Mundige’s (ಮುಂಡಿಗೆ) of Sri Kanakadasaru

Kanakadasaru lived around 1508 – 1606, His birth name was Thimmappa Nayaka, but was well know as Kanakappa Nayak.

Here is the list of his Great Works / ಇವರ ಕೃತಿಗಳು :
1. Nala Charitra – consists of 481 padyas, ೧. ನಳಚರಿತ್ರೆ – 481 ಪದ್ಯಗಳು ನಳ ದಮಯಂತಿ ಕುರಿತಾದ ಕಥಾ ಚಿತ್ರಣ.
2. Haribhakti Saara – consists of 110 padyas and authored in Bhamini Shatpadi, ೨. ಹರಿಭಕ್ತಿಸಾರ – 110 ಪದ್ಯಗಳ ಭಾಮಿನೀ ಷಟ್ಪದಿಯ ಹರಿಸರ್ವೋತ್ತಮ ಸಾಧಕ ಕೃತಿ .
3. Nrusimha Sthava (Unavailable currently) ೩. ನೃಸಿಂಹಸ್ತವ (ಲಭ್ಯವಿಲ್ಲ)
4. Rama Dhyana Charite ೪. ರಾಮಧಾನ್ಯ ಚರಿತೆ – ಪ್ರಾಮುಖ್ಯತೆಯಲ್ಲಿ ರಾಗಿ ಹೆಚ್ಚೋ ಅಕ್ಕಿ ಹೆಚ್ಚೋ ಎಂದು ಶ್ರೀರಾಮಚಂದ್ರನ ಮುಂದೆ ಹೋದಾಗ ರಾಮಚಂದ್ರ ರಾಗಿಯೇ ಅಕ್ಕಿಗಿಂತ ಹೆಚ್ಚು ಉಪಯೋಗಿ ಎಂದನಂತೆ.
5. Mohana Tarangini in 42 chapters and 2798 padyas, ೫. ಮೋಹಿನ ತರಂಗಿಣಿ – ಸುಮಾರು 42 ಸಂಧಿಗಳಿರುವ 2798 ಪದ್ಯಗಳಿವೆ ಬೃಹತ್ ಶ್ರೀ ಕೃಷ್ಣ ಕಥಾ. ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.
6. Mundige (Riddle Padyas) ೬. ಮುಂಡಿಗೆಗಳು
7. Devara Namas, ೭. ದೇವರನಾಮಗಳು 300 +
8. Tattva Padas, ೮. ತತ್ವಪದಗಳು.

Mundige/Mudige/odasu/beragina haadu is a Haridasa Sahitya style, and Sri Kanakadasaru was a stalwart in it. He followed in the footsteps of his Guru Sri Vyasaraja Teertha and his contemporaries such as Sri Purandaradasaru. These mundiges are challenging to understand, and scholars must use their brain power to decipher the songs. These songs appear simple and have two/three meanings on the surface.

Here are few Mundiges by Sri Kanakadasaru:

  • ಬಾಯೊಳಗಿಹ ಗಂಡನ ನಿಜ ತಮ್ಮನ ತಾಯಿ ಪಿತನ ಮಡದಿಯ ಧರಸಿದನ
  • ಶೇಷಶಯನ ನಿಮ್ಮ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು
  • ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
  • ಬಲ್ಲವರು ಪೇಳಿರಿ ಲೋಕದ ಈ ಪದವನು.. ಗರಿಯುಂಟು ನೋಡಿದರೆ ಪರಕಿಕುಲತಾನಲ್ಲ, ಧರೆಯ ಬೆನ್ನಲಿ ಶಿರವ ಮಾಡಗಿ ಕೊಂಡಿಹುದು
  • ಮಗುವಿನ ಮರುಳಿದು ಬಿಡದಲ್ಲಿ .. ಈ ಜಗದೊಳು ಪಂಡಿತರಿದ ಬಿಡಿಸಿ .. ನಿರನು ಕಂಡರೆ ಮುಳುಗಿತಿದೆ ಮೋರೆಯ ತೋರದೆ ಓಡುತಿದೆ
  • ಕೆಂಪುಮೂಗಿನ ಪಕ್ಷಿ ತಂಪಿನೊಳಯಿರುವುದು ನೆಂಪು ಬಲ್ಲವರು ಪೇಳಿ
  • ತೋರೆ ಬೇಗನೇ ಸಖಿ ತೋರೆ, ಮುತ್ತಿನ ಹಾರ ಭಾರವಾಗಿದೆ ಎನಗೆ
  • ಮರನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಇದರ ಕುರುಹು ಕೇಳಿ ಕುಳಿತಿದ್ದ ಜನರು
  • ಕೊಟ್ಟಿಗೆಯೊಳಗೆ ಎಂಟು ಆನೆ ಮನೆಯ ಒಳಗೆ ಏಳು ಕುದುರೆ
  • ಎನಿದೆತ್ತಣ ಬಯಕೆ ಎಲೊ ಮಂಕುಜೀವ ನೀನು ಅರಿತರೆ ಪೇಳು ನಿಜವನೆನೆಗೆ
  • ಏನೇ ಮನವಿತತೆಲಲಿತಾಂಗಿ ಅಸಮಾನಗೋವಳ ಕುಲವಿಲ್ಲದವನೋಳು
  • ಏಣನಯನೆ, ಏಣಭೋಜಮಧ್ಯಯಳೆ ತೊರೇ ಏಣಾಂಕಬಿಂಬಾಮುಖಿ
  • ಕರೆತಾರೆ ಕಾಮಿನಿ ಕಮಲಜಪಿತನ ಹರಿಯ ತೋರೆ ಸಾಸಿರನಾಮವುಳ್ಳವನ
  • ಪರಮಪುರುಷ ನೀ ನೆಲ್ಲಿಕಾಯಿ ಸಾರಸಿಯೊಳಗೆ ಕರಿ ಕೂಗಿರೆಕಾಯಿ
  • ರಾಜವಾದನೆ ಸುರರಾಜನ ಪುರದೊಳು ರಾಜಿಸುತಿಹ ಕುಜವ .. ನೆತ್ತಿಯಿಂದಿಳಿದಳ ಹೆತ್ತಮಗನ ಮೊಮ್ಮಗನ ಎತ್ತಿದಾತನ
  • ಪುಟ್ಟದಾಸನು ನಾನಲ್ಲ ದಿಟ್ಟ ದಾಸನು ನಾನಲ್ಲ
  • ಕಯೋ ಕರುಣಕಾರನೆ .. ಎಣ್ಣೆಕೊಪ್ಪರಿಗೆಯೊಳಬಿದ್ದು ಸ್ತುತಿಸಿದವನಲ್ಲ

Let’s take a closer look at a couple of these riddle songs and learn a few of their meanings.

ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚಂದದಿ ಪಡೆದವನ ನಂದನೆಯಳ ನಲ
ವಿಂದ ಧರಿಸಿದ ಮುಕುಂದನಿಗೆ ||

ರಥವನಡರಿ ಸುರ ಪಥದಲಿ ತಿರುಗುವ
ನಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತನ
ಸತಿಯರನಾಳಿದ ಚತುರನಿಗೆ ||

ಹರಿಯ ಮಗನ ಶಿರ ತರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭುಜಿಸಿದವನ ಶಿರದಲಿ ನಟಿಸಿದ
ವರ ಕಾಗಿನೆಲೆಯಾದಿಕೇಶವಗೆ ||

In this charana, Dasaru recalls Mahabharatha and Purana stories while seeking refuge at the lotus feet of Sri Hari. Andhakananujana refers to Pandu raja, the blind king of Dhritarashtra’s brother, while Kandana refers to Dharmaraja (son of Pandu) tandeye refers to Yamadharma. Kondana (Shiva/Eshwara-reminds us of Markandeya’s story) Siradali nindavana means “one who adores Shiva’s head – Moon”. Candadi padedavana means “Samudra” and refers to Moon’s birth story. nandaneyala means Lakshmi, as she is Samudra’s daughter (Samudra Mathana Story). nalavinda dharisida means Sri Lakshmidevi is in the vakshasthala of Mukundage means to Sri Hari || 1 ||

The term Rathavanadari sura pathadali tiruguvana refers to the Sun, who provides for the three worlds.
Sutanige refers to Karna, while sapava nittavana refers to Lord Parushurama (Parashurama curses Karna for lying about his identity). Parashurama concludes that Karna must be a Kshatriya after witnessing evidence of his pain-bearing ability. Outraged by this deception, Parashurama curses Karna with forgetting everything he has learned exactly when he needs it the most.)
Padedana Katiyanu (Sri Rama – faces the anger of Parashurama for breaking Shivadanush) Satiya denotes Ma Sita, janani denotes Bhudevi, and sutana denotes Narakasura Satiyaranalida caturana refers to Krishna, who rescued 16K women from the clutches of the evil narakasura and married them in order to protect the women from ill repute. || 2 ||

Hariya here refers to Surya, magana means Karna, Sirana taridana means Arjuna (Who killed Karna in the kurukshetra battle) tandeya refers to Pandu raja. Hiriya magana here refers to Dharmaraja (Born to Pandu’s wife Kunti) tamana means Bhima (Younger to Dharmaraja) pitana here refers to Vayudeva Baradi Bujisidavana meas Snake -sarpa and Siradali natisida refers to Sri Krishna and reminds us the episode of Kalingamardana Vara neleyadikesavage (Hari, Rama, Krishna all are none other than Adikeshava who resides in Kaginele|| 3 ||

Let’s look at yet another mundige:

ಬಾಯೊಳಗಿಹಳ ಗ೦ಡನ ನಿಜ ತಮ್ಮನ
ತಾಯಿ ಪಿತನ ಮಡದಿಯ ಧರಿಸಿದನ
ಸ್ತ್ರೀಯ ಸುತನ ಕೈಯಲಿ ಶಾಪ ಪಡೆದನ
ದಾಯಾದ್ಯನ ಮಗನ ||

ಸಾಯಕವದು ತೀವ್ರದಿ ಬರುತಿರೆ ಕ೦ಡು
ಮಾಯಾಪತಿ ಭೂಮಿಯನೊತ್ತಿ ತನ್ನಯ
ಬೀಯಗನ ತಲೆಗಾಯಿದ೦ಥ
ರಾಯನ ಕರೆದು ತೋರೆ ||

ನಾಲಗೆ ಎರಡರವನ ಭುಂಜಿಸುವನ
ಮೇಲೇರಿಬಹನ ತಂದೆಯ ಇಹಗಿರಿಯನು
ಲೀಲೆಯಿಂದಲಿ ಕಿತ್ತೆತ್ತಿದ ಧೀರನ
ಕಾಳಗದಲ್ಲಿ ಕೊಂದನ ||

ಲೋಲ ಲೋಚನೆಯ ಮಾತೆಯ ಪುತ್ರನಣುಗನ
ಮೇಲುಶಕ್ತಿಗೆ ಉರವಾಂತು ತನ್ನವರನ್ನು
ಪಾಲಿಸಿದಂಥ ದಾತನಹ ದೇವನ
ಲೋಲೆ ನೀ ಕರೆದು ತೋರೆ ಆದಿಕೇಶವನ ||

bayolagihaLa – Saraswathi (Vagabhimani), gandana – Brahma (her Spouse), nija tammana – real brother (Kaama, another son of Vishnu), taayi – Lakshmi (mother of kaama – consort of Vishnu), pitana – samudraraja (father of Lakshmi), madadiya – Ganga (wife of samudra/varuna), dharisidhana – Shiva (The holy Ganga river is held in the mass of his hair), striya – parvati (wife of Shiva), sutana – ganesha, kaiyali shaapa padedana – moon (one who got curse form Ganesha), daayadhyana – Sun (Surya – a paternal relative who is a cousin brother) magana – karna (Suryaputra) ||

saayakavadu – Nagastra (Nagastra one of the weapon mastered by Karna) coming fiercely at Arjuna. Maayapati – Krishna (Spouse of maya) pressed the chariot to ground by foot and protected the head of his brother-in-law biyagana – Arjuna. Show me such a great personality of godhead Sri Krishna ||

naalage erdaravana – Snake (which has two tounges) bhunjisuvana – peacock, meleribahana – Shanmukha ( one who rides peacock), tandeya – shiva, ihagiriyanu – Kailasa mountain (where Shiva and his Parivar resides), leelyindali kittetida dheerana – Ravana ( one who uprooted Kailasa with ease), kalagadali kondana – Sri Rama (one who killed Ravana in the war) ||

lolalochaneya – Janaki (spouse of Sri Rama), mateya – bhudevi, putra – Narakasura, anuga – bhagadatta (son of Naraka), melushaktige – Vaishnavastra/Varahastrra, uravaantu tannavarannu – Pandavas, paalisdantha daatanaha devana – protector (Krishna), Please show me such a personality called AdiKeshava.

Let’s look at another mundige:

ಮಗುವಿನ ಮರುಳಿದು ಬಿಡದಲ್ಲ ||
ಈ ಜಗದೊಳು ಪಂಡಿತರಿದ ಬಿಡಿಸಿ ||

ನೀರನು ಕಂಡರೆ ಮುಳುಗುತಿದೆ (Matsya avatara), ತನ್ನ
ಮೋರೆಯ ತೋರದೆ ಓಡುತಿದೆ (Kurma – hiding it’ s face in its shell)
ದಾರಿಗೆ ಅಲ್ಲಲ್ಲಿ ಅಳೆಯುತಿದೆ (Varaha Avatara), ದೊಡ್ಡ
ಭೈರವಾತಾರದಿ ಅದು ಕೂಗುತಿದೆ (Narasimha) ||1||

ಪೊಡವಿಯ ಕೊಟ್ಟರೆ ಬಿಸುಡುತಿದೆ (vamana/trivikrama), ತನ್ನ
ಕೊಡಲಿಯೊಳು ಭೂಪರ ಕಡಿಯುತಿದೆ (Parashurama – mercilessly killing all kings)
ಅಡವಿ ಕೋತಿಗಳ ಕೂಡುತಿದೆ (Raama – forming an army with the help of Vanaras), ಚೆಲ್ವ
ಮಡದಿಯರನು ಹಿಡಿದೆಳೆಯುತಿದೆ (Sri Krishna) ||2||

ಉಟ್ಟಿದ್ದ ವಸ್ತ್ರವ ಬಿಸುಡುತಿದೆ (Buddha Avatara – going naked to attract women of Tripura), ತನ್ನ
ದಿಟ್ಟ ತೇಜಿಯನೇರಿ ನಲಿಯುತಿದೆ (Kalki – riding on horse)
ಸೃಷ್ಟಿಯೊಳು ಭೂಸುರರ ಪೊರೆವ ಜಗ (Protecting all pious)
ಜಟ್ಟಿಯಾದಿ ಕೇಶವ ರಾಯನಂತೆ ( he is none other than Adi Keshava)||3||

When I get time I will try to publish more mundige.

Leave a comment