ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ (dhareyOddhaaraka merevaru gurugalu)

ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |1|

ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |2|

ಹರಿಮತ ಸಾರುವ ಹರಿಪದ ಹಾಡುವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |3|

ಧರಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ
ಗುರು ರಾಘವೇಂದ್ರರು ಕರಮೆರೆದಿಹರು ವರಮಂತ್ರಾಲಯದಲ್ಲಿ |4|

ತನುಮನ ಧನಗಳ ಕೊನೆಗಾಣದೆ ಭುವವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಯೆನಿಸಿ ಮೆರೆದರು ವರಮಂತ್ರಲಯದಲ್ಲಿ |5|

ವಿಷಯದ ವಿಷದಿಂದುಸಿರಿಡುತಲಿ ಬಲುದೆಶೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ |6|

ದಿನ ಸಂಸಾರದ ನೆನದರೆ ಘೋರದ ಘನರಥವೆಡೆತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |7|

ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |8|

ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ
ಧರೆಯೊಲು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಲೆಳಲ್ಲಾ |9|

ಸುರತರು ಫಲಿತಿದೆ ವರಕರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವುತನು ಪರಸುಖ ಸಾಧನದಲ್ಲಿ |10|

ಉರುತರ ತಪಸು ಸಮಾಧಿಗಳಿಲ್ಲಧೆ ದೊರೆವುದು ಸತ್ಗತಿ ಇಲ್ಲಿ
ಅರಿಯದೆ ವೇದ ಪುರಾಣ ಸುಶಾಸ್ತ್ರವ ದೊರೆವುದು ಸನ್ಮತಿ ಇಲ್ಲಿ |11|

ಮಾಧವ ಮತದಾಂಭೊಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದೀಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |12|

ವೆದಾಂತದ ಪೂತೋಟದ ಪರಿಮಲ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |13|

ಪಾವನತರ ಮಹಯಾತ್ರಾರ್ಥಿಗಳೋವಿಸಿ ನೆಲೆಸಿಹರಿಲ್ಲಿ
ಭುವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |14|

ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೋಳು ಕಳೆದೊಗೆಯುವರಿಲ್ಲಿ |15|

ಕುಷ್ಟಾದಿಗಳೆಂಬಷ್ಟಾ ದಶಗಳು ಶ್ರೀಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠಾಣ ಕೃಪೆಯಲ್ಲಿ |16|

ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೊತಿರೆ ಪದಯುಗದಲ್ಲಿ |17|

ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯೆರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |18|

ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |19|

ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳೆ ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |20|

ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಲವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದಿ ಪುಂಗವರಾಲಯದಲ್ಲಿ |21|

ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸರ್ವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |22|

ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರುನಿಂತಲ್ಲಿ |23|

ರಾಜರ ರಾಜರ ಗುರುಮಹರಾಜರ ತೇಜವು ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |24|

ಅನಘರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು
ಘನವ್ಯಾಪಕ ಜಗ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು |25|

ತುಂಗ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೆÇಂಗೊಳಲುದುತ ಕಂಗೋಚರಿಸುವರಿಲ್ಲಿ |26|

ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಬ್ರಮದಿಂದಾ |27|

ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ
ಕೇಶವನೊಲಿದನು ತೋಷದಿ ತುತಿಪರು ಸೂಸುವ ಭಾಷ್ಪಗಲಿಂದಾ |28|

ಬೃಂದಾವನ ಗೊವಿಂದನು ಗುರುಗಳ ವೃಂದಾವನದೊಳಗಿಂದು
ಮುಂದೋರದ ಭವ ಬಂದದಿ ಸಿಲುಕಿದ ಬ್ರಿಂದವ ಪೆÇರೆಯುವರಿನ್ದು |29|

ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕರೆನೆದರು ಕುಂದದ ಕಾಂತಿಯೊಳಿಲ್ಲಿ |30|

ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದ
ಚಿತ್ತದ ಬ್ರಾಂತಿಯನುಥರಿಪೌ ಪುರುಷೋತ್ತಮ ಗಾಯನದಿಂದ |31|

ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು
ಭೂದಿವಿಜರಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |32|

ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರೆಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |33|

ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |34|

ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯುಧಿಮಿದಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |35|

ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜಗದೊಳು ಪೂಮಳೆಗೆರೆವರು ಘೋಶಿಸಿ ದಿನ ದುಂಧುಭಿಧ್ವನಿಯಿಂದಾ |36|

ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವಧಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರದುದು ಬಹುಸಿರಿಯಿಂದಾ |37|

ಹರಿಯನು ತೋರಿಸಿದ ಗುರುಸಂದರ್ಶನ ಉರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದಿಂದು |38|

ಗುರು ಪಾದೋದಕ ಪೆÇರೆವದು ಭಕ್ತರ ಧುರಿತೌಘವಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |39|

ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆಸಂಸಾರದೊಳುರುತರಗಾದೆನು ಪೆÇರೆವುದು ಕರುಣದೊಲಿಂದು |40|

ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕಣಿಕರ ತೋರುವುದಿಂದು |41|

ಹಸು ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷಣ ಪದ ತುಸುಸಹ ನೆನಯದೆ ಪಶು ಜೀವನ ಕೈಗೊಂಡು |42|

ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೆÇರುಯುವದಿಂದು |43|

ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲುಸುವಿಕಾಸಿತ ಹಾರವಿದೆಂದು |44|

ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |45|

Advertisements

Sri Raghavendra Vijaya – Part 9 by Guru Jagannatha Dasaru

ರಾಘವೇಂದ್ರ ವಿಜಯ – Part 9

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯತು ಜಯ ಗುರುರಾಜ ಶುಭತಮ
ಜಯತು ಕವಿಜಯಗೇಯ ಸುಂದರ
ಜಯತು ನಿಜ ಜನ ಜಾಲಪಾಲಕ ಜಯತು ಕರುಣಾಳೊ
ಜಯತು ಸಜ್ಜನ ವಿಜಯದಾಯಕ
ಜಯತು ಕುಜನಾರಣ್ಯ ಪಾವಕ
ಜಯತು ಜಯ ಜಯ ದ್ವಿಜವರಾರ್ಚಿತ ಪಾದ ಪಂಕೇಜ ||೧||

ಹಿಂದೆ ನೀ ಪ್ರಹ್ಲಾದನೆನಿಸೀ
ತಂದೆಸಂಗಡ ವಾದ ಮಾಡೀ
ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ
ಮುಂದೆ ನಿನ್ನಯ ಪಿತಗೆ ಸದ್ಗತಿ
ಛಂದದಿಂದಲಿ ಕೊಡಿಸಿ ಮೆರೆದೆಯೊ
ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲಾ ||೨||

ತೊಳಪುನಾಶಿಕ ಕದಪುಗಳು ಬಲು
ಪೊಳೆವ ಕಂಗಳು ನೀಳಪೂರ್ಭುಗ-
ಳೆಸೆವ ತಾವರೆನೊಸಲು ಥಳಥಳನಾಮವಕ್ಷತಿಯು
ಲಲಿತ ಅರುಣಾಧರದಿ ಮಿನುಗುವ
ಸುಲಿದದಂತಸುಪಂಕ್ತಿ ಸೂಸುವ
ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕತಾನೊಪ್ಪ ||೩||

ಕಂಬು ಕಂಠವು ಸಿಂಹ ಸ್ಕಂಧವು
ಕುಂಭಿಕರಸಮ ಬಾಹುಯುಗ್ಮವು
ಅಂಬುಜೋಪಮ ಹಸ್ತಯುಗಳವು ನೀಲಬೆರಳುಗಳು
ಅಂಬುಜಾಂಬಕ ಸದನ ಹೃದಯದಿ
ಅಂಬುಜಾಕ್ಷೀತುಲಸಿ ಮಾಲಾ
ಲಂಬಿತಾಮಲಕುಕ್ಷಿವಳಿತ್ರಯ ಗುಂಭಸುಳಿನಾಭೀ ||೪||

ತೊಳಪುನಾಮಸಮುದ್ರಿಕಾವಳಿ
ಪೊಳೆವೊ ಪೆಣೆಯೊಳ ಗೂರ್ಧ್ವಪುಂಡ್ರವು
ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ
ಲಲಿತ ಮೇಖಲ ಕೈಪ ಕಟಿತಟ
ಚಲುವ ಊರೂಯುಗಳ ಜಾನೂ
ಜಲಜ ಜಂಘೆಯು ಗುಲ್ಪಪದಯುಗ ಬೆರಳು ನಖವಜ್ರ ||೫||

ಅರುಣ ಶಾಠಿಯು ಶಿರದಲಿಂದಲಿ
ಚರಣ ಪರಿಯತರದಲೊಪ್ಪಿರೆ
ಚರಣಪಾದುಕಗಳ ಪುರದಲಿ ನಿರುತ ಶೋಭಿಪದು
ಕರುಣಪೂರ್ಣಕಟಾಕ್ಷದಿಂದಲಿ
ಶರಣ ಜನರನ ಪೊರೆಯೊ ಕಾರಣ
ಕರೆದರಾಕ್ಷಣ ಬರುವನೆಂಬೋ ಬಿರುದು ಪೊತ್ತಿಹನು ||೬||

ರಾಯನಮ್ಮೀಜಗಕೆ ಯತಿಕುಲ
ರಾಯನಂ, ಕಲ್ಯಾಣಗುಣಗಣ
ಕಾಯನಂ ನಿಸ್ಸೀಮಸುಖತತಿದಾಯನೆನಿಸಿರ್ಪ
ರಾಯ ವಾರಿಧಿ ವೃದ್ಧ ಗುಣಗಣ
ರಾಯ ನಿರ್ಮಲಕೀರ್ತಿಜೋತ್ಸ್ನನು
ರಾಯರಾಯನುಯೆನಿಸಿ ಶೋಭಿಪನೆಂದು ಕಾಂಬುವೆನು ||೭||

ಗಂಗಿಗಾದುದು ಯಮನಸಂಗದಿ
ತುಂಗತರ ಪಾಲ್ಗಡಲಿಗಾದುದು
ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ
ಸಿಂಗರಾದ ಸುವಾಣಿದೇವಿಗೆ
ಉಂಗರೋರುಸು ಗುರುಳು ಸರ್ವದ
ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ ||೮||

ಮದವುಯೇರ‍್ರೋದು ದೇವಜಗಕೇ
ರದನದಲಿ ನಂಜುಂಟು ಫಣಿಗೇ
ಮದವು ಮಹವಿಷ ಕಪ್ಪು ದೋಷವು ಎನಗೆಯಿಲ್ಲೆಂಬ
ಮುದದಿ ಲೋಕತ್ರಯದಿ ತಾನೇ
ಒದಗಿ ದಿನದಿನ ಪ್ರ‍್ಳ್ವತೆರದಲಿ
ಸದಮಲಾತ್ಮಕರಾದ ರಾಯರ ಕೀರ್ತಿಶೋಭಿಪದು ||೯||

ಸರ್ವಸಂಪದ ನೀಡೊಗೋಸುಗ
ಸರ್ವಧರ್ಮವ ಮಾಡೊಗೋಸುಗ
ಸರ್ವವಿಘ್ನವ ಕಳೀಯೊಗೋಸುಗ ಕಾರ್ಯನೇರ್ವಿಕೆಗೆ
ಸರ್ವಜನರಿಗೆ ಕಾಮಿತಾರ್ಥವ
ಸರ್ವರೀತಿಲಿ ಸಲಿಸೊಗೋಸುಗ
ಊರ್ವಿತಳದೊಳು ತಾನೆ ಬೆಳಗೂದು ಅಮಲಗುರುಕೀರ್ತಿ ||೧೦||

ಇಂದುಮಮ್ಡಲ ರೋಚಿಯೋ ಪಾ-
ಲ್ಸಿಂದು ರಾಜನ ವೀಚಿಯೋ ಸುರ-
ರಿಮ್ದ್ರನೊಜ್ರಮರೀಚಿಯೋ ಸುರ-
ರಿಂದ್ರನೊಜ್ರಮರೀಚಿಯೋ ಸುರತುರಗ ಸದ್ರುಚಿಯೊ
ಕಂದುಗೊರಳನ ಗಿರಿಯೊ ರಾಘಾ
ವೇಂದ್ರಗುರುಗಳ ಕೀರ್ತಿಪೇಳ್ವೆಡೆ
ಮಂದಬುದ್ಧಿಗೆ ತೋರದದಿಂದ ಕೀರ್ತಿರಾಜಿಪದು ||೧೧||

ನಿಟಿಲ ನೇತ್ರನ ತೆರದಿ ಸಿತ ಸುರ-
ತಟಿನಿ ಯಂದದಿ ಗೌರಗಾತರ
ಸ್ಪಟಿಕಮಣಿಮಯ ಪೀಠದಂದದಿ ಧವಳ ರಾಜಿಪದು
ಮಠದೊಳುತ್ತಮ ಮಧ್ಯಮಂಟಪ
ಸ್ಪುಟಿತಹಾಟಕರತ್ನ ಮುಕುರದ
ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದ ||೧೨||

ಹರಿಯ ತೆರದಲಿ ಲಕ್ಷ್ಮಿನಿಲಯನು
ಹರನ ತೆರದಲಿ ಜಿತಮನೋಜನು
ಸರ್ಸಿ ಜೋದರ ತೆರದಿ ಸರ್ವದ ಸೃಷ್ಟಿಕಾರಣನು
ಮರುತನಂತಾಮೋದಕಾರಿಯು
ಸುರಪನಂತೆ ಸುಧಾಕರನು ತಾ
ಸುರರ ತರುವರದಂತೆ ಕಾಮದ ನನಿಪ ಗುರುರಾಯ ||೧೩||

ಚಿತ್ತಗತ ಅಭಿಲಾಷದಂದದಿ
ಮತ್ತೆ ಮತ್ತೆ ನವೀನ ತಾ ಘನ
ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ
ಮಾತೆ ಚಂದ್ರನತೆರದಿ ಗುರುವರ
ನಿತ್ಯದಲಿ ಸುಕಳಾದಿನಾಥನು
ಮೃತ್ಯುಯಿಲ್ಲದ ಸ್ವರ್ಗತೆರದಲಿ ಸುರಭಿ ಸಂಭೃತನು ||೧೪||

ಗಗನದಂದದಿ ಕುಜನಸುಶೋಭಿತ’ನಿಗಮದಮ್ದದಿ ನಿಶ್ಚಿತಾರ್ಥನು
ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು
ನಗವರೋತ್ತಮನಂತೆ ನಿಶ್ಚಲ
ಗಗನ-ನದಿತೆರ ಪಾಪಮೋಚಕ
ಮುಗಿಲಿನಂದದಿ ಚಿತ್ರಚರ್ಯನುಯೆನಿಸಿ ತಾ ಮೆರೆವ ||೧೫||

ಸರಸಿಜೋದ್ಭವನಂತೆ ಸರ್ವದ
ಸರಸ ವಿಭುದರ ಸ್ತೋಮವಂದಿತ
ಸುರವರೇಮ್ದ್ರನ ತೆರದಿ ಸಾಸಿರನಯನಕಾಶ್ರಯನು
ತರುಗಳಾರಿಯ ತೆರದಿ ಸಂತತ
ಸುರಗಣಾನನನೆನಿಪ ಕಾಲನ
ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ ||೧೬||

ನಿರುತ ನಿರರುತಿಯಂತೆ ಮದ್ಗುರು-
ವರ ಸದಾ ನವಬಿಧವನೆನಿಪನು
ವರುನ ನಂದದಿ ಸಿಂಧುರಾಜಿತನಮಿತ ಬಲಿಯುತನೂ
ಮರುತನಂತೆ ಸ್ವಸತ್ತ್ವಧಾರಿತ
ಪರಮಶ್ರೀ ಭೂರಮಣಸೇವಕ
ಹರನ ಮಿತ್ರನ ತೆರದಿ ಮಹಧನಕೋಶ ಸಂಯುತನೂ ||೧೭||

ಈಶನಂತೆ ವಿಭೂತಿಧಾರಕ
ಭೇಶನಂತೆ ಕಳಾಸುಪೂರಣ
ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ
ವ್ಯಾಸನಂತೆ ಪ್ರವೀಣಶಾಸ್ತ್ರ ದಿ-
ನೇಶನಂದದಿ ವಿಗತದೋಷ ನ-
ರೇಶನಂದದಿ ಕಪ್ಪಕಾಣೀಕೆ ನಿರುತ ಕೊಳುತಿಪ್ಪಾ ||೧೮||

ವನದತೆರ ಸುರಲೋಕತೆರದಲಿ
ಅನವರತ ಸುಮನೋಭಿವಾಸನು
ಇನನತೆರದಲಿ ಇಂದುತೆರದಲಿ ಕಮಲಕಾಶ್ರಯನು
ವನಜ ನೇತ್ರನ ತೆರದಿ ನಭತೆರ
ಮಿನುಗೊ ಸದ್ವಿಜರಾಜರಂಜಿತ
ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ ||೧೯||

ಇನತೆ ಗುಣಗಳು ನಿನ್ನೊಳಿಪ್ಪವೊ
ಘನಮಹಿಮ ನೀನೊಬ್ಬ ಲೋಕಕೆ
ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು
ಮನವಚನ ಕಾಯಗಲ ಪೂರ್ವಕ
ತನುವು-ಮನಿ-ಮೊದಲಾದುದೆಲ್ಲನು
ನಿನಗೆ ನೀಡಿದೆಯಿದಕೆ ಎನಗನುಮಾನವಿನಿತಿಲ್ಲ ||೨೦||

ಹರಿಯು ಭಕುತರ ಪೊರೆದ ತೆರದಲಿ
ಗುರುವೆ ನಿನ್ನಯ ಭಕುತ ಜನರನು
ಧರೆಯ ತಳದಲಿ ಪೊರೆಯೊಗೋಸುಗ ನಿನ್ನ ಅವತಾರ
ಕೊರತೆಯಿದಕೇನಿಲ್ಲ ನಿಶ್ಚಯ
ಪರಮ ಕರುಣೀಯು ನೀನೆ ಎನ್ನನು
ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ ||೨೧||

ಎನ್ನ ಪಾಲಕ ನೀನೆ ಸರ್ವದ
ನಿನ್ನ ಬಾಲಕ ನಾನೆ ಗುರುವರ
ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ
ಬನ್ನ ಬಡಿಸುವ ಭವದಿ ತೊಳಲುವ-
ದನ್ನ್ನು ನೋಡೀನೋದದಂದದಿ
ಇನ್ನು ಕಾಯದಲಿರುವರೇನಾಪನ್ನಪರಿಪಾಲಾ ||೨೩||

ನಂಬಿಭಜಿಸುವ ಜನಕೆ ಗುರುವರ
ಇಂಬುಗೊಟ್ತವರನ್ನು ಕಾಯುವಿ
ಎಂಬೋ ವಾಕ್ಯವುಯೆಲ್ಲಿ ಪೋಯಿತೊ ತೋರೋ ನೀನದನು
ಬಿಂಬ ಮೂರುತಿ ನೀನೆ ವಿಶ್ವ ಕು-
ಟುಂಬಿ ಎನ್ನನು ಸಲಹೊ ಸಂತತ
ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ ||೨೩||

ಮಾತೆ ತನ್ನಯ ಬಾಲನಾಡಿದ
ಮಾತಿನಿಂದಲಿ ತಾನು ಸಂತತ
ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡುಯಿಂದ
ತಾತ! ನೀನೇ ಎನಗೆ ಸರ್ವದ
ಪ್ರೀತನಾಗುವುದಯ್ಯ ಕಾಮಿತ
ದಾತಗುರುಜಗನ್ನಾಥವಿಠಲ ಲೋಲ ಪರಿಪಾಲ ||೨೪||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಒಂಬತ್ತನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Sri Raghavendra Vijaya – Part 8 by Guru Jagannatha Dasaru

ರಾಘವೇಂದ್ರ ವಿಜಯ – Part 8

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಶರಣು ಶ್ರೀಗುರುರಾಜ ನಿನ್ನಯ
ಚರಣಕಮಲಕೆ ಮೊರೆಯ ಪೊಕ್ಕೆನೊ
ಕರುಣ ಎನ್ನೊಳಗಿರಿಸಿ ಪಾಲಿಸು ಕರುನ ಸಾಗರನೆ
ಕರಣ ಮಾನಿಗಳಾದ ದಿವಿಜರು
ಶರಣು ಪೊಕ್ಕರು ಪೊರೆಯರೆನ್ನನು
ಕರುಣ ನಿಧಿ ನೀನೆಂದು ಬೇಡಿದೆ ಶರನ ವತ್ಸಲನೆ ||೧||

ಪಾಹಿ ಪಂಕಜನಯನ ಪಾವನ
ಪಾಹಿ ಗುಣಗಣನಿಲಯ ಶುಭಕರ
ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ
ಪಾಹಿ ಚಾರುವಿಚಿತ್ರಚರ್ಯನೆ
ಪಾಹಿ ಕರ್ಮಂಧೀಶ ಸರ್ವದ
ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ ||೨||

ಏನು ಬೇಡಲು ನಿನ್ನ ಬೇಡುವೆ
ಹೀನಮನುಜರ ಕೇಳರಾಲೆನೂ
ದೀನ ಜನರುದ್ಧಾರಿ ಈಪ್ಸಿತದಾನಿ ನೀನೆಂದು
ಸಾನುರಾಗದಿ ನಿನ್ನ ನಂಬಿದೆ
ನೀನೆ ಎನ್ನಭಿಮಾನರಕ್ಷಕ
ನಾನಾ ವಿಧವಿಧದಿಂದ ಕ್ಲೇಶಗಳಿನ್ನು ಬರಲೇನು ||೩||

ಮುಗಿಲು ಪರಿಮಿತ ಕಲ್ಲುಮುರಿದೂ
ಹೆಗಲ ಶಿರದಲಿ ಬೇಳಲೇನೂ
ಹಗಲಿರುಳು ಏಕಾಗಿ ಬೆಂಕಿಯ ಮಳೆಯು ಬರಲೇನು
ಜಗವನಾಳುವ ಧ್ವರಿಯು ಮುನಿದೂ
ನಿಗಡ ಕಾಲಿಗೆ ಹಾಕಲೇನೂ
ಮಿಗಿಲು ದುಖ ತರಂಗ ಥರಥರ ಮೀರಿ ಬರಲೇನು ||೪||

ರಾಘವೇಂದ್ರನೆ ನಿನ್ನ ಕರುಣದ-
ಮೋಘ ವೀಕ್ಷಣಲೇಶ ಎನ್ನಲಿ
ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು
ಯೋಗಿಕುಲ ಶಿರೊರತ್ನ ನೀನಿರೆ
ಜೋಗಿ ಮಾನವಗಣಗಳಿಂದೆನ-
ಗಾಗ್ವ ಕಾರ್ಯಗಳೇನುಯಿಲ್ಲವೂ ನೀನೆ ಸರ್ವಜ್ಞ ||೫||

ಅಮರಶಕ್ವರಿ ಮನೆಯೊಳಿರುತಿರೆ
ಶ್ರಮದಿ ಗೋಮಯ ಹುಡುಕಿ ತರುವರೆ
ಅಮಲತರ ಸುರವೄಕ್ಷ ನೀನೆರೆ ತಿಂತ್ರಿಣೀ ಬಯಕೇ?
ಅಮಿತಮಹಿಮೋಪೇತ ನೀನಿರೆ
ಭ್ರಮಿತರಾಗಿಹ ನರರ ಬೇಡೂದ-
ಪ್ರಮಿತ ವಂದಿತಪಾದಯುಗಳನೆ ನಿನಗೆ ಸಮ್ಮತವೆ ||೬||

ಭೂಪ ನಂದನನೆನಿಸಿ ತಾಕರ-
ದೀಪದೆಣ್ಣಿಗೆ ತಿರುಪೆ ಬೇಡ್ವರೆ
ಆ ಪಯೋನಿಧಿ ತಟದಿ ಸಂತತ ವಾಸವಾಗಿರ್ದು
ಕೂಪಜಲ ತಾ ಬಯಸುವಂದದಿ
ತಾಪ ಮೂರರ ಹಾರಿ ನೀನಿರೆ
ಈಪರೀಪರಿಯಿಂದ ಪರರಿಗೆ ಬೇಡಿಕೊಂಬುದೆ ||೭||

ಬಲ್ಲಿದರಿಗತಿ ಬಲ್ಲಿದನು ನೀ-
ನೆಲ್ಲ ತಿಳಿದವರೊಳಗೆ ತಿಳಿದವ-
ನೆಲ್ಲಿ ಕಾಣೆನೊ ನಿನಗೆ ಸಮಸುರಸಂಘದೊಳಗಿನ್ನು
ಎಲ್ಲಕಾಲದಿ ಪ್ರಾಣಲಕುಮೀ-
ನಲ್ಲ ನಿನ್ನೊಳು ನಿಂತು ಕಾರ್ಯಗ-
ಳೆಲ್ಲ ತಾನೇಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ ||೮||

ಏನು ಪುಣ್ಯವೊ ನಿನ್ನ ವಶದಲಿ
ಶ್ರೀನಿವಾಸನು ಸತತಯಿಪ್ಪನು
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ
ದೀನರಾಗಿಹ ಭಕುತಜನರಿಗೆ
ನಾನಾಕಾಮಿತ ನೀಡೋಗೋಸುಗ
ತಾನೆ ಸರ್ವಸ್ಥಳದಿ ನಿಂತೂ ಕೊಡುವನಖಿಳಾರ್ಥ ||೯||

ಕ್ಷಾಂತಿ ಗುಣದಲಿ ಶಿವನತೆರ ಶ್ರೀ-
ಕಾಂತ ಸೇವೆಗೆ ಬೊಮ್ಮ ಪೋಲುವ-
ನಂತರಂಗಗಂಭೀರತನದಲಿ ಸಿಂಧುಸಮನೆನಿಪ
ದಾಂತ ಜನರಘಕುಲಕೆ ವರುಣನ
ಕಾಂತೆ ತೆರ ತಾನಿಪ್ಪ ಶಬ್ಧದ್ಯ
ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ ||೧೦||

ಆರುಮೊಗನಮರೇಂದ್ರರಾಮರು
ಮೂರಜನ ಸರಿಯಿಲ್ಲ ನಿನಗೇ
ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು
ಆರುವದನ ವಿಶಾಖನಿಂದ್ರಗೆ
ನೂರು ಕೋಪವು ರಾಮದೇವನು
ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ ||೧೧||

ಸಕಲ ಶಾಖಗಳುಂಟು ನಿನಗೇ
ವಿಕಲ ಕೋಪಗಳಿಲ್ಲವೆಂದಿಗು
ನಿಖಿಳ ಧರ್ಮಾಚಾರ್ಯ ಶುಭತಮಚರ್ಯ ಗುರುವರ್ಯ
ಬಕವಿರೋಧಿಯ ಸಖಗೆ ಮುದ್ಧಿನ
ಭಕುರವರ ನೀನಾದ ಕಾರಣ
ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿದಹದೊ ||೧೨||

ಹರಿಯತೆರದಲಿ ಬಲವಿಶಿಷ್ರ‍್ಟನು
ಹರನ ತೆರದಲಿ ರಾಜಶೇಖರ
ಸರಸಿಜೋದ್ಭವನಂತೆ ಸಂತತ ಚತುರಸದ್ವದನ
ಶರಧಿತೆರದಲನಂತರತ್ನನು
ಸರಸಿರುಹ ಸನ್ಮಿತ್ರನಂದದಿ
ನಿರುತ ನಿರ್ಜಿತದೋಷ ಭಾಸುರಕಾಯ ಗುರುರಾಯ ||೧೩||

ಇಂದ್ರತೆರದಲಿ ಸುರಭಿರಮ್ಯನು
ಚಂದ್ರತೆರದಲಿ ಶ್ರಿತ ಕುವಲಯೋ-
ಪೇಂದ್ರತೆರದಲಿ ನಂದಕದಿ ರಾಜಿತನು ಗುರುರಾಜ
ಮಂದ್ರಗಿರಿತೆರ ಕೂರ್ಮಪೀಠನು
ವೀಂದ್ರನಂದದಲರುಣಗಾತ್ರನು
ಇಂದಿರೇಶನ ತೆರದಿ ಸಂತತ ಚಕ್ರಧರ ಶೋಭಿ ||೧೪||

ಜಿತತಮನು ತಾನೆನಿಪ ಸರ್ವದ
ರತುನವರ ತಾ ಭುವನ ಮಧ್ಯದಿ
ವಿತತ ಧರಿಗಾಧರ ಸಂತತ ಮಂಚಮುಖ ಮೂರ್ತಿ
ನತಸುಪಾಲಕ ಕಶ್ಯಪಾತ್ಮಜ
ಪ್ರಥಿತರಾಜಸುತೇಜಹಾರಕ
ಸತತ ದೂಷಣ ವೈರಿ ಗೋಕುಲಪೋಷ ತಾನೆನಿಪ ||೧೫||

ವಿತತಕಾಂತಿಲಿ ಲಸದಿಗಂಬರ
ಪತಿತ ಕಲಿಕೃತಪಾಪಹಾರಕ
ಸತತ ಹರಿಯವತಾರ ದಶಕವ ತಾಳಿ ತಾನೆಸೆವ
ಕೃತಿಯರಮಣನ ಕರುಣಬಲದಲಿ
ನತಿಪಜನಕಖಿಳಾರ್ಥ ನೀಡುವ
ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಪ್ಪ ||೧೬||

ವರವಿಭೂತಿಯ ಧರಿಸಿ ಮೆರೆವನು
ಹರನು ತಾನೇನಲ್ಲ ಸರ್ವದ
ಹರಿನಿವಾಸನು ಎನಿಸಲಾ ಪಾಲ್ಗಡಲುತಾನಲ್ಲ
ಸುರಭಿಸಂಯುತನಾಗಿ ಇರಲೂ
ಮಿರುಪುಗೋಕುಲವಲ್ಲತಾನೂ
ಸುರರಸಂತತಿ ಸಂತತಿರಲೂ ಸ್ವರ್ಗತಾನಲ್ಲ ||೧೭||

ತುರಗ-ಕರಿ-ರಥ-ನರ ಸಮೇತನು
ನರವರೇಶನ ದಳವುಯೆನಿಸನು
ನಿರುತ ಪರಿಮಳ ಸೇವಿಯಾದರು ಭ್ರಮರತಾನಲ್ಲ
ಕರದಿ ದಂಡವ ಪಿಡಿದುಯಿರುವನು
ನಿರಯಪತಿತಾನಲ್ಲವೆಂದಿಗು
ಸುರರಿಗಸದಳವೆನಿಪೊದೀತನ ಚರ್ಯವಾಶ್ಚರ್ಯ ||೧೮||

ಕರದಿ ಪಿಡಿದಿಹ ಗುರುವರೇಣ್ಯನು
ಶರಣ ಶರಣಜಹರಾಭೀಷ್ಟ ಫಲಗಳ
ತ್ವರದಿ ಸಲಿಸುತಲವರ ಭಾರವ ತಾನೆಪೊತ್ತಿಹನು
ಮರೆಯ ಬೇಡವೊ ಕರುಣನಿಧಿಯನು
ಸ್ಮರಣೆ ಮಾಡಲು ಬಂದು ನಿಲ್ಲುವ
ಪರಮ ಪಾವನರೂಪತೋರಿಸಿ ತಾನೆ ಕಾಯ್ದಿಹನೂ ||೧೯||

ಅತಸಿ ಪೂ ನಿಭಗಾತ್ರ ಸರ್ವದ
ಸ್ಮಿತಸುನೀರಜನೇತ್ರ ಮಂಗಳ
ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ
ಅತುಲ ತುಳಸಿಯ ಮೂಲಕಂಧರ
ನತಿಪಜನತತಿಲೋಲ ಕಾಮದ
ಪತಿತ-ಪಾವನ-ಚರಣ ಶರಣಾಂಭರಣ ಗುರುಕರುಣಾ ||೨೦||

ಚಂದ್ರಮಂಡಲವದನ ನಗೆ ನವ-
ಚಂದ್ರಿಕೆಯತೆರ ಮೆರೆಯಾ ಮೇಣ್ ಘನ-
ಚಂದ್ರತಿಲಕದ ರಾಗ ಮನದನುರಾಗ ಸೂಚಿಪದೂ
ಇಂದ್ರನೀಲದ ಮಣಿಯ ಮೀರುವ
ಸಾಂದ್ರದೇಹದ ಕಾಂತಿ ಜನನಯ-
ನೇಂದ್ರಿಯದ್ವಯ ಘಟಿತ ಪಾತಕತರಿದು ರಕ್ಷಿಪುದು ||೨೧||

ಶರಣ ಜನಪಾಪೌಘನಾಶನ
ಶರಣ ನೀರಜ ಸೂರ್ಯಸನ್ನಿಭ
ಶರಣಕುವಲಚಂದ್ರ ಸದ್ಗುಣಸಾಂದ್ರ ರಾಜೇಂದ್ರ
ಶರಣಸಂಘಚಕೋರ ಚಂದ್ರಿಕ
ಶರಣ ಜನಮಂದಾರ ಶಾಶ್ವತ
ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೂ ||೨೨||

ಪಾತಕಾದ್ರಿಗೆ ಕುಲಿಶನೆನಿಸುವ
ಪಾತಕಾಂಬುಧಿ ಕುಂಭಸಂಭವ
ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ
ಪಾತಕಾಭಿಧತಿಮಿರಸೂರ್ಯನು
ಪಾತಕಾಂಬುದವಾತ ಗುರು ಜಗ-
ನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಎಂಟನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Sri Raghavendra Vijaya – Part 7 by Guru Jagannatha Dasaru

ರಾಘವೇಂದ್ರ ವಿಜಯ – Part 7

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯ ಜಯತು ಗುರುರಾಯ ಶುಭಕರ
ಜಯ ಜಯತು ಕವಿಗೇಯ ಸುಂದರ
ಜಯ ಜಯತು ಘನ ಬೋಧ ಗುಣಗಣಪೂರ್ಣ ಗಂಭೀರ
ಜಯ ಜಯತು ಭಕ್ತಲಿಪಾಲಕ
ಜಯ ಜಯತು ಭಕ್ತೇಷ್ಟದಾಯಕ
ಜಯ ಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ ||೧||

ಆದಿಯಲಿ ಪ್ರಹ್ಲಾದ ನಾಮಕ-
ನಾದ ತ್ರೇತಾಯುಗದಿ ಲಕ್ಷ್ಮಣ-
ನಾದ ದ್ವಾಪರಯುಗದಿ ಬಲ ಬಾಹ್ಲೀಕನಾಮದಲಿ
ಯಾದವೇಶನ ಭಜಿಸಿ ಕಲಿಯುಗ
ಪಾದದೊಳು ತಾ ಎರಡು ಜನ್ಮವ
ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ ||೨||

ಸಾರ ಸುಂದರಕಾಯ ಸುಗಣೋ-
ದಾರ ಶುಭತಮ ಸ್ವೀಯ ಮಹಿಮಾ-
ಪಾರಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ
ಧಾರುಣೀಸುರ ಕುಮುದಚಂದಿರ
ಘೋರಪಾತಕ ತಿಮಿರದಿನಕರ
ಧೀರಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು ||೩||

ಸೂರಿಜನಹೃದಯಾಬ್ಜಮಂದಿರ
ಹೀರ-ಹಾರ-ವಿಭೂಷಿತಾಂಗನು
ಚಾರು-ರತ್ನ-ಕಿರೀಟಕುಂಡಲ-ರತ್ನಮಾಲೆಗಳ
ವಾರೀಜಾಕ್ಷೀ ಮಣಿಯು ತುಲಸೀ
ಸಾರಮಾಲೆಯ ಧರಿಸಿ ಯತಿವರ
ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ ||೪||

ಚಾರುತರ ಕೌಪೀನ ಪಾದುಕ-
ಧಾರಿ ದಂಡ ಕಮಂಡು ಲಾಂಚಿತ
ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು
ಸಾರಿದವರಘ ಹರಿದು ಸುಖಫಲ
ಸೂರಿ ಕೊಡುತಲಿ ಸರ್ವಕಾಲದಿ
ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ ||೫||

ಮತಿಮತಾಂವರ ರಾಘವೇಂದ್ರನು
ಮಿತಿಯುಯಿಲ್ಲದೆ ಮಹಿಮೆ ಜನರಿಗೆ
ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ
ಸತಿಸುತಾದಿ ಸುಭಾಗ್ಯ ಸಂಪದ
ಮತಿಯು ಜ್ಞಾನ ಸುಭಕ್ತಿ ದಿನದಿನ
ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ ||೬||

ಸುರರ ನದಿಯಂದದಲಿ ಪಾಪವ
ತರಿವ ನರ್ಕನ ತೆರದಿ ಕತ್ತಲೆ
ಶರಧಿತನಯನ ತೆರದಿ ತಾಪವ ಕಳೆದು ಸುಖವೀವ
ಸರಿಯುಗಾಣೆನು ಇವರ ಚರ್ಯಕೆ
ಹರಿಯು ತಾನೇ ಸಿರಿಯ ಸಹಿತದಿ
ಇರುವ ತಾನಾನಂದ ಮುನಿವರ ಸಕಲಸುರಸಹಿತ ||೭||

ಇನಿತೆ ಮೊದಲಾದಮಿತ ಗುಣಗಣ-
ವನಧಿಯೆನಿಸುತಲವನಿತಳದಲಿ
ಅನುಪಮೋಪವ ತಾನೆ ತನ್ನನು ನಂಬಿ ಭಜಿಪರಿಗೆ
ಕನಸಿಲಾದರು ಶ್ರಮವ ತೋರದೆ
ಮನದ ಬಯಕೆಯ ಸಲಿಸಿ ಕಾಯುವ
ತನುಸುಛಾಯದ ತೆರದಿ ತಿರುಗುವ ತನ್ನ ಜನರೊಡನೆ ||೮||

ಏನು ಕರುಣೀಯೊ ಏನು ದಾತನೊ
ಏನು ಮಹಿಮೆಯೊ ಏನು ಶಕುತಿಯೊ
ಏನು ಇವರಲಿ ಹರಿಯ ಕರುಣವೊ ಏನು ತಪಬಲವೋ
ಏನು ಕೀರ್ತಿಯೊ ಜಗದಿ ಮೆರೆವದು
ಏನು ಪುಣ್ಯದ ಫಲವೊ ಇವರನ
ಏನು ವರ್ಣಿಪೆ ಇವರ ಚರಿಯವನಾವ ಬಲ್ಲವನು ||೯||

ಧರಣಿ ತಳದಲಿ ಮೆರೆವ ಗುರುವರ
ಚರಿಯ ತಿಳಿಯಲು ಸುರರೆ ಯೋಗ್ಯರು
ಅರಿಯರೆಂದಿಗು ನರರು ದುರುಳರು ಪರಮಮೋಹಿತರೂ
ಮರುಳುಮಯ ಭವದಾಶ ಪಾಶದ
ಉರುಳು ಗಣ್ಣಿಗೆ ಶಿಲ್ಕಿ ಹಗಲೂ
ಇರುಳುಯನದಲೆ ಏಕವಾಗೀ ತೊಳಲಿ ಬಳಲುವರು ||೧೦||

ಕರುಣವಾರಿಧಿ ಶರಣಪಾಲಕ
ತರುನದಿನಕರನೆನಿಪ ಗುರುವರ
ಚರಣ ಸೇವಕಜನರಪಾಲಿಪ ಜನನಿ ತೆರದಂತೆ
ಸುರರತರುವರದಂತೆ ಸಂತತ
ಪೊರೆದು ತನ್ನಯ ಭಕುತ ಜನರನು
ಧರಣಿಮಂಡದೊಳಗೆ ರಾಜಿಪ ನತಿಪಜನಭೂಪಾ ||೧೧||

ಎನು ಚೋದ್ಯ್ವೊ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೆ ನಿಂತಿಹನೋ
ಏನು ಕರುಣಾನಿಧಿಯೊ ಈತನು
ಏನು ಭಕುರೈಗಭಯದಾಯಕ
ಏನು ಈತನ ಮಹಿಮೆ ಲೋಕಕಗಮ್ಯವೆನಿಸಿಹದೋ ||೧೨||

ವಿಧಿಯು ಬರದಿಹ ಲಿಪಿಯ ಕಾರ್ಯವ
ಬದಲಿಮಾಡುವ ಶಕುತಿ ನಿನಗೇ
ಪದುಮನಾಭನು ದಯದಿ ತಾನೇಯಿತ್ತ ಕಾರಣದಿ
ಸದಯ ನಿನ್ನಯ ಪಾದಪದುಮವ
ಹೃದಯ ಮದ್ಯದಿ ಭಜಿಪ ಶಕುತಿಯ
ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು ||೧೩||

ಘಟನವಾಗದ ಕಾರ್ಯಗಳ ನೀ
ಘಟನಮಾಡುವ ವಿಷಯದಲಿ ನೀ
ಧಿಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ
ಶಠದಿ ನಿನ್ನನು ಭಜಿಸದಿಪ್ಪರ
ಶಠವ ಕಳೆದತಿಹಿತದಿ ನಿನ್ನಯ
ಭಠರ ಕೋತಿಗೆ ಘಟನಮಾಡುವದೇನು ಅಚ್ಚರವೋ ||೧೪||

ನಿನ್ನ ಕರುಣಕೆ ಎಣಿಯಗಾಣೆನೊ
ನಿನ್ನ ಶಕುತಿಗೆ ನಮನಮಾಡುವೆ
ನಿನ್ನ ಕರುಣಕಟಾಕ್ಷದಿಂದಲಿ ನೋಡೊ ಗುರುರಾಯ
ನಿನ್ನ ಪದಯುಗದಲ್ಲಿ ಸರ್ವದ
ಎನ್ನ ಮನವನು ನಿಲಿಸಿ ಪಾಲಿಸೊ
ನಿನ್ನ ಜನ್ಯನು ನಾನು ಎನ್ನಯ ಜನಕ ನೀನಲ್ಲೆ ||೧೫||

ಹಿಂದೆ ಮಾಡಿದ ನಿನ್ನ ಮಹಿಮೆಗ
ಳೊಂದು ತಿಳಿಯದು ಪೇಳೊ ಶಕುತಿಯು
ಎಂದಿಗಾದರು ಪುಟ್ಟಲಾರದು ಮನುಜರಾಧಮಗೇ
ಇಂದು ಮಹಿಮವ ತೋರಿ ಭಕುತರ
ವೃಂದ ಮೋದದಿ ಪಾಡಿಕುಣಿವದು
ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು ||೧೬||

ವ್ಯಾಸಮುನಿ ಗುರುವರ್ಯ ಎನ್ನಯ
ಕ್ಲೇಶ ನಾಶನಮಡಿ ಕರುನದಿ
ವಾಸುದೇವನ ಹೃದಯಸದನದಿ ತೋರಿ ಪೊರೆಯೆಂದೇ
ವಾಸವಾಸರದಲ್ಲಿ ತವ ಪದ
ಆಶೆಯಿಂದಲಿ ಸೇವೆಮಾಳ್ಪೆನು
ದಾಸನೆನಿಸೀ ಭವದ ಶ್ರಮಪರಿಹರಿಸೊ ಗುರುರಾಯ ||೧೭||

ತತ್ವಸಾರವ ತಿಳಿಸು ಭವದಿ ವಿ-
ರಕ್ತ ಮತಿಯನುಯಿತ್ತು ತ್ವತ್ವದ
ಸಕ್ತಚಿತ್ತನಮಾಡಿ ಭಗವದ್ಭಕ್ತನೆಂದೆನಿಸು
ಕೆತ್ತವೋಲ್ ಮನ್ಮನದಿಯಿರುತಿಹ
ಕತ್ತಲೆಯ ಪರಿಹರಿಸಿ ದಿನದಿನ
ಉತ್ತಮೋತ್ತಮ ಜ್ಞಾನಭಕುತಿಯಿನಿತ್ತು ಪೊರೆಯೆನ್ನ ||೧೮||

ಪ್ರಣತಜನಮಂದಾರ ಕಾಮದ
ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ
ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ
ಮಣಿಸು ಮನವನು ನಿನ್ನ ಪದದಲಿ
ಗುಣಿಸಿ ನಿನ್ನಯ ರೂಪ ನೋಡೀ ದಣಿಸು ನಿನ್ನವರೊಳಗೆ ಸಂತತ ಎಣಿಸೊ ಕರುಣಾಳೋ ||೧೯||

ನಿನ್ನ ಕಥೆಗಲ ಶ್ರವಣಮಾಡಿಸೊ
ನಿನ್ನ ಗುಣಕೀರ್ಥನೆಯ ಮಾಡಿಸೊ
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ
ನಿನ್ನ ಅರ್ಚನೆಗೈಸೊ ಗುರುವರ
ನಿನ್ನ ವಂದನೆಗೈಸೊ ದಾಸ್ಯವ
ನಿನ್ನ ಗೆಳೆತನ ನೀಡೊ ಯತಿವರ ಎನ್ನನರ್ಪಿಸುವೇ ||೨೦||

ಅಮಿತ ಮಹಿಮನೆ ನಿನ್ನ ಪಾದಕೆ
ನಮಿಪೆ ಮತ್ಕೃತದೋಶವೆಣಿಸದೆ
ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ
ಅಮರರರಿಯರಗಮ್ಯಮಹಿಮವ
ವಿಮಲಗುಣಮಯ ಪ್ರಬಲತಮ ನೀ-
ನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ ||೨೧||

ಶಿರದಿ ಸಮನವ ಮಾಡಿ ನಿನ್ನನು
ಕರದ ಸಂಪುಟಮಾಡಿ ವಿನಯದಿ
ಮರೆಯದಲೆ ನಾ ಬೇಡಿಕೊಂಬೆನೊ ಶರಣಪರಿಪಾಲ
ಪರಮಕರುಣಿಯೆ ದ್ವಿಜಗೆ ಬಂದಿಹ
ಮರಣ ಬಿಡಿಸೀ ಸುಖವ ನೀಡಿದೆ
ಅರಿಯಲೆಂದಿಗು ಸಾಧ್ಯವಲ್ಲವೊ ನಿನ್ನ ಮಹಮಹಿಮೆ ||೨೨||

ಸಕಲಗುಣಗಣಪೂರ್ಣ ಭಕುತಗೆ
ಅಖಿಳಕಾಮಿತದಾತ ಸುಖಮಯ
ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ
ಲಕುಮಿರಮಣನ ಪ್ರೀತಿಪಾತ್ರನೆ
ಭಕುತಕೈರವಸ್ತೋಮ ಚಂದಿರ
ಮುಕುತಿದಾಯಕ ಮೌನಿಕುಲಮಣಿ ನಮಿಮೆ ಸಲಹೆನ್ನಾ ||೨೩||

ಸ್ವಸ್ತಿ ಶ್ರೀ ಗುರುರಾಘವೇಂದ್ರಗೆ
ಸ್ವಸ್ತಿ ಗುಣಗನಸಾಂದ್ರಮೂರ್ತಿಗೆ
ಸ್ವಸ್ತಿ ಶ್ರೀಯತಿನಾಥ ಲೋಕದಿ ಖ್ಯಾತ ಮಮನಾಥ
ಸ್ವಸ್ತಿ ಶ್ರೆ ಗುರುಸಾರ್ವಭೌಮಗೆ
ಸ್ವಸ್ತಿ ಶ್ರೀ ಸರ್ವಜ್ಞತಮಗೇ
ಸ್ವಸ್ತಿ ಶ್ರೀ ಸುರಧೇನು ಸುರತರು ನಮಿಪ ಭಕುತರಿಗೆ ||೨೪||

ಖ್ಯಾತನಾದನು ಸಕಲಲೋಕಕ-
ನಾಥಪಾಲಕನೆಂಬೊ ಬಿರುದನು
ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ
ಈತನೇ ಮಹದಾತ ಜಗದೊಳು
ಖ್ಯಾತ ಮಹಿಮನು ಶರಣವತ್ಸಲ
ದಾತ ಗುರುಜಗನ್ನಾಥವಿಠಲನ ಸೇವಕಾಗ್ರಣಿಯೂ ||೨೫||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಏಳನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Sri Raghavendra Vijya – Part 6 by Guru Jagannantha Dasaru

ರಾಘವೇಂದ್ರ ವಿಜಯ – Part 6

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ನತಿಪಜನತತಿಗಮರಪಾದಪ
ನುತಿಪಜನಸುರಧೇನು ಕಾಮಿತ
ಸತತನೀಡುತ ಧರಣೆಸುರವರನಿಕರಪರಿಪಾಲ
ಪ್ರತಿಯುಕಾಣೆನೊ ವ್ರತಿಗಳರಸನೆ
ನತಿಪೆ ತವಪದ ಕಮಲಯುಗ್ಮಕೆ
ತುತಿಪೆ ಎನ್ನನು ಪೊರೆಯೊ ಗುರುವರ ಪತಿತಪಾವನನೆ ||೧||

ಆವ ಪಂಪಾಕ್ಷೇತ್ರದಲಿ ಹರಿ
ಶೇವಕಾಗ್ರಣಿ ವ್ಯಾಸಮುನಿಯೂ
ಕಾಮನಯ್ಯನ ಸತತ ಭಜಿಸುತ ವಾಸಮಾಡಿರಲೂ
ದೇವವರ್ಯರೆ ಒಂದುರೂಪದಿ
ತವೆಭೂತಳದಲ್ಲಿ ಜನಿಸುತ
ಕೋವಿದಾಗ್ರೇಸರರುಯೆನಿಸೆ ಮೆರದರಾ ಸ್ಥಳದಿ ||೨||

ನಾರದರೆ ತಾ ಶ್ರೀಪುರಂದರ
ಸೂರಿತನಯನೆ ಕನಕ ತಾ ಜಂ-
ಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ
ಈರು ಎರಡೀ ಜನರು ಸರ್ವದ
ಮಾರನಯ್ಯನ ಪ್ರೇಮಪಾತ್ರರು
ಸೇರೆಯಿರುವದರಿಂದೆ ಪಂಪಾ ನಾಕಕಿನ್ನಧಿಕ ||೩||

ವ್ಯಾಸರಾಯರ ಮಠದ ಮಧ್ಯದಿ
ವಾಸಮಾಡಲು ಸಕಲದ್ವಿಜನೂ
ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು
ವಾಸವನ ಶುಭಸಭೆಯೊ ಮೇಣ್ ಕಮ-
ಲಾಸನನ ಸಿರಿವೈಜಯಂತಿಯೊ
ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ ||೪||

ಪಂಪಕ್ಷೇತ್ರವು ದಾಸವರ್ಯರ
ಗುಂಪಿನಿಂದ ಸಮೇತವಾಗೀ
ಶಂಫಲಾಪುರದಂತೆ ತೋರ್ಪದು ಸುಜನಮಂಡಲಕೆ
ತಂಪುತುಂಗಾನದಿಯವನ ತಾ
ಸೊಂಪಿನಿಂದಲಿ ಸರ್ವಜನಮನ
ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪುದು ||೫||

ಒಂದುದಿನದಲಿ ವ್ಯಾಸಮುನಿಯು ಪು-
ರಂದರಾರ್ಯರು ಒಂದುಗೂಡೀ
ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ
ಮಂದಿರಕೆ ಬಲಸಾರೆಯಿರುತಿಹ-
ದೊಂದು ಸುಂದರಪುಲಿನಮಧ್ಯದಿ
ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು ||೬||

ಬಂದನಲ್ಲಿಗೆ ಕುರುಬನೊಬ್ಬನು
ತಮ್ದ ಕುರಿಗಳ ಬಿಟ್ಟುದೂರದಿ
ನಿಂದು ನೋಡಿದ ಇವರ ಚರಿಯವ ಕನಕನಿಲ್ಲದಲೆ
ಮಂದಹಾಸವು ಕೆಲವುಕಾಲದಿ
ಮಂದರಾಗೊರು ಕೆಲವುಕಾಲದಿ
ಪೊಂದಿರಿಬ್ಬರು ಅಪ್ಪಿಕೊಂಡೂ ಮುದದಿ ರೋದಿಪರೋ ||೭||

ಬಿದ್ದು ಪುಲಿನದಿ ಪೊರಳಿ ಹೊರಳೊರು
ಎದ್ದು ಕುಣಿಕುಣೀದಾಡೆ ಚೀರೊರು
ಮುದ್ಧು ಕೃಷ್ಣನ ತೋರಿತೋರುರ ತಾವು ಪಾಡುವರೋ
ಶಿದ್ಧಸಾಧನ ಕನಕ ಸಮಯಕೆ
ಇದ್ದರಿಲ್ಲೀ ಲಾಭವೋಗೋದು
ಇದ್ದಸ್ಥಾನಕೆ ಪೋಗಿ ಆತನ ಕರೆವೊರಾರಿಲ್ಲಾ ||೮||

ಸುದ್ಧಿ ಕೇಳುತ ನಿಂತ ಕುರುಬನು
ಎದ್ದು ಕನಕನ ಕರೆದು ತೋರುವೆ
ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ
ಎದ್ದು ನಡೆದಾನದಿಯ ತೀರದ-
ಲಿದ್ದ ಕನಕನ ಬೇಗ ಕರದೂ
ತಂದು ತೋರುತ ವ್ಯಾಸಮುನಿಗೇ ಬಿದ್ದು ಬೇಡಿದನು ||೯||

ದಾರಿ ಮಧ್ಯದಿ ತನಗೆ ಕನಕನು
ತೋರಿ ಪೇಳಿದ ತೆರದಿ ಕುರುಬನು
ಸರೆಗರೆದೂ ಬೇಡಿಕೊಮ್ಡನು ಲಾಭ ಕೊಡಿರೆಂದು
ಧೀರಮುನಿವರ ದಾಸವರರೆ ವಿ-
ಚಾರಮಾಡಿರಿ ಏನು ನೀಡಲಿ
ತೋರಲೊಲ್ಲದು ಪರಿಯ ನೀವೇ ಪೇಳಿರೆಮಗೆಂದ ||೧೦||

ಕನಕ ಪೇಳಿದ ಕೊಟ್ಟವಚನವು
ಮನದಿ ಯೋಚಿಸಿ ಕೊಡುವದವಗೇ
ಅನುಜನಾತನು ನಿಮಗೆ ತಿಳಿವದಿ ಚಿಂತೆಯಾಕದಕೆ
ಎನಲು ಮುನಿವರ ಮನದಿ ತಿಳಿದೂ
ಜನಿತವಾದಾನಂದಲಾಭವ
ಮನಸುಪೂರ್ವಕಯಿತ್ತು ಕರುಣವ ಮಾಡಿ ತಾಪೊರೆದ ||೧೧||

ಜ್ಞಾನಿಗಳು ತಾವಂಗಿಕರಿಸಲು
ಹೀನಹೆಲಸಗಳಾದ ಕಾಲಕು
ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು
ಸಾನುರಾಗದಿ ಸಕಲಜನರಭಿ-
ಮಾನಪೂರ್ವಕ ಪೊರೆದು ಭಕ್ತಿ-
ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು ||೧೨||

ತೀರ್ಥಸ್ನಾನವಮಾಡಿ ತಾವಾ
ತೀರ್ಥಶುದ್ಧಿಯ ಮಾಡೊರಲ್ಲದೆ
ತೀರ್ಥಸ್ನಾನಗಳಿಂದಲವರಿಗೆ ಏನುಫಲವಿಲ್ಲಾ
ಪಾರ್ಥಸಾರಥಿಪಾದ ಮನದಲಿ
ಸ್ವಾರ್ಥವಿಲ್ಲದೆ ಭಜನಗೈದು ಕೃ-
ತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ ||೧೩||

ಬುಧರ ದರುಶನದಿಂದ ಪಾತಕ
ಸದದು ಭಾಷಣದಿಂದ ಮುಕುತಿಯ
ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು
ಒದಗಿಸುವರೂ ಭಾಗ್ಯ ಜನರಿಗೆ
ಮದವು ಏರಿದ ಗಜದ ತೆರೆದಲಿ
ಪದುಮನಾಭನ ದಾಸರವರಿಗಸಾಧ್ಯವೇನಿಹದೋ ||೧೪||

ಯತಿಕುಲೋತ್ತಮವ್ಯಾಸರಾಯರ
ಮಿತಿಯುಯಿಲ್ಲದ ಮಹಿಮೆಯಿಂದಲಿ
ಪತಿತಪಾಮರರೆಲ್ಲರು ಧೃತರಾದುದೇನರಿದು
ಸತತಬಿಂಬೋಪಾಸನೊಚ್ಛ್ರಿತ
ವಿತತಜ್ಞಾನದ ವಿಭವದಿಂದಲಿ
ಪ್ರತಿಯಿಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ ||೧೫||

ಮೋದತೀರ್ಥರ ಶಾಸ್ತ್ರಜಲನಿಧಿಗೆ
ಮೋದದಾಯಕಸೋಮನೋ ರ-
ವಾವಿದ್ವಾರಿಜಹಂಸ ಚಂದಿರ ಸ್ವಮತಸತ್ಕುಮುದ-
ಕಾದ ತಾ ನಿಜ ಸುಜನ ಕೈರವ
ಬೋಧಕರ ತಾ ಚಂದ್ರಮಂಡಲ
ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ ||೧೬||

ಹರಿಯರೂಪ ಸಮಾದಿಯೋಗದಿ
ನಿರುತಕಾಣುತಲಿಪ್ಪ ಗುರುವರ
ಹೊರಗೆ ಕಾಣುವೆನಿಂಬ ಕಾರಣ ಕನಕಗಿನಿತೆಂದಾ
ಚರನ ತೆರದಲಿ ನಿನ್ನ ಸಂಗಡ
ತಿರುಗುತಿಪ್ಪನು ಸರ್ವಕಾಲದಿ
ಸಿರಿಯರಮಣನ ಎನಗೆ ತೋರಿಸು ಮರಿಯಬೇಡೆಂದಾ ||೧೭||

ಅಂದ ಮುನಿವರವಚನ ಮನಸಿಗೆ
ತಂದು ಕನಕನು ಹರಿಗೆ ಪೇಳಿದ
ಒಂದುಕಾಲದಿ ಮುನಿಗೆ ದರುಶನ ನೀಡು ಜಗದೀಶಾ
ಇಂದಿರಾಪತಿ ಕೇಳಿ ವಚನವ
ಮಂದಹಾಸವಮಾಡಿ ನುಡಿದನು
ಬಂದು ಶ್ವಾನಸ್ವರೂಪದಿಂದಲಿ ಮುನಿಗೆ ತೋರುವೆನು ||೧೮||

ದೇವತಾರ್ಚನೆಮಾಡಿ ಗುರುವರ
ಸಾವಧಾನದಿ ಭಕ್ಷ್ಯ-ಭೋಜ್ಯವ
ಕಮನಯ್ಯಗೆ ನೀಡೊಕಾಲದಿ ಶ್ವಾನ ಬರಲಾಗ
ಕೋವಿದಾಗ್ರಣಿ ವ್ಯಾಸಮುನಿಯು
ಭಾವಿಶ್ಯಾಗಲೆ ಹರಿಯ ಮಹಿಮೆಯ
ದೇವದೇವನೆ ಈ ವಿಧಾನದಿ ತೋರ್ದ ತನಗೆಂದೂ ||೧೯||

ದೃಷ್ಟಿಯಿಂದಲಿ ಕಮ್ಡು ಮುನಿವರ
ಥಟ್ಟನೆದುಕುಲತಿಲಕಕೃಷ್ಣನ
ಬಿಟ್ಟು ತಾ ಜಡಮೂರ್ತಿ ಪೊಜೆಯ ಶುನಕದರ್ಚನೆಯಾ
ಮುಟ್ಟಿ ಭಜಿಸಿದ ಭಕುತಿಯಿಂದಲಿ
ಕೊಟ್ಟ ತಾನೈವೇದ್ಯ ತ್ವರದಲಿ
ತಟ್ಟಿಮಂಗಳದಾರ್ತಿಮಾಡಿ ಶಿರದಿ ನಮಿಸಿದನು ||೨೦||

ಅಲ್ಲಿ ದ್ವಿಜವರರಿದನು ನೋಡೀ
ಎಲ್ಲಿಯಿಲ್ಲದೆ ಚರಿಯ ಯತಿವರ-
ರಲ್ಲಿ ನಡೆಯಿತುಯಿನ್ನುಮುಂದೇ ಮಡಿಯು ಮೈಲಿಗೆಯು
ಇಲ್ಲದಾಯಿತು ನಾಯಿಪೂಜೆಯು
ಎಲ್ಲ ಜನರಿಗೆ ಮತವು ಎನಿಪದು
ಖುಲ್ಲಕನಕನ ಮಾತಿಗೆಯತಿ ಮರಳುಗೊಂಡಿಹನು ||೨೧||

ಈ ತೆರದಿ ತಾವೆಲ್ಲ ವಿಬುಧರು
ಮಾತನಾಡಿದರೆಂಬೊ ವಾರ್ತೆಯ
ದೂರಪರಿಮುಖದಿಂದ ಕೇಳೀ ವ್ಯಾಸಮುನಿರಾಯ
ನೀತವಾದಪರೋಕ್ಷದಿಂದಲಿ
ಜಾತಜ್ಞಾನದಿ ಹರಿಯ ರೂಪವ
ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ ||೨೨||

ಸರ್ವಜನರಿಗೆ ಸಮ್ಮತಾಯಿತು
ಗುರುವರೇಣ್ಯನ ಮಹಿಮೆ ಪೊಗಳುತ
ಊರ್ವಿತಳದಲಿ ಖ್ಯಾತಿಮಾಡ್ದರು ಸರ್ವಸಜ್ಜನರು
ಶರ್ವನಾಲಯದಲ್ಲಿ ಸೂರ್ಯನ
ಪರ್ವಕಾಲದಿ ವಿಪ್ರಪುತ್ರನ
ದರ್ವಿಸರ್ಪವು ಕಚ್ಚಲಾಕ್ಷಣ ಮೃತಿಯನೆಯ್ದಿದನು ||೨೩||

ಮೃತಿಯನೆಯ್ದಿದ ವಿಪ್ರಪುತ್ರನ
ಮ್ರ‍ೃತಿಯ ತಾ ಪರಿಹರಿಸಿ ಶೀಘ್ರದಿ
ಪಿತಗೆ ನೀಡಿದ ಸರ್ವಜನರೂ ನೋಡುತರಲಾಗಾ
ವ್ರತಿವರೋತ್ತಮಮಹಿಮೆ ಜಗದೊಳ-
ಗತುಳವೆನುತಲಿ ಮುನಿಯ ಗುಣಗಳ
ತುತಿಸಿ ಪೊಗಳುತ ಪಾದಕಮಲಕೆ ನಮನಮಾಡಿದರು ||೨೪||

ವಿದ್ಯಾರಣ್ಯನ ವಾದದಲಿ ತಾ
ಗೆದ್ದ ಶ್ರೀ ಜೈತೀರ್ಥವಿರಚಿತ
ಶುದ್ಧ ಶ್ರೀಮನ್ಯಾಯಸತ್ಸುಧನಾಮಸತ್ಕೃತಿಗೆ
ಎದ್ದುತೋರುವ ಚಂದ್ರಿಕಾಭಿಧ
ಮುದ್ದುತಿಪ್ಪಣಿಸಹಿತ ಪಾಠವ
ಮಧ್ವರಾಯರ ಬಳಿಯೆ ಪೇಳುತಲಿದ್ದನಾಸ್ಥಳದಿ ||೨೫||

ಮತ್ತೆ ಪಂಪಾಕ್ಷೇತ್ರದಲಿ ತಾ-
ನಿತ್ಯನಿತ್ಯದಲಿ ಹರಿಯ ಭಜಿಸುತ
ಸತ್ಯಸಂಕಲ್ಪಾನುಸಾರದಿ ಕೃತ್ಯ ತಾಮಾಡಿ
ಉತ್ತಮೋತ್ತಮವೆನಿಪ ಸ್ಥಾನವು
ಹತ್ತಲಿಹ ಗಜಗಹ್ವರಾಭಿಧ
ಎತ್ತನೋಡಲು ತುಂಗನಧಿಯುಂಟದರ ಮಧ್ಯದಲಿ ||೨೬||

ಇಂದಿಗಿರುತಿಹವಲ್ಲಿ ಶುಭನವ
ಛಂದ ಬೃಂದಾವನಗಳೊಳಗೇ
ಸುಂದರಾತ್ಮಕವಾದ ವೄಂದಾವನದಿ ಮುನಿರಾಯಾ
ಪೊಂದಿಯಿಪ್ಪನು ಸತತ್ ತನ್ನನು
ವಂದಿಸೀಪರಿ ಭಜಿಪ ಜನರಿಗೆ
ಕುಂದದತೆ ಸರ್ವಾರ್ಥ ಕೊಡುತಲಿಯಿಪ್ಪ ನಮ್ಮಪ್ಪ ||೨೮||

ವ್ಯಾಸರಾಯರ ಮಹಿಮೆ ದಿನದಿನ
ಬ್ಯಾಸರಿಲ್ಲದೆ ಪಠಿಪ ಜನರಿಗೆ
ಕ್ಲೇಶ-ದೇಹಾಯಾಸ-ಘನತರ ದೋಷ-ಸಮನಿಸವು
ವಾಸುದೇವನ ಕರುಣವವನಲಿ
ಸೂಸಿತುಳಕೊದು ಸಂಶಯಾತಕೆ
ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು ||೨೯||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಆರನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Sri Raghavendra Vijaya – Part 5 by Guru Jagannatha Dasaru

ರಾಘವೇಂದ್ರರ ವಿಜಯ Part 5

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಬೇಧ ಪಂಚಕ ತಾರತಮ್ಯವ-
ನಾದಿಕಾಲದಿ ಸಿದ್ಧವೆನ್ನುವ
ಮೋದತೀರ್ಥರ ಶಾಸ್ತ್ರಮರ್ಮವಪೇಳ್ದ ಬುಧಜನಕೆ
ಬೇಧ ಜೀವನಿಯೆಂಬ ಗ್ರಂಥವ
ಸಾದರದಿ ತಾ ರಚಿಸಿ ಲೋಕದಿ
ವಾದದಲಿ ಪ್ರತಿವಾದಿ ಸಂಘವ ಜೈಸಿ ರಾಜಿಸಿದ ||೧||

ತರ್ಕತಾಂಡವ ರಚನೆಮಾಡಿ ವಿ-
ತರ್ಕವಾದಿಯ ಮುರಿದು ಪರಗತಿ
ಕರ್ಕಶಾಗಿಹ ನ್ಯಾಯವೆನಿಪಾಮೃತವ ನಿರ್ಮಿಸಿದ
ಶರ್ಕರಾಕ್ಷಗೆ ಗಹನ ಚಂದ್ರಿಕೆ-
ಯರ್ಕನಂದದಿ ತಿಮಿರಹರ ದೇ|
ವರ್ಕರಲ್ಲದೆ ಕೃತಿಗೆ ಯೋಗ್ಯರು ನರರು ಆಗುವರೆ ||೨||

ದಶಮತೀಕೃತಶಾಸ್ತ್ರಭಾವವ
ವಿಶದಮಾಡುವ ಟಿಪ್ಪಣೀಗಳ
ಮಸೆದ ಅಸಿತೆರಮಾಡಿ ಪರಮತ ನಾಶಗೈಯುತಲಿ
ಅಸಮ ಮಹಿಮೆಯು ತೋರಿ ತಾ ಈ
ವಸುಧಿ ಮಂಡಲ ಮಧ್ಯ ಪೂರ್ಣಿಮ
ಶಶಿಯ ತೆರದಲಿ ಪೂರ್ಣಕಳೆಯುತನಾಗಿ ಶೋಭಿಸಿದ ||೩||

ತಂತ್ರಸಾದರಿ ಪೇಳ್ದ ಸುಮಹಾ
ಮಂತ್ರ ಸಂಘವ ಶಿಷ್ಯ ಜನಕೇ
ಮಂತ್ರಮರ್ಮವ ತಿಳಿಸಿಸಿದ್ಧಿಯಮಾಡಿ ತೋರಿಸುತ
ಅಂತವಿಲ್ಲದ ವಿಶ್ವಕೋಶದ
ತಂತ್ರಮಾಡುವ ಸರ್ವಲೋಕಸ್ವ-
ತಂತ್ರ ಶ್ರೀಹರಿಪಾದಪಂಕಜ ಭಜನೆ ಪರನಾದ ||೪||

ಪದಸುಳಾದಿಗಳಿಂದ ಹರಿಗುಣ
ಮುದದಿ ಪೇಳುತ ಮುದ್ರಿಕಿಲ್ಲದೆ
ಹೃದಯದಲಿ ತಾ ಮುದ್ರಿಕಿಲ್ಲದೆ
ಹೃದಯದಲಿತಾ ಚಿಂತೆಗೈತಿರಲಾಗ ಮುನಿರಾಯ
ಒದಗಿ ಪೇಳಿದ ಕೃಷ್ಣಸ್ವಪ್ನದಿ
ಬದಲುಯಾವದು ನಿನಗೆಯಿಲ್ಲವೊ
ದದುವರಶ್ರೀಕೄಷ್ಣನಾಮವೆ ನಿನಗೆ ಮುದ್ರಿಕೆಯೋ ||೫||

ಒಂದು ದಿನದಲಿ ವಿಪ್ರನೋರ್ವನು
ಬಂದುವ್ಯಾಸರ ಪಾದಕಮಲಕೆ
ವಂದಿಸೀ ಕೈಮುಗಿದು ಬೇಡಿದ ಎನಗೆ ಉಪದೇಶ
ಇಂದು ಮಾಡಿರಿ ಎನಗೆ ಪರಗತಿ
ಪೊಂದೊ ಮಾರ್ಗವ ತೋರಿ ಸಲಹಿರಿ
ಮಂದಮತಿ ನಾನಯ್ಯ ಗುರುವರ ಕರುಣಾಸಾಗರನೆ ||೬||

ಕ್ಷೋಣಿತಳದಲಿ ತನ್ನ ಮಹಿಮೆಯ
ಕಾಣಗೊಳಿಸುವೆಂದು ಚಾರಗೆ
ಕೋಣನೆಂಬುವ ನಾಮಮಂತ್ರವ ಪೇಳಿ ಕಳುಹಿದನು
ಮಾಣದಲೆ ತಾನಿತ್ಯ ಜಲಧರ
ಕೋಣ ಕೋಣವುಯೆಂದು ಜಪಿಸಿದ
ವಾಣಿ ಸಿದ್ಧಿಯಯೆಯ್ದು ಕಾಲನ ಕೋಣ ಕಂಗೊಳಿಸೆ ||೭||

ಕೆತ್ತಕತ್ತಲುಮೊತ್ತವೋ ಬಲ-
ವತ್ತರಾಂ ಜನರಾಶಿಯೋ ನಗ-
ಕುತ್ತುಮೋತ್ತಮನೀಲಪರ್ವತವೇನೋ ಪೇಳ್ವರ್ಗೆ
ಚಿತ್ತತೋಚದ ತೆರದಿ ಕಾಲನ
ಮತ್ತವಾಗಿಹ ಕೋಣ ಶ್ರೀಘ್ರದಿ
ಅತ್ತಲಿಂದಲಿ ಬಂದು ದೂತನ ಮುಂದೆ ಕಣ್ಗೆಸೆಯೆ ||೮||

ದಂಡಧರನಾ ಕೋಣ ಕಣ್ಣಿಲಿ
ಕಂಡು ಪಾರ್ವನು ಮನದಿ ಭೀತಿಯ
ಗೊಂಡು ಗಡಗಡ ನಡುಗುತೀಪರಿಶ್ರಮವನೆಯ್ದಿದನು
ಚಂಡಕೋಪವ ತಾಳಿ ಮಹಿಷವು
ಪುಂಡ ಎನ್ನನು ಕರೆದ ಕಾರಣ
ಖಂಡಿತೀಗಲೆ ಪೇಳೋ ನಿನಮನೊಬಯಕೆ ಪೂರ್ತಿಸುವೆ ||೯||

ದ್ವಿಜಲುಲಾಯದ ವಚನಲಾಸಿಸಿ
ತ್ಯಜಿಸಿ ತಪವನು ತ್ವರದಿ ಬಂದೂ
ನಿಜಗುರೂತ್ತಮರಾದ ವ್ಯಾಸರ ನಮಿಸಿ ತಾ ನುಡಿದಾ
ದ್ವಿಜನೆ ಕೇಳೆಲೊ ಮಹಿಷಪತಿಗೇ
ದ್ವಿಜವರೂಢನ ಪಾದಪಂಕಜ
ಭಜನೆಗನುಕೂಲವಾದ ಕಾರ್ಯವಮಾಡು ನೀಯೆಂದೂ ||೧೦||

ಕೆರೆಯ ಒಳಗಿಹದೊಂದು ಉರುಶಿಲೆ
ನರರಿಸದಹಳವೆನಿಸುತಿರ್ಪುದು
ಕರ್ದು ಕೋಣಕೆ ಪೇಳಿ ಶಿಲೆಯನು ತೆಗಿಸಿ ತ್ವರದಿಂದ
ಗುರುಗಳಾದಿದ ವಚನ ಶಿರದಲಿ
ಧರಿಸಿ ದ್ವಿಜತಾ ಬಂದು ಕೋಣಕೆ
ಅರಿಗೆಮಾಡಿದ ಗುರುಗಳೋಕ್ತಿಯ ನೀನೆಮಾಡೆಂದಾ ||೧೧||

ಪೇಳಿದಾದ್ವಿಜವರನ ವಚನವ
ಕೇಳಿದಾಕ್ಷಣ ಶಿಲೆಯ ತಾನೂ
ಸೀಳಿಬಿಸುಟಿತು ಸುಲಭದಿಂದಲಿ ಏನು ಅಚ್ಚರವೋ
ಕೇಳು ದ್ವಿಜವರ ಮತ್ತೆ ಕಾರ್ಯವ
ಪೇಳು ಮಾಡುವೆ ನೀನೆ ಕರೆಯಲು
ವ್ಯಾಳದಲಿ ನಾ ಬಂದುಮಾಡುವೆನೆಂದು ತಾ ನುಡಿದು ||೧೨||

ನಡಿಯಲಾ ಯಮರಾಯ ಕೋಣವು
ಬಡವದ್ವಿಜನಿಗೆ ಮುನಿಯು ಒಲಿದೂ
ಮಡದಿ-ಮಕ್ಕಳು-ವೃತ್ತಿ-ಕ್ಷೇತ್ರವ್-ಕನಕ-ಮನಿಧನವು
ದೃಢ-ಸುಭಕುತಿ-ಜ್ಞಾನವಿತ್ತೂ
ಪೊಡವಿತಳದಲಿ ಪೊರೆದು ಹರಿಪದ-
ಜಡಜಯುಗದಲಿ ಮನವನಿತ್ತೂ ಗತಿಯ ಪಾಲಿಸಿದಾ ||೧೩||

ಏನು ಮಹಿಮೆಯೊ ವ್ಯಾಸರಾಯರ
ಏನು ಪುಣ್ಯದ ಪ್ರಭವೋ ಲೋಕದಿ
ಏನು ಪೂಜ್ಯನೊ ಆವದೇವ ಸ್ವಭಾವಸಂಭವನೊ
ಏನು ಪೂರ್ವದ ತಪದ ಫಲವೋ
ಏನು ಹರಿಪದ ಪೂಜ ಫಲವೋ
ಏನು ದೈವವೋ ಇವರ ಕರುಣದಿ ಜಕಗೆ ಅಖಿಳಾರ್ಥ ||೧೪||

ಇಂದ್ರತಾ ನೈಶ್ವರ್ಯದಿಂದಲಿ
ಚಂದ್ರ ತಾ ಕಳೆಪೂರ್ತಿಯಿಂದ ದಿ-
ನೇಂದ್ರ ತಾ ನಿರ್ದೋಷತನದಲಿ ಮೆರೆವ ನೀ ತೆರದಿ
ಮಂದ್ರಗಿರಿಧರ ಹರಿಯಕರಣವು
ಸಾಂದ್ರವಾದುದರಿಂದ ತಾನೆ ಯ-
ತೀಂದ್ರಮಹಿಮೆಯಗಾಧವಾಗಿಹುದೆಂದು ಜನಹೊಗಳೆ ||೧೫||

ವ್ಯಾಸಸಾಗರವೆಂಬ ವಿಮಲ ಜ-
ಲಾಶಯವ ತಾಮಾಡಿ ದಿನದಿನ
ಕೀಶನಾಥನ ಸೇವೆಮಾಡುತ ದೇಶದಲಿ ಮೆರೆವಾ
ಶೇಷಗಿರಿಯನು ಸಾರ್ದು ವೇಂಕಟ
ಈಶ ಮೂರ್ತಿಯ ಪೂಜಿ ಸಂತತ
ಆಶೆಯಿಲ್ಲದೆಗೈದು ದ್ವಾದಶವರುಷ ಬಿಡದಂತೆ ||೧೬||

ಇಳಿದು ಗಿರಿಯನು ಧರಣಿತಳದಲಿ
ಮಲವು ಮೂತ್ರವುಮಾಡಿ ಮತ್ತೂ
ಜಲದಿ ಸ್ನಾನವಗೈದು ಪಾಠವ ಪೇಳಿ ಹರಿಪೂಜಾ
ಇಳೆಯಸುರವರಸಂಘಮಧ್ಯದಿ
ಬೆಳಗುತಿಪ್ಪನು ವ್ಯಾಸಮುನಿಯೂ
ಕಳೆಗಳಿಂದಲಿ ಪೂರ್ಣಚಂದಿರ ನಭದಿ ತೋರ್ಪಂತೆ ||೧೭||

ತಿರುಪತೀಶನ ಕರುನಪಡದೀ
ಧರೆಯಮಂಡಲ ಸುತ್ತುತಾಗಲೆ
ಧುರದಿ ಮೆರೆವಾ ಕೃಷ್ಣರಾಯನ ಸಲಹಿ ಮುದವಿತ್ತ
ಧರೆಗೆ ದಕ್ಷಿಣಕಾಶಿಯೆನಿಸುವ
ಪರಮಪಾವನ ಪಂಪಕ್ಷೇತ್ರಕೆ
ಸುರವರೇಶನ ದಿಗ್ವಿಭಾಗದಲಿರುವ ಗಿರಿತಟದಿ ||೧೮||

ಮೆರೆವ ಚಕ್ರಸುತೀರ್ಥತೀರದಿ
ಇರುವ ರಘುಕುಲರಾಮದೇವನು
ಪರಮಸುಂದರ ಸೂರ್ಯಮಂಡಲವರ್ತಿಯೆನಿಸಿಪ್ಪ
ತರುಣನಾರಾಯಣನ ಮೂರುತಿ
ಗಿರಿಯೊಳಿಪ್ಪನು ರಂಗನಾಥನು
ವರಹದೇವನು ಪೂರ್ವಭಾಗದಯಿರುವನಾಸ್ಥಳದಿ ||೧೯||

ಹರಿಯುಯಿಲ್ಲದ ಸ್ಥಳದಲಿರುತಿಹ
ಹರಿಯು ಪೂಜೆಗೆ ಅರ್ಹನಲ್ಲವೊ
ಹರಿಯ ಸ್ಥಾಪನೆ ಮುಖ್ಯಮಾಳ್ಪದುದುಯೆನುತ ಯತಿನಾಥ
ಗಿರಿಯ ಮಧ್ಯದಿ ಮರುತರೂಪವ-
ನಿರಿಸಿ ಪೂಜೆಯಮಾಡಿ ಪರಿಪರಿ
ಸುರಸ-ಪಕ್ವ-ಸುಭಕ್ಷ್ಯಭೋಜನ-ಕನಕ-ದಕ್ಷಿಣವಾ ||೨೦||

ಧರಣಿಸುರಗಣಕಿತ್ತು ಗುರುವರ
ಸ್ಮರಣೆಮಾಡುತ ನಿದ್ರೆಮಾಡಲು
ಬರುತ ಮರುದಿನ ನೋಡೆ ಕಪಿವರಮೂರ್ತಿ ಕಾಣದೆಲೆ
ಭರದಿ ಅಚ್ಚರಿಗೊಂಡು ಸಂಯಮಿ-
ವರನು ಮನದಲಿ ಯೋಚಿಸೀಪರಿ
ಮರಳಿ ಪ್ರಾಣನ ಸ್ಥಾಪಿಸೀತೆರ ಯಂತ್ರಬಂಧಿಸಿದ ||೨೧||

ಕೋಣಷಟ್ಕದ ಮಧ್ಯಮುಖ್ಯ-
ಪ್ರಾಣದೇವನ ನಿಲಿಸಿ ವಲಯದಿ
ಮಾನದೆಲೆ ಕಪಿಕಟಕಬಂಧಿಸಿ ಬೀಜವರಣಗಳ
ಜಾಣುತನದಲಿ ಬರೆದು ತ್ರಿಜಗ-
ತ್ರಾಣನಲ್ಲೇ ನಿಲಿಸಿ ಪೂಜಿಸಿ
ಕ್ಷೋಣಿತಳದಲಿ ಕರ‍್ರೆದ ಯಂತ್ರೋದ್ದಾರ ನಾಮದಲಿ ||೨೨||

ದಿನದಿ ಚಕ್ರಸುತೀರ್ಥಸ್ನಾನವ
ಇನನ ಉದಯದಿ ಮಾಡಿ ಆಹ್ನಿಕ
ಮನದಿ ಬಿಂಬನ ಪೂಜೆಗೋಸುಕ ಪಿರಿಯ ಗುಂಡೇರಿ
ಪ್ರಣವ ಪೂರ್ವಕ ಕುಳಿತು ಆಸನೋಪರಿ
ಮನಸು ಪೂರ್ವಕ ಕುಳಿತು ಹರಿಪದ
ವನಜ ಭಜಿಸುತ ದಿನದಿ ಸಾಧನ ಘನವು ಮಾಡಿದನು ||೨೩||

ಈ ತೆರದಿ ಶಿರಿವ್ಯಾಸಮುನಿಯೂ
ವಾತದೇವನ ಭಜಿಸುತಿರಲಾ
ಭೂತಕಾಲದಲಿಂದ ಚಕ್ರಸುತೀರ್ಥದೊಳಗಿಪ್ಪ
ನೀತಸಿರಿಗುರು ಮಧ್ವರಾಯನ
ಈತ ಮೇಲಕೆ ತಂದು ಪೂಜಿಸಿ
ದಾತ ಗುರುಜಗನ್ನಾಥವಿಠಲ ಪ್ರೀತಿಗೊಳಗಾದ ||೨೪||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಐದನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Raja Gopal Stuti (ರ‍ಾಜಗೋಪಾಲ ಸ್ತುತಿ) by Sri Guru Raghavendra Swamy

ರ‍ಾಜಗೋಪಾಲ ಸ್ತುತಿ

ಹೃದಿ ಬೋಧದುಗ್ಧರಸವಾಸನಾಕೃತೇ
ಪರಿನಿರ್ಮಿತಾವಿವ ಪಯೋಜತಲ್ಲಣೌ
ಅಪವರ್ಗ ಮಾರ್ಗ ಪರಿ ಬೋಧನಾಯ ಮೇ
ಚರಣತವೇಶ ಕಿಮು ಚಿಹ್ನ ಪಲ್ಲವೌ ||೧||

ಉಪರಿ ಶ್ರಿತೇನ ಪುರತಶ್ಚ ನಶ್ವರ-
ವ್ಯವಹಾರದೊರಗಗಿರಾಮನಾರತಮ್
ಪ್ರಣವದ್ವಯೇನ ಮಣಿನೂಪುರಾತ್ಮನಾ
ಪರಿಕರ್ಮಿತೇ ತವ ಪದೇ ಪದೇ ಮುದಾಮ್ ||೨||

ರುಚಿವಾರಿಪೂನರುಚಿರಂ ಭುಜಾಂತರಂ
ಶಿಶಿರಂ ತಟ್ರ‍ಾಕಮವಗಾಹ್ಯ ತಾವಕಮ್
ತ್ಯಜತಿ ಶ್ರಮಂ ವ್ರಜತಿ ಹರ್ಷಮದ್ಯ ಮೇ
ಭವಘರ್ಮತಾಪಮಪನೀಯ ದೃಗ್ಗವೀ ||೩||

ಅರುಣಾಧರಂ ರತುಣಚಂದ್ರಸುಂದರಂ
ಕರುಣಾಧರಂ ವದನಮೀಶ ತಾವಕಮ್
ಸ್ಮಿತಕಾಂತಿಪೂನನವಚಂದ್ರಿಕಾಭರೈಃ
ಭವಶಾರ್ವರಂ ಕ್ಷಿಪತಿ ಭವ್ಯಚೇತಸಾಮ್ ||೪||

ಪರಿತಃ ಸ್ಥಿತೇಅಪಿ ಚ್ಕುರೌಘಶಾರ್ವರೈಃ
ವಿಲುಠದ್ಭಿರಾನನವಿಧೌ ವಿಧಾವಿತೇ
ತಿಲಕೇನ ನದ್ಧಕುಲಕೇನ (ಸಾದರಂ) ಸುಂದರಂ
ನ ಹಿ ವೇತ್ತಿ ಬಾಲತಮಮತ್ಯುದಾರಗೀಃ ||೫||

ಅಲಕಾವೃತಾಲಿಕಮುದಾರಮುನ್ನಸಂ
ಸ್ಮಿತಪುಲ್ಲಗಂಡತಲಮುಲ್ಲಸನ್ಮುಖಮ್
ದರವಾಮಭಾಗನತಮೌಲಿ ಮೋಹನಂ
ತವ ದೇವ ನೈವ ಹೃದಯಂ ಜಹಾತು ಮೇ ||೬|

ಇತಿ ಶ್ರೀ ಗುರು ರಾಘವೇಂದ್ರ ಯತಿ ವಿರಚಿತ ರ‍ಾಜಗೋಪಾಲ ಸ್ತುತಿ

%d bloggers like this: