಾಯನಂ, ಕಲ್ಯಾಣಗುಣಗಣ
ಕಾಯನಂ ನಿಸ್ಸೀಮಸುಖತತಿದಾಯನೆನಿಸಿರ್ಪ
ರಾಯ ವಾರಿಧಿ ವೃದ್ಧ ಗುಣಗಣ
ರಾಯ ನಿರ್ಮಲಕೀರ್ತಿಜೋತ್ಸ್ನನು
ರಾಯರಾಯನುಯೆನಿಸಿ ಶೋಭಿಪನೆಂದು ಕಾಂಬುವೆನು ||೭||

ಗಂಗಿಗಾದುದು ಯಮನಸಂಗದಿ
ತುಂಗತರ ಪಾಲ್ಗಡಲಿಗಾದುದು
ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ
ಸಿಂಗರಾದ ಸುವಾಣಿದೇವಿಗೆ
ಉಂಗರೋರುಸು ಗುರುಳು ಸರ್ವದ
ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ ||೮||

ಮದವುಯೇರ‍್ರೋದು ದೇವಜಗಕೇ
ರದನದಲಿ ನಂಜುಂಟು ಫಣಿಗೇ
ಮದವು ಮಹವಿಷ ಕಪ್ಪು ದೋಷವು ಎನಗೆಯಿಲ್ಲೆಂಬ
ಮುದದಿ ಲೋಕತ್ರಯದಿ ತಾನೇ
ಒದಗಿ ದಿನದಿನ ಪ್ರ‍್ಳ್ವತೆರದಲಿ
ಸದಮಲಾತ್ಮಕರಾದ ರಾಯರ ಕೀರ್ತಿಶೋಭಿಪದು ||೯||

ಸರ್ವಸಂಪದ ನೀಡೊಗೋಸುಗ
ಸರ್ವಧರ್ಮವ ಮಾಡೊಗೋಸುಗ
ಸರ್ವವಿಘ್ನವ ಕಳೀಯೊಗೋಸುಗ ಕಾರ್ಯನೇರ್ವಿಕೆಗೆ
ಸರ್ವಜನರಿಗೆ ಕಾಮಿತಾರ್ಥವ
ಸರ್ವರೀತಿಲಿ ಸಲಿಸೊಗೋಸುಗ
ಊರ್ವಿತಳದೊಳು ತಾನೆ ಬೆಳಗೂದು ಅಮಲಗುರುಕೀರ್ತಿ ||೧೦||

ಇಂದುಮಮ್ಡಲ ರೋಚಿಯೋ ಪಾ-
ಲ್ಸಿಂದು ರಾಜನ ವೀಚಿಯೋ ಸುರ-
ರಿಮ್ದ್ರನೊಜ್ರಮರೀಚಿಯೋ ಸುರ-
ರಿಂದ್ರನೊಜ್ರಮರೀಚಿಯೋ ಸುರತುರಗ ಸದ್ರುಚಿಯೊ
ಕಂದುಗೊರಳನ ಗಿರಿಯೊ ರಾಘಾ
ವೇಂದ್ರಗುರುಗಳ ಕೀರ್ತಿಪೇಳ್ವೆಡೆ
ಮಂದಬುದ್ಧಿಗೆ ತೋರದದಿಂದ ಕೀರ್ತಿರಾಜಿಪದು ||೧೧||

ನಿಟಿಲ ನೇತ್ರನ ತೆರದಿ ಸಿತ ಸುರ-
ತಟಿನಿ ಯಂದದಿ ಗೌರಗಾತರ
ಸ್ಪಟಿಕಮಣಿಮಯ ಪೀಠದಂದದಿ ಧವಳ ರಾಜಿಪದು
ಮಠದೊಳುತ್ತಮ ಮಧ್ಯಮಂಟಪ
ಸ್ಪುಟಿತಹಾಟಕರತ್ನ ಮುಕುರದ
ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದ ||೧೨||

ಹರಿಯ ತೆರದಲಿ ಲಕ್ಷ್ಮಿನಿಲಯನು
ಹರನ ತೆರದಲಿ ಜಿತಮನೋಜನು
ಸರ್ಸಿ ಜೋದರ ತೆರದಿ ಸರ್ವದ ಸೃಷ್ಟಿಕಾರಣನು
ಮರುತನಂತಾಮೋದಕಾರಿಯು
ಸುರಪನಂತೆ ಸುಧಾಕರನು ತಾ
ಸುರರ ತರುವರದಂತೆ ಕಾಮದ ನನಿಪ ಗುರುರಾಯ ||೧೩||

ಚಿತ್ತಗತ ಅಭಿಲಾಷದಂದದಿ
ಮತ್ತೆ ಮತ್ತೆ ನವೀನ ತಾ ಘನ
ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ
ಮಾತೆ ಚಂದ್ರನತೆರದಿ ಗುರುವರ
ನಿತ್ಯದಲಿ ಸುಕಳಾದಿನಾಥನು
ಮೃತ್ಯುಯಿಲ್ಲದ ಸ್ವರ್ಗತೆರದಲಿ ಸುರಭಿ ಸಂಭೃತನು ||೧೪||

ಗಗನದಂದದಿ ಕುಜನಸುಶೋಭಿತ’ನಿಗಮದಮ್ದದಿ ನಿಶ್ಚಿತಾರ್ಥನು
ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು
ನಗವರೋತ್ತಮನಂತೆ ನಿಶ್ಚಲ
ಗಗನ-ನದಿತೆರ ಪಾಪಮೋಚಕ
ಮುಗಿಲಿನಂದದಿ ಚಿತ್ರಚರ್ಯನುಯೆನಿಸಿ ತಾ ಮೆರೆವ ||೧೫||

ಸರಸಿಜೋದ್ಭವನಂತೆ ಸರ್ವದ
ಸರಸ ವಿಭುದರ ಸ್ತೋಮವಂದಿತ
ಸುರವರೇಮ್ದ್ರನ ತೆರದಿ ಸಾಸಿರನಯನಕಾಶ್ರಯನು
ತರುಗಳಾರಿಯ ತೆರದಿ ಸಂತತ
ಸುರಗಣಾನನನೆನಿಪ ಕಾಲನ
ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ ||೧೬||

ನಿರುತ ನಿರರುತಿಯಂತೆ ಮದ್ಗುರು-
ವರ ಸದಾ ನವಬಿಧವನೆನಿಪನು
ವರುನ ನಂದದಿ ಸಿಂಧುರಾಜಿತನಮಿತ ಬಲಿಯುತನೂ
ಮರುತನಂತೆ ಸ್ವಸತ್ತ್ವಧಾರಿತ
ಪರಮಶ್ರೀ ಭೂರಮಣಸೇವಕ
ಹರನ ಮಿತ್ರನ ತೆರದಿ ಮಹಧನಕೋಶ ಸಂಯುತನೂ ||೧೭||

ಈಶನಂತೆ ವಿಭೂತಿಧಾರಕ
ಭೇಶನಂತೆ ಕಳಾಸುಪೂರಣ
ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ
ವ್ಯಾಸನಂತೆ ಪ್ರವೀಣಶಾಸ್ತ್ರ ದಿ-
ನೇಶನಂದದಿ ವಿಗತದೋಷ ನ-
ರೇಶನಂದದಿ ಕಪ್ಪಕಾಣೀಕೆ ನಿರುತ ಕೊಳುತಿಪ್ಪಾ ||೧೮||

ವನದತೆರ ಸುರಲೋಕತೆರದಲಿ
ಅನವರತ ಸುಮನೋಭಿವಾಸನು
ಇನನತೆರದಲಿ ಇಂದುತೆರದಲಿ ಕಮಲಕಾಶ್ರಯನು
ವನಜ ನೇತ್ರನ ತೆರದಿ ನಭತೆರ
ಮಿನುಗೊ ಸದ್ವಿಜರಾಜರಂಜಿತ
ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ ||೧೯||

ಇನತೆ ಗುಣಗಳು ನಿನ್ನೊಳಿಪ್ಪವೊ
ಘನಮಹಿಮ ನೀನೊಬ್ಬ ಲೋಕಕೆ
ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು
ಮನವಚನ ಕಾಯಗಲ ಪೂರ್ವಕ
ತನುವು-ಮನಿ-ಮೊದಲಾದುದೆಲ್ಲನು
ನಿನಗೆ ನೀಡಿದೆಯಿದಕೆ ಎನಗನುಮಾನವಿನಿತಿಲ್ಲ ||೨೦||

ಹರಿಯು ಭಕುತರ ಪೊರೆದ ತೆರದಲಿ
ಗುರುವೆ ನಿನ್ನಯ ಭಕುತ ಜನರನು
ಧರೆಯ ತಳದಲಿ ಪೊರೆಯೊಗೋಸುಗ ನಿನ್ನ ಅವತಾರ
ಕೊರತೆಯಿದಕೇನಿಲ್ಲ ನಿಶ್ಚಯ
ಪರಮ ಕರುಣೀಯು ನೀನೆ ಎನ್ನನು
ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ ||೨೧||

ಎನ್ನ ಪಾಲಕ ನೀನೆ ಸರ್ವದ
ನಿನ್ನ ಬಾಲಕ ನಾನೆ ಗುರುವರ
ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ
ಬನ್ನ ಬಡಿಸುವ ಭವದಿ ತೊಳಲುವ-
ದನ್ನ್ನು ನೋಡೀನೋದದಂದದಿ
ಇನ್ನು ಕಾಯದಲಿರುವರೇನಾಪನ್ನಪರಿಪಾಲಾ ||೨೩||

ನಂಬಿಭಜಿಸುವ ಜನಕೆ ಗುರುವರ
ಇಂಬುಗೊಟ್ತವರನ್ನು ಕಾಯುವಿ
ಎಂಬೋ ವಾಕ್ಯವುಯೆಲ್ಲಿ ಪೋಯಿತೊ ತೋರೋ ನೀನದನು
ಬಿಂಬ ಮೂರುತಿ ನೀನೆ ವಿಶ್ವ ಕು-
ಟುಂಬಿ ಎನ್ನನು ಸಲಹೊ ಸಂತತ
ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ ||೨೩||

ಮಾತೆ ತನ್ನಯ ಬಾಲನಾಡಿದ
ಮಾತಿನಿಂದಲಿ ತಾನು ಸಂತತ
ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡುಯಿಂದ
ತಾತ! ನೀನೇ ಎನಗೆ ಸರ್ವದ
ಪ್ರೀತನಾಗುವುದಯ್ಯ ಕಾಮಿತ
ದಾತಗುರುಜಗನ್ನಾಥವಿಠಲ ಲೋಲ ಪರಿಪಾಲ ||೨೪||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಒಂಬತ್ತನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

%d bloggers like this: